Home
ಮೊಬೈಲ್

Motorola: ದೈತ್ಯ ಫೋನಿನ ಸೇಲ್ ಶುರು: ಅಬ್ಬಾ ಎಂಥಾ ಫೀಚರ್ಸ್‌.. ಬೆಲೆ ನೋಡಿ

ಮೊಟೊರೊಲಾ (Motorola) ಕಂಪನಿಯು ಇತ್ತೀಚೆಗೆ ಬಹುನಿರೀಕ್ಷಿತ ಮೊಟೊರೊಲಾ ರೇಜರ್‌ 50 (Motorola Razr 50) ಮೊಬೈಲ್‌ ಅನ್ನು ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು ಫ್ಲಿಪ್‌ (Flip) ಮಾದರಿಯ ಫೋನ್‌ ಆಗಿದೆ ವಿಶೇಷವೆಂದರೆ, ಈ ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 7300X ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ ಒಳಗೊಂಡಿರುವುದು ಹೈಲೈಟ್‌ ಅಂಶಗಳಲ್ಲಿ ಒಂದಾಗಿದೆ. ಇದು ಬಾಹ್ಯ ಕವರ್‌ ಸ್ಕ್ರೀನ್‌ 3.6 ಇಂಚಿನ ರಚನೆ ಪಡೆದಿದೆ. ಅಂದಹಾಗೆ, ಈ ಫೋನ್‌ ಇಂದಿನಿಂದ (ಸೆಪ್ಟೆಂಬರ್ 20) ಖರೀದಿಗೆ ಲಭ್ಯವಿದೆ.

ಹೌದು, ಮೊಟೊರೊಲಾ ಮೊಬೈಲ್‌ ಸಂಸ್ಥೆಯ ಮೊಟೊರೊಲಾ ರೇಜರ್‌ 50 (Motorola Razr 50) ಫ್ಲಿಪ್‌ ಫೋನ್ ಇಂದು ತನ್ನ ಮೊದಲ ಮಾರಾಟ ಶುರು ಮಾಡಿದೆ. ಈ ಫೋನ್ IPX8 ಅಂಡರ್ ವಾಟರ್‌ ರೇಟಿಂಗ್ ಆಯ್ಕೆಗಳನ್ನು ಹೊಂದಿದ್ದು, ಮೊಟೊ ಎಐ ಸೌಲಭ್ಯ ಸಹ ಪಡೆದಿದೆ. ಜೊತೆಗೆ, ಈ ಫೊನಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇದೆ. ಇನ್ನು ಇದರ ಸೆಲ್ಫಿ ಕ್ಯಾಮೆರಾವು 32 ಮೆಗಾಪಿಕ್ಸಲ್‌ ಆಗಿದೆ.

Motorola: ದೈತ್ಯ ಫೋನಿನ ಸೇಲ್ ಶುರು: ಅಬ್ಬಾ ಎಂಥಾ ಫೀಚರ್ಸ್‌.. ಬೆಲೆ ನೋಡಿ

ಈ ನೂತನ ಫೋನ್‌ 4,200mAh ಡ್ಯುಯಲ್ ಸೆಲ್ ಬ್ಯಾಟರಿ ಬ್ಯಾಕಪ್ ಪಡೆದಿದ್ದು, ಇದಕ್ಕೆ ಪೂರಕವಾಗಿ 33W ವೈರ್ಡ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಸಹ ಹೊಂದಿದೆ. ಈ ಹೊಸ ಫೋನ್‌ ಕೋಲಾ ಗ್ರೇ, ಬೀಚ್ ಸ್ಯಾಂಡ್ ಮತ್ತು ಸ್ಪ್ರಿಟ್ಜ್ ಆರೆಂಜ್‌ ಕಲರ್‌ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಬನ್ನಿ, ಹೊಸ ಮೊಟೊರೊಲಾ ರೇಜರ್‌ 50 ಫೋನಿನ ಬೆಲೆ ಮತ್ತು ಫೀಚರ್ಸ್‌ಗಳನ್ನು ಈ ಲೇಖನದಲ್ಲಿ ತಿಳಿಯೋಣ.

ಭಾರತದಲ್ಲಿ ಮೊಟೊರೊಲಾ ರೇಜರ್‌ 50 ಬೆಲೆ

ಮೊಟೊರೊಲಾ ರೇಜರ್‌ 50 ಸ್ಮಾರ್ಟ್‌ಫೋನ್ ಕೇವಲ 8GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯಲ್ಲಿ ಮಾರಾಟವಾಗಲಿದೆ. ಇದರ ಬೆಲೆ 64,999 ರೂ. ಆಗಿದೆ. ಇನ್ನು, ಈ ಫೋನ್‌ ಇಂದಿನಿಂದ (ಸೆಪ್ಟೆಂಬರ್ 20 ರಂದು) ಖರೀದಿಗೆ ಲಭ್ಯವಿದೆ. ನೀವು, ಅಮೆಜಾನ್, ಮೊಟೊರೊಲಾ ಇಂಡಿಯಾದ ವೆಬ್‌ಸೈಟ್ ಹಾಗೂ ಪ್ರಮುಖ ರೀಟೆಲ್ ಸ್ಟೋರ್‌ಗಳಿಂದ ಖರೀದಿಸಲು ಸಾಧ್ಯವಾಗುತ್ತದೆ.

ಮೊಟೊರೊಲಾ ರೇಜರ್‌ 50 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಮೊಟೊರೊಲಾ ರೇಜರ್‌ 50 ಫೋನ್ 6.9 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು pOLED ಮಾದರಿಯಲ್ಲಿ ಇದೆ. ಇದರ ಡಿಸ್ಪ್ಲೇಯು 1,080 x 2,640 ಪಿಕ್ಸೆಲ್‌ ರೆಸಲ್ಯೂಶನ್ ಸೌಲಭ್ಯದಲ್ಲಿ ಇದೆ. ಜೊತೆಗೆ, ಇದರ ಕವರ್‌ ಡಿಸ್ಪ್ಲೇಯು 3.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ pOLED ಮಾದರಿಯಲ್ಲಿದೆ. ಇದು 1,080 x 2,640 ಪಿಕ್ಸೆಲ್‌ ರೆಸಲ್ಯೂಶನ್ ಸೌಲಭ್ಯದಲ್ಲಿ ಬರುತ್ತದೆ.

ಪ್ರೊಸೆಸರ್‌: ಮೊಟೊರೊಲಾ ರೇಜರ್‌ 50 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 7300X ಪ್ರೊಸೆಸರ್‌ನೊಂದಿಗೆ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಈ ಫೋನ್ 8GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ.

ಕ್ಯಾಮೆರಾ: ಮೊಟೊರೊಲಾ ರೇಜರ್‌ 50 ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಇದರ ಎರಡನೇ ಕ್ಯಾಮೆರಾವು 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಮುಂಭಾಗದಲ್ಲಿ 32 ಮೆಗಾಪಿಕ್ಸಲ್‌ ಕ್ಯಾಮೆರಾ ಇದೆ.

ಬ್ಯಾಟರಿ: ಮೊಟೊರೊಲಾ ರೇಜರ್‌ 50 ಫೋನ್ 4,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್‌ ಮಾಡಲು 33W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಸಹ ಲಭ್ಯವಿದೆ.

ಇತರೆ ಫೀಚರ್ಸ್‌: ಈ ಹೊಸ ಫೋನ್ IPX8 ನೀರು ಮತ್ತು ಧೂಳಿನ ಪ್ರತಿರೋಧ, ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಬ್ಲೂಟೂತ್ 5.4, ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಸಹ ಒಳಗೊಂಡಿದೆ.

Best Mobiles in India

English summary
Motorola Razr 50 First Sale in India Today via amazon: Price, Offer, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+