Subscribe to Gizbot

ಮೊಟೊ ಜಿ6 ಸರಣಿಯ 3 ಸ್ಮಾರ್ಟ್‌ಫೋನ್‌ಗಳ ಮಾಹಿತಿ ಲೀಕ್!..ಶೀಘ್ರದಲ್ಲಿಯೇ ಮಾರುಕಟ್ಟೆಗೆ!!

Written By:

ಮೊಟೊ ಜಿ5 ಸರಣಿ ಸ್ಮಾರ್ಟ್‌ಫೋನ್‌ಗಳ ನಂತರ ಭಾರೀ ಕುತೋಹಲ ಹುಟ್ಟಿಸಿರುವ ಮೊಟೊ ಜಿ6 ಸರಣಿ ಸ್ಮಾರ್ಟ್‌ಫೋನ್‌ಗಳು ಶೀಗ್ರದಲ್ಲಿಯೇ ಮಾರುಕಟ್ಟೆಗೆ ಕಾಲಿಡಲಿವೆ. ಮೊಟೊರೊಲಾ ಕಂಪೆನಿ ಅಧಿಕೃತವಾಗಿ ಮೊಟೊ ಜಿ6 ಸರಣಿ ಸ್ಮಾರ್ಟ್‌ಫೋನ್‌ಗಳು ಪರಿಚಯಿಸುವ ಮೊದಲೇ ಆಂಡ್ರಾಯ್ಡ್ ಹೆಡ್‌ಲೈನ್ ವೆಬ್‌ಸೈಟ್ ಸ್ಮಾರ್ಟ್‌ಫೋನ್ ಫೀಚರ್ಸ್‌ಗಳ ಮಾಹಿತಿ ಲೀಕ್ ಮಾಡಿದೆ.

ಆಂಡ್ರಾಯ್ಡ್ ಹೆಡ್‌ಲೈನ್ ವೆಬ್‌ಸೈಟ್ ಬಿಡುಗಡೆ ಮಾಡಿರುವ ಮಾಹಿತಿಯಂತೆ ಮೊಟೊ ಜಿ6 ಸರಣಿ ಸ್ಮಾರ್ಟ್‌ಫೋನ್‌ಗಳ ಅಡಿಯಲ್ಲಿ ಮೊಟೊ ಜಿ6, ಮೊಟೊ ಜಿ6 ಪ್ಲೇ ಮತ್ತು ಮೊಟೊ ಜಿ6 ಪ್ಲಸ್‌ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ ಎಂದು ತಿಳಿಸಿದೆ. ಇಷ್ಟು ಮಾತ್ರವಲ್ಲದೇ, ಮೊಟೊ ಜಿ6 ಸರಣಿಯ ಮೂರು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಎಲ್ಲವನ್ನು ಪ್ರಕಟಿಸಿದೆ.

ಮೊಟೊ ಜಿ6 ಸರಣಿಯ 3 ಸ್ಮಾರ್ಟ್‌ಫೋನ್‌ಗಳ ಮಾಹಿತಿ ಲೀಕ್!!

ಆಂಡ್ರಾಯ್ಡ್ ಹೆಡ್‌ಲೈನ್ ಸೈಟ್ ನಿಡಿರುವ ಮಾಹಿತಿಯಂತೆ "ಮೊಟೊ ಜಿ6 ಪ್ಲೇ" 4000mAh ಬ್ಯಾಟರಿಯನ್ನು ಹೊಂದಿದೆಯಂತೆ, ಮೊಟೊ ಜಿ6 ಮತ್ತು ಮೊಟೊ ಜಿ6 ಪ್ಲಸ್‌ ಸ್ಮಾರ್ಟ್‌ಫೋನ್‌ಗಳು ಕ್ರಮವಾಗಿ 3000mAh ಹಾಗೂ 3200mAhಬ್ಯಾಟರಿ ಶಕ್ತಿಯನ್ನು ಹೊಂದಿವೆಯಂತೆ. ಹಾಗಾದರೆ, ಮೊಟೊ ಜಿ6 ಸರಣಿ ಸ್ಮಾರ್ಟ್‌ಫೋನ್‌ಗಳು ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಟೊ ಜಿ6

ಮೊಟೊ ಜಿ6

ಮೊಟೊ ಜಿ6 ಸ್ಮಾರ್ಟ್‌ಫೋನ್ 5.7 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 450 ಚಿಪ್ಸೆಟ್, 3 ಜಿಬಿ/ ಜಿಬಿ ರಾಮ್ ಮತ್ತು 32 ಜಿಬಿ / 64 ಜಿಬಿ ಆಂತರಿಕ ಮೆಮೊರಿ, 12 ಎಂಪಿ + 5 ಎಂಪಿ ರಿಯರ್ ಡ್ಯುಯಲ್ ಕ್ಯಾಮೆರಾಗಳು 16 ಎಂಪಿ ಸೆಲ್ಫಿ ಕ್ಯಾಮೆರಾ ಹಾಗೂ 3,000 mAh ಬ್ಯಾಟರಿ ಫೀಚರ್ಸ್ ಈ ಫೋನಿನಲ್ಲಿರಲಿವೆ.

ಮೊಟೊ ಜಿ6 ಪ್ಲೇ

ಮೊಟೊ ಜಿ6 ಪ್ಲೇ

ಮೊಟೊ ಜಿ6 ಪ್ಲೇ 18: 9 ಆಕಾರ ಅನುಪಾತದ 5.7 ಇಂಚಿನ ಹೆಚ್‌ಡಿ+ (1440x720p) ಡಿಸ್‌ಪ್ಲೇ ಹೊಂದಿರಲಿದೆ ಎಂದು ಹೇಳಲಾಗಿದೆ. 4000mAh ದೊಡ್ಡ ಬ್ಯಾಟರಿ, 2 ಜಿಬಿ / 3 ಜಿಬಿ RAM, 16 ಜಿಬಿ / 32 ಜಿಬಿ ಶೇಖರಣಾ ಹಾಗೂ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 427 ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಮೊಟೊ ಜಿ6 ಪ್ಲೇ ಸ್ಮಾರ್ಟ್‌ಫೋನ್ ಹೊಂದಿರಲಿದೆ ಎಂದು ಹೇಳಲಾಗಿದೆ.

ಮೊಟೊ ಜಿ6 ಪ್ಲಸ್

ಮೊಟೊ ಜಿ6 ಪ್ಲಸ್

ಮೋಟೋ ಜಿ 6 ಪ್ಲಸ್ 18: 9 ಆಕಾರ ಅನುಪಾತದ 5.93-ಇಂಚಿನ ಪೂರ್ಣ ಹೆಚ್‌ಡಿ+ (2160x1080p) ಡಿಸ್‌ಪ್ಲೇ ಹೊಂದಿರಲಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 630 ಪ್ರೊಸೆಸರ್, 3 ಜಿಬಿ / 4 ಜಿಬಿ / 6 ಜಿಬಿ ರಾಮ್ ಮತ್ತು 32 ಜಿಬಿ / 64 ಜಿಬಿ ಸ್ಟೋರೇಜ್, ಡ್ಯುಯಲ್ 12 ಎಂಪಿ + 5 ಎಂಪಿ ಹಾಗೂ 16 ಎಂಪಿ ಫ್ರಂಟ್ ಕ್ಯಾಮೆರಾ ಮತ್ತು 3,200 mAh ಬ್ಯಾಟರಿಯನ್ನು ಹೊಂದಿರಲಿದೆ.

ಜಿ6 ಸರಣಿ ಫೋನ್‌ಗಳ ಬಿಡುಗಡೆ?

ಜಿ6 ಸರಣಿ ಫೋನ್‌ಗಳ ಬಿಡುಗಡೆ?

ಆಂಡ್ರಾಯ್ಡ್ ಹೆಡ್‌ಲೈನ್ ವೆಬ್‌ಸೈಟ್ ಬಿಡುಗಡೆ ಮಾಡಿರುವ ಮಾಹಿತಿಯಂತೆ ಮೊಟೊ ಜಿ6 ಸರಣಿ ಸ್ಮಾರ್ಟ್‌ಫೋನ್‌ಗಳ ಅಡಿಯಲ್ಲಿ ಮೊಟೊ ಜಿ6, ಮೊಟೊ ಜಿ6 ಪ್ಲೇ ಮತ್ತು ಮೊಟೊ ಜಿ6 ಪ್ಲಸ್‌ ಸ್ಮಾರ್ಟ್‌ಫೋನ್‌ಗನ್ನು ಲೆನೊವೊ ಇದೇ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆಯಂತೆ. ಹಾಗಾಗಿ, ಶೀಘ್ರವೇ ಮೊಟೊ ಜಿ6 ಗ್ರಾಹಕರ ಕೈ ಸೇರುವ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು.

ಓದಿರಿ:2 ದಿನಗಳ ಶಿಯೋಮಿ 'ಮಿ ಫ್ಯಾನ್ ಫೆಸ್ಟಿವಲ್' ಆರಂಭ!..ಗ್ರಾಹಕರಿಗೆ ಬಂಪರ್ ಆಫರ್ಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Moto G6 Play specification revealed ahead of launch.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot