Motorola ಪ್ರಿಯರಿಗೆ ಹಬ್ಬ.. ಒಂದೇ ದಿನ ಮೂರು ಫೋನ್ ಲಾಂಚ್: 4 ವರ್ಷ ವಾರಂಟಿ ಪಕ್ಕಾ!
ಇದುವೇ ನೋಡಿ ಮೊಟೊರೊಲಾ ಮ್ಯಾಜಿಕ್..! ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಲು ಮೊಟೊರೊಲಾ ಸಜ್ಜಾಗಿದೆ. ಒಂದಲ್ಲ, ಎರಡಲ್ಲ.. ತನ್ನ ಗ್ರಾಹಕರಿಗೆ ಬರೋಬ್ಬರಿ ಮೂರು ಸಿಹಿ ಸುದ್ದಿ ನೀಡಿದೆ. ಹೌದು, ಮೊಟೊರೊಲಾ ಕಂಪನಿಯು ಜೂನ್ 25ರಂದು Motorola Razr 50 ಸರಣಿಯ ನೂತನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ. ಈ ಪೈಕಿ ಒಂದು ಫೋನ್ ಬರೋಬ್ಬರಿ 4 ವರ್ಷದ ವಾರಂಟಿಯೊಂದಿಗೆ ಲಾಂಚ್ ಆಗಲಿದೆ. ಇದು 4 ವರ್ಷಗಳ ವಾರಂಟಿಯೊಂದಿಗೆ ಲಾಂಚ್ ಆಗುತ್ತಿರುವ ವಿಶ್ವದ ಮೊದಲ ಫೋನ್ ಎನಿಸಿದೆ. ಇದು ಮೊಬೈಲ್ ಪ್ರಿಯರ ದಿಲ್ ಕದಿಯುವುದರಲ್ಲಿ ಡೌಟೇ ಇಲ್ಲ. ಹಾಗಿದ್ರೆ, Motorola ಎಷ್ಟು ಮೊಬೈಲ್‌ಗಳನ್ನು ಪರಿಚಯಿಸಲಿದೆ? ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು, ಮೊಟೊರೊಲಾ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಪ್ರಾಬಲ್ಯ ಸಾಧಿಸಿದೆ. ವಿಭಿನ್ನ ಹಾಗೂ ವಿಶೇಷ ಫಿಚರ್ಸ್‌ಗಳ ಹೊಚ್ಚ ಹೊಸ ಫೋನ್‌ಗಳೊಂದಿಗೆ ಮೊಬೈಲ್ ಪ್ರಿಯರನ್ನು ಸೆಳೆಯುತ್ತಿದೆ. ಇದೀಗ, Motorola Razr 50 ಸರಣಿಯ Razr 50, Razr 50 Ultra ಮತ್ತು Moto S50 Neo ಹೆಸರಿನ ನೂತನ ಮೊಬೈಲ್‌ಗಳ ಬಿಡುಗಡೆಗೆ ಸಜ್ಜಾಗಿದೆ. ಜೂನ್ 25 ರಂದು ಚೀನಾದಲ್ಲಿ ಈ ಫೋನ್‌ಗಳು ಲಾಂಚ್ ಆಗಲಿವೆ. ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳೇನು? ತಿಳಿಯೋಣ ಬನ್ನಿ.

Motorola Razr 50 ಸರಣಿಯ ವಿಶೇಷತೆಗಳು
ಮೊಟೊರೊಲಾ ಸರಣಿಯು Razr 50 ಮತ್ತು Razr 50 ಅಲ್ಟ್ರಾ ಎಂಬ ಹೆಸರಿನ ಎರಡು ಫೋಲ್ಡಬಲ್ ಫೋನ್‌ಗಳನ್ನು ಒಳಗೊಂಡಿರುತ್ತದೆ. ಈ ಸರಣಿಯು ಅಲ್ಟ್ರಾ ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. Razr 50 6.9-ಇಂಚಿನ pOLED 120Hz ಮುಖ್ಯ ಡಿಸ್ಪ್ಲೇ ಮತ್ತು 3.6-ಇಂಚಿನ OLED ಸೆಕೆಂಡರಿ ಸ್ಕ್ರೀನ್ ಅನ್ನು ಪಡೆದಿರಲಿದೆ. ಇದು 68W ಫಾಸ್ಟ್ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4200mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ.
ಅತ್ಯಾಕರ್ಷಕ ಕ್ಯಾಮೆರಾ ಸೆಟಪ್ ನಿರೀಕ್ಷೆ
ಮೊಟೊರೊಲಾ Razr 50 ಸರಣಿಯ ಫೋನ್‌ಗಳು 8GB RAM ಮತ್ತು 13MP ಸೆಕೆಂಡರಿ ಸಂವೇದಕದೊಂದಿಗೆ ಜೋಡಿಯಾಗಿರುವ 50MP ಮುಖ್ಯ ಕ್ಯಾಮರಾದೊಂದಿಗೆ ಬರಲಿವೆ. ಇಮೇಜಿಂಗ್‌ಗಾಗಿ, ಅಲ್ಟ್ರಾ ರೂಪಾಂತರವು 50MP ವೈಡ್-ಆಂಗಲ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ, 32MP ಫ್ರಂಟ್ ಕ್ಯಾಮೆರಾದೊಂದಿಗೆ ಜೋಡಿಸಲಾದ ಹಿಂಭಾಗದ ಪ್ಯಾನೆಲ್‌ನಲ್ಲಿ 50MP 2x ಟೆಲಿಫೋಟೋ ಲೆನ್ಸ್ ಇರಲಿದೆ. Razr 50 Ultraನಲ್ಲಿನ ಡಿಸ್ಪ್ಲೇ Motorola Razr 50ನಂತೆಯೇ ಇರುವ ಸಾಧ್ಯತೆಯಿದೆ.
ಈ ಫೋನ್ ಮೇಲೆ 4 ವರ್ಷ ವಾರಂಟಿ ಪಕ್ಕಾ!
ಮೊಟೊರೊಲಾ ಕಂಪನಿಯು ಮೊಟೊ ಎಸ್50 ನಿಯೋ ಫೋನ್ ಅನ್ನು 4 ವರ್ಷಗಳ ವಾರಂಟಿಯೊಂದಿಗೆ ಬಿಡುಗಡೆ ಮಾಡಲಿದೆ. ಇದು ಮೊಬೈಲ್ ಪ್ರಿಯರನ್ನು ಆಕರ್ಷಿಸುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ, ಮೊಟೊ S50 ನಿಯೋ 4 ವರ್ಷಗಳ ವಾರಂಟಿಯನ್ನು ನೀಡುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಪಡೆಯಲಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಚಾರದ ಪೋಸ್ಟರ್, 1 ವರ್ಷದ ವಾರಂಟಿ ಮತ್ತು ಪೂರಕವಾದ 3 ವರ್ಷದ ದೀರ್ಘಾವಧಿ ವಾರಂಟಿಯನ್ನು ಖಚಿತಪಡಿಸಿದೆ.

ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿ
ಈ ಹಿಂದೆ OnePlus, Lenovo, Xiaomi ಮತ್ತು ಇತರ ಕೆಲವು ಸ್ಮಾರ್ಟ್‌ಫೋನ್ ಕಂಪನಿಗಳು 2 ವರ್ಷದ ವಾರಂಟಿಗಳನ್ನು ಘೋಷಿಸಿವೆ. Meizuನ 20 ಮತ್ತು 21 ಸರಣಿಗಳು ಪ್ರಚಾರದ ಸಮಯದಲ್ಲಿ 3 ವರ್ಷದ ವಾರಂಟಿಗಳನ್ನು ನೀಡಿವೆ. ಇದೀಗ, ಮೊಟೊ ಎಸ್50 ನಿಯೋ ತನ್ನ 4 ವರ್ಷಗಳ ವಾರಂಟಿಯೊಂದಿಗೆ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಲು ಸಜ್ಜಾಗಿದೆ. ಲೀಕ್ ಆಗಿರುವ ಫೀಚರ್‌ಗಳು ಈ ಫೋನ್ ಬಗ್ಗೆ ಗ್ರಾಹಕರಲ್ಲಿ ನಿರೀಕ್ಷೆ ಹುಟ್ಟಿಸಿದೆ.
ಮಸ್ತ್ ಕ್ಯಾಮೆರಾ, ಸೂಪರ್ ಬ್ಯಾಟರಿ
ಮೊಟೊ ಎಸ್50 ನಿಯೋ 6.6 ಇಂಚಿನ OLED ಕರ್ವ್ಡ್-ಎಡ್ಜ್ ಡಿಸ್ಲ್ಪೇಯನ್ನು ಹೊಂದಿರಲಿದೆ. ಇದು FHD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಪಡೆದಿದೆ. ಜೊತೆಗೆ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ನೀಡುತ್ತದೆ. ಇದು ಹೊಸ ಮಧ್ಯಮ ಶ್ರೇಣಿಯ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಮತ್ತು 5000mAh ಬ್ಯಾಟರಿಯನ್ನು ಸ್ಲಿಮ್ 7.59mm ಹೊಂದಿರುವ ಸಾಧ್ಯತೆಯಿದೆ.
ಮೊಟೊ ಎಸ್50 ನಿಯೋ ಫೋನ್ 33W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ. 50 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾಗಳು, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮರಾ ಮತ್ತು ಆಂಡ್ರಾಯ್ಡ್ 14 ನಂತಹ ಇತರ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಕಪ್ಪು, ಹಸಿರು ಮತ್ತು ನೀಲಿ ಬಣ್ಣಗಳ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಮೊಟೊ S50 ನಿಯೋ ಸಂಪೂರ್ಣ ಫೀಚರ್ಸ್
- ಪ್ರೊಸೆಸರ್: SD 6s Gen 3
- ಡಿಸ್ಲ್ಪೇ: 6.6 ಪೋಲ್ಇಡಿ, 1600nits GG5 ಬ್ರೈಟ್‌ನೆಸ್, 92.7% Screen to Body Ratio
- ರಿಫ್ರೆಶ್ ದರ: 120Hz HDR10+ 10-ಬಿಟ್ DCI P3
- ಕ್ಯಾಮೆರಾ: 50MP f/1.8 IMX882, 8MP (UW + ಮ್ಯಾಕ್ರೋ), 32MP (ಫ್ರಂಟ್ ಕ್ಯಾಮೆರಾ)
- ಅಳತೆ: 7.59 ಮಿಮೀ
- ತೂಕ: 171 ಗ್ರಾಂ ತೂಕ
- ಸ್ಟೋರೇಜ್: 8/12GB RAM
- ಆಪರೇಟಿಂಗ್ ಸಿಸ್ಟಮ್: MyUI 7 (Android 14) ಮತ್ತು MotoAi
- ಬ್ಯಾಟರಿ: 5000mAh + 33W, 4 ವರ್ಷಗಳ ವಾರಂಟಿ
ಒಟ್ಟಾರೆ, ಮೊಟೊರೊಲಾ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಇದೀಗ Razr 50 ಸರಣಿಯ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಇದರಲ್ಲಿ ಮೊಟೊ ಎಸ್50 ನಿಯೋ ಮೊಬೈಲ್ ಪ್ರಿಯರ ದಿಲ್ ಖದಿಯುವುದರಲ್ಲಿ ಡೌಟೇ ಇಲ್ಲ. ಆದರೆ, ಮೊಟೊ ಎಸ್50 ನಿಯೋ ಮೊಬೈಲ್ ಮೇಲೆ 4 ವರ್ಷಗಳ ವಾರಂಟಿಯನ್ನು ಹೇಗೆ ಪಡೆಯುವುದು? ಅನ್ನೋದನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಈ ಫೋನ್‌ಗಳ ಫೀಚರ್ ಬಗ್ಗೆಯೂ ಮೊಟೊರೊಲಾ ಕಂಪನಿ ಅಧಿಕೃತ ಮಾಹಿತಿ ನೀಡಿಲ್ಲ.


Click it and Unblock the Notifications








