ಮೊಟೊರೊಲಾದಿಂದ ಮತ್ತೆರಡು ಸ್ಟೈಲಿಶ್ ಸ್ಮಾರ್ಟ್ ಫೋನ್

By Super
|
ಮೊಟೊರೊಲಾದಿಂದ ಮತ್ತೆರಡು ಸ್ಟೈಲಿಶ್ ಸ್ಮಾರ್ಟ್ ಫೋನ್

ಮೊಟೊರೊಲಾ ಪರಿಚಯಿಸಿರುವ ಮೊಟೊರೊಲಾ ಪ್ರೊ ಪ್ಲಸ್ ಮತ್ತು ಮೊಟೊರೊಲಾ ಡೆಫಿ ಪ್ಲಸ್ ತುಂಬಾ ಸ್ಟೈಲಿಶ್ ಲುಕ್ ಪಡೆದುಕೊಂಡಿವೆ. ಎರಡೂ ಮೊಬೈಲ್ ಗಳು ಆಂಡ್ರಾಯ್ಡ್ ಬೆಂಬಲಿತವಾಗಿದ್ದು, ಒಂದು ಮೊಬೈಲ್ ಪೂರ್ಣ ಟಚ್ ಸ್ಕ್ರೀನ್ ಆದರೆ ಮತ್ತೊಂದರಲ್ಲಿ ಕ್ವೆರ್ಟಿ ಕೀ ಪ್ಯಾಡ್ ಆಯ್ಕೆಯಿದೆ.

ಮೊಟೊರೊಲಾ ಪ್ರೊ ಪ್ಲಸ್ ಮತ್ತು ಮೊಟೊರೊಲಾ ಡೆಫಿ ಪ್ಲಸ್ ಮೊಬೈಲ್ ಗಳು ಜಿಂಜರ್ ಬ್ರೆಡ್ ಎಂದು ಕರೆಯಲ್ಪಡುವ 2.3 ಆಯಾಮದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ. ಎರಡೂ ಮೊಬೈಲ್ ಗಳಲ್ಲಿಯೂ ಅನೇಕ ಸಾಮ್ಯತೆಗಳೂ ಇವೆ. ಈಗ ಪ್ರತ್ಯೇಕವಾಗಿ ಈ ಮೊಬೈಲ್ ಗಳ ಗುಣವಿಶೇಷಣವನ್ನು ತಿಳಿಯೋಣ.

ಮೊಟೊರೊಲಾ ಪ್ರೊ ಪ್ಲಸ್ ಮೊಬೈಲ್ 3.1 ಇಂಚಿನ ಡಿಸ್ಪ್ಲೇ ಜೊತೆ ಕ್ವೆರ್ಟಿ ಕೀ ಪ್ಯಾಡ್ ಪಡೆದುಕೊಂಡಿದೆ. 130 ಗ್ರಾಂ ತೂಕವಿರುವ ಈ ಮೊಬೈಲ್ 119.5 x 62 x 11.65 ಎಂಎಂ ಸುತ್ತಳತೆ ಹೊಂದಿದೆ. ಮೊಟೊರೊಲಾ ಡೆಫಿ ಪ್ಲಸ್ ಮೊಬೈಲ್ 3.7 ಇಂಚಿನ ಡಿಸ್ಪ್ಲೇ ಹೊಂದಿದ್ದು, 118 ಗ್ರಾಂ ತೂಕ ಪಡೆದುಕೊಂಡಿದೆ. 107 x 59 x 13.4 ಎಂಎಂ ಸುತ್ತಳತೆ ಈ ಮೊಬೈಲ್ ದಾಗಿದೆ.

ಎರಡರಲ್ಲೂ ಸಂಪರ್ಕಕ್ಕೆಂದು ಬ್ಲೂಟೂಥ್, ವೈ-ಫೈ ನೀಡಲಾಗಿದೆ. ಮೀಡಿಯಾ ಪ್ಲೇಯರ್ ನೊಂದಿಗೆ ಇನ್ನಿತರ ಸಾಮಾಜಿಕ ತಾಣಗಳ ಅಪ್ಲಿಕೇಶನ್ ಕೂಡ ಇದೆ. ನೀವು ಕ್ವೆರ್ಟಿ ಕೀ ಪ್ಯಾಡ್ ಬಯಸುವುದಾದರೆ ಮೊಟೊರೊಲಾ ಪ್ರೊ ಪ್ಲಸ್ ಮೊಬೈಲ್ ಸೂಕ್ತ. ಫುಲ್ ಟಚ್ ಸ್ಕ್ರೀನ್ ಬಯಸುವುದಾದರೆ ಮೊಟೊರೊಲಾ ಡೆಫಿ ಪ್ಲಸ್ ಒಳ್ಳೆ ಆಯ್ಕೆ.

ಮೊಟೊರೊಲಾ ಡೆಫಿ ಪ್ಲಸ್ ಮೊಬೈಲ್ 1700 mAh ಬ್ಯಾಟರಿ ಹೊಂದಿದ್ದು, 6.8 ಗಂಟೆ ಟಾಕ್ ಟೈಂ ಮತ್ತು 9.9 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಮೊಟೊರೊಲಾ ಪ್ರೊ ಪ್ಲಸ್ ಮೊಬೈಲ್ 1550 mAh ಬ್ಯಾಟರಿ ಹೊಂದಿದ್ದು, 480 ನಿಮಿಷ ಟಾಕ್ ಟೈಂ ಮತ್ತು 325 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

ಮೊಟೊರೊಲಾ ಡೆಫಿ ಪ್ಲಸ್ ಮೊಬೈಲ್ 19,000 ರೂ ಆಗಿದ್ದರೆ ಮೊಟೊರೊಲಾ ಪ್ರೊ ಪ್ಲಸ್ ಮೊಬೈಲ್ ಡೆಫಿ ಮೊಬೈಲ್ ಗಿಂತ ಸ್ವಲ್ಪ ಕಡಿಮೆಯೆಂದು ತಿಳಿದುಬಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X