Home
ಮೊಬೈಲ್

Motorola; ಶೀಘ್ರದಲ್ಲೆ ಎಂಟ್ರಿ ಕೊಡಲಿದೆ ಮೊಟೊರೊಲಾ Razr 50; ಡಿಸೈನ್ ಹಾಗೂ ಫೀಚರ್ಸ್ ಲೀಕ್ !

ಮೊಟೊರೊಲಾ (Motorola) ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಭಾರಿ ಕ್ರೇಜ್‌ ಹೊಂದಿವೆ. ತನ್ನ ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮೊಟೊರೊಲಾ ಕಂಪೆನಿ ಸೈ ಎನಿಸಿಕೊಂಡಿದೆ. ಅದರಂತೆ ಇದೀಗ ಮೊಟೊರೊಲಾ ಕಂಪೆನಿ ಮೊಟೊರೊಲಾ Razr ಸರಣಿಯ ನೂತನ ಮೊಬೈಲ್‌ಗಳನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಮೊಟೊರೊಲಾ Razr 50 (Motorola Razr 50) ಮತ್ತು ಮೊಟೊರಲಾ Razr 50 ಅಲ್ಟ್ರಾ (Motorola Razr 50 Ultra) ಸರಣಿಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಮೊಬೈಲ್‌ಗಳನ್ನು ಯುಎಸ್ ಮತ್ತು ಕೆನಡಾ ಸೇರಿ ಕೆಲವು ಆಯ್ದ ಕೆಲವು ಮಾರುಕಟ್ಟೆಗಳಲ್ಲಿ Razr ಸರಣಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲವಾದರೂ ಟೀನಾ (TEENA) ನೀಡಿರುವ ಪಟ್ಟಿ ಮೂಲಕ ಈ ಮೊಬೈಲ್‌ಗಳ ಕುರಿತು ಲೈವ್ ಫೋಟೋ ಮತ್ತು ಕೆಲವು ಫೀಚರ್ಸ್‌ಗಳು ಹೊರ ಬಂದಿವೆ.

Motorola: ಶೀಘ್ರದಲ್ಲೆ ಎಂಟ್ರಿ ಕೊಡಲಿದೆ ಮೊಟೊರೊಲಾ Razr 50

ಮೊಟೊರೊಲಾ Razr 50 ನಿರೀಕ್ಷಿತ ಫೀಚರ್ಸ್‌ಗಳು:

ಟೀನಾ (TENAA) ಲಿಸ್ಟ್‌ ಪ್ರಕಾರ ಈ ನೂತನ ಮೊಬೈಲ್‌ XT2453-2 ಮಾದರಿ ಸಂಖ್ಯೆ ಹೊಂದಿದೆ, ಈ ಡಿವೈಸ್ 3.6-ಇಂಚಿನ OLED ಕವರ್ ಡಿಸ್‌ಪ್ಲೇ ಜೊತೆಗೆ 1,066x1056 ಪಿಕ್ಸೆಲ್ ರೆಸಲ್ಯೂಶನ್ ಮತ್ತು 6.9 ಇಂಚಿನ OLED ಫುಲ್ ಹೆಚ್‌ಡಿ+(1,080x2,640 ಪಿಕ್ಸೆಲ್‌ಗಳು) 120Hz ದರದ ಒಳಗಿನ ಪರದೆ ಹೊಂದಿದೆ ಎಂದು ತೋರಿಸಲಾಗಿದೆ.

ಅಲ್ಲದೆ ಈ ಸ್ಮಾರ್ಟ್‌ಫೋನ್ 8GB, 12GB, ಮತ್ತು 16GB RAM ಆಯ್ಕೆಗಳೊಂದಿಗೆ 128GB, 256GB, 512GB ಮತ್ತು 1TB ಯಷ್ಟು ಸ್ಟೋರೆಜ್ ಸಾಮರ್ಥ್ಯ ಹೊಂದಿರಲಿದೆ ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ. ಇದು ಮೀಡಿಯಾಟೆಕ್ (MediaTek) ಡೈಮೆನ್ಸಿಟಿ 7300X SoC ನಲ್ಲಿ ರನ್ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದೆ

ಟೀನಾ ತೋರಿಸಿರುವಂತೆ ಮೊಟೊರೊಲಾ Razr 50 ನೇರಳೆ ಬಣ್ಣದಲ್ಲಿ ಕಂಡು ಬಂದಿದೆ, ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಒಳಗೊಂಡಿರುವ ಡ್ಯುಯಲ್ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ ಎಂದು ಪಟ್ಟಿಯಲ್ಲಿ ಹೇಳಲಾಗಿದೆ. ಇದು ಫೋಲ್ಡಿಂಗ್ ಡಿಸ್‌ಪ್ಲೇಯಲ್ಲಿ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಹೊಂದಿರುವಂತೆ ತೋರುತ್ತಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಹೊಂದಿರಬಹುದು ಹಾಗೂ 3,950mAh ಬ್ಯಾಟರಿ ಜೊತೆಗೆ 188 ಗ್ರಾಂ ತೂಕ ಹೊಂದಿರಬಹುದು ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ.

ಮೊಟೊರೊಲಾ Razr 50 ಯನ್ನು ಯುಎಸ್‌ನಲ್ಲಿ $699 (ಸುಮಾರು ರೂ. 58,000) ರೂ. ಬೆಲೆ ಹೊಂದಿರಬಹುದು ಎಂದು ಹೇಳಲಾಗುತ್ತಿದ್ದು, ಮೊಟೊರೊಲಾ Razr 50 ಅಲ್ಟ್ರಾ ಮೊಬೈಲ್‌ ಜೊತೆಗೆ ಜೂನ್‌ ತಿಂಗಳಿನಲ್ಲಿ ಅಧಿಕೃತವಾಗಿ ಆಯ್ದ ಕೆಲವು ದೇಶಗಳಲ್ಲಿ ಮಾತ್ರ ಲಾಂಚ್ ಆಗಬಹುದು ಎಂದು ಊಹಿಸಲಾಗಿದೆ.

ಮೊಟೊರೊಲಾ ಸಂಸ್ಥೆ ಕಳೆದ ವರ್ಷ ಮೊಟೊರೊಲಾ Razr 40 (Motorola Razr 40) ಯನ್ನು ಬಿಡುಗಡೆಗೊಳಿಸಿ ಯಶಸ್ವಿಯಾಗಿದೆ. ಇದು 6.9 ಫುಲ್ HD+ (1,080x2,640 ಪಿಕ್ಸೆಲ್‌ಗಳು) ಫೋಲ್ಡಬಲ್ ಪೋಲ್ಡ್ (pOLED) ಡಿಸ್‌ಪ್ಲೇ, 1.5-ಇಂಚಿನ ಸೆಕೆಂಡರಿ ಸ್ಕ್ರೀನ್, ಮತ್ತು ಸ್ನಾಪ್‌ಡ್ರಾಗನ್ 7 Gen SoC ಜೊತೆಗೆ 12GB RAM ಹೊಂದಿದೆ.

64 ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಬದಿ ಸೆನ್ಸಾರ್ ಕ್ಯಾಮೆರಾ ಮತ್ತು 32 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿದೆ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಹಾಗೂ 30W ಕೇಬಲ್ ಮತ್ತು 8W ವೈರ್‌ಲೆಸ್ ಚಾರ್ಜಿಂಗ್‌ ಬೆಂಬಲದೊಂದಿಗೆ 4,200mAh ಬ್ಯಾಟರಿ ಘಟಕವನ್ನು ಹೊಂದಿದೆ.

Best Mobiles in India

English summary
The TEENA Listed that Motorola Razr 50 and Motorola Razr 50 Ultra are working towards the release of the series. The Razr series is expected to launch these mobiles in select markets including the US and Canada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+