Motorola; ಮೊಟೊರೊಲಾ Razr 50 ಅಲ್ಟ್ರಾ ಫೀಚರ್ಸ್ ಲೀಕ್; ಏನೆಲ್ಲಾ ವಿಶೇಷತೆಗಳಿವೆ ನೋಡಿ !
Motorola (ಮೊಟೊರೊಲಾ) Razr 50 ಜೊತೆಗೆ ಈ ವರ್ಷದ ಬಳಿಕ ಮೊಟೊರೊಲಾ Razr 50 ಅಲ್ಟ್ರಾ ಕೂಡ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಫೋನ್‌ಗಳು ಕ್ರಮವಾಗಿ ಮೊಟೊರೊಲಾ Razr 40 ಅಲ್ಟ್ರಾ ಮತ್ತು ಮೊಟೊರೊಲಾ Razr 40 ಯನ್ನು ಅನುಸರಿಸುವ ನಿರೀಕ್ಷೆಯಿದೆ. ಸೋರಿಕೆಯಾಗಿರುವ ವರದಿಯು ಈ ಫೋನ್‌ಗಳ ಪ್ರಮುಖ ಫೀಚರ್ಸ್ ಮತ್ತು ಮತ್ತು ಬೆಲೆ ಮತ್ತು ಮೊಬೈಲ್ ವಿನ್ಯಾಸ ಸಹ ನಾವು ನೋಡಬಹುದು. ಇತ್ತೀಚೆಗೆ ಮೊಟೊರೊಲಾ Razr 50 ಫೀಚರ್ಸ್‌ಗಳು ಟೀನಾ (TENAA) ಸೈಟ್‌ನಲ್ಲಿ ಸೋರಿಕೆಯಾಗಿತ್ತು. ಇದೀಗ ಮೊಟೊರೊಲಾ Razr 50 ಅಲ್ಟ್ರಾ ಕುರಿತು ಟೀನಾ ವೆಬ್‌ಸೈಟ್ ಮೊಬೈಲ್‌ನ ವಿನ್ಯಾಸ ಹಾಗೂ ಪ್ರಮುಖ ಫೀಚರ್ಸ್‌ಗಳನ್ನು ಬಹಿರಂಗಪಡಿಸಿದೆ.
ಮೊಟೊರೊಲಾ Razr 50 ಅಲ್ಟ್ರಾ (Motorola Razr 50 Ultra) ನಿರೀಕ್ಷಿತ ವಿನ್ಯಾಸ:
ಟೀನಾ ವೆಬ್‌ಸೈಟ್ ಗುರುತಿಸಿರುವಂತೆ ಇದು ಕಡು ನೀಲಿ ಬಣ್ಣದಲ್ಲಿ ಕಂಡು ಬಂದಿದೆ. ಫೋನ್‌ನ ಹಿಂಭಾಗದ ಮೇಲಿನ ಎಡ ಮೂಲೆಯಲ್ಲಿ ಸಣ್ಣ ಎಲ್ಇಡಿ ಫ್ಲ್ಯಾಷ್ ಘಟಕದ ಜೊತೆಗೆ ಎರಡು ಪ್ರತ್ಯೇಕ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್‌ಗಳು ಕಂಡುಬಂದಿವೆ. ಕವರ್ ಪರದೆಯು ಹಿಂಭಾಗದ ಫಲಕದ ಮಧ್ಯದಲ್ಲಿ ಹಿಂಜ್ ತನಕ ವಿಸ್ತರಿಸುವುದನ್ನು ಕಾಣಬಹುದು. ಬ್ರಾಂಡ್‌ನ 'M' ಲೋಗೋ ಕೆಳಗಿನ ಅರ್ಧಭಾಗದಲ್ಲಿ ಕಾಣಿಸಿಕೊಂಡಿದೆ ನಂತರ 'Razr' ಲೇಬಲ್ ಕೆಳಭಾಗದಲ್ಲಿದೆ. ಹ್ಯಾಂಡ್‌ಸೆಟ್ ಮೇಲಿನ ಬಲ ತುದಿಯಲ್ಲಿ ಪವರ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ಹೊಂದಿದೆ.

ಮೊಟೊರೊಲಾ Razr 50 ಅಲ್ಟ್ರಾದ (Motorola Razr 50 Ultra) ನಿರೀಕ್ಷಿತ ಫೀಚರ್ಸ್‌ಗಳು:
ಟೀನಾ ಪಟ್ಟಿಯ ಪ್ರಕಾರ, ಈ ಮೊಬೈಲ್ 120Hz ರಿಫ್ರೆಶ್ ರೇಟ್‌ನೊಂದಿಗೆ 6.9 ಇಂಚಿನ ಫುಲ್ HD+ (1,080 x 2,460 ಪಿಕ್ಸೆಲ್) ಓಲ್‌ಡ್ ಮುಖ್ಯ ಡಿಸ್‌ಪ್ಲೇ ಹೊಂದಿದೆ. ಹೊರಗಿನ ಡಿಸ್‌ಪ್ಲೇ 1,272 x 1,080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 4 ಇಂಚಿನ ಓಲ್‌ಡ್ ಪ್ಯಾನೆಲ್ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇದು ಹಿಂದಿನ 3.6 ಇಂಚಿನ Razr 40 ಅಲ್ಟ್ರಾದ ಕವರ್ ಡಿಸ್‌ಪ್ಲೇಗಿಂತ ಗಣನೀಯವಾಗಿ ದೊಡ್ಡದಾಗಿದೆ.
ಮೊಟೊರೊಲಾ Razr 50 Ultra 3.0GHz ನ ಅಧಿಕ ವೇಗದ ಜೊತೆಗೆ ಆಕ್ಟಾ ಕೋರ್ ಚಿಪ್‌ಸೆಟ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ ಎಂದು ಪಟ್ಟಿ ತಿಳಿಸಿದೆ. ಇದು ಕ್ವಾಲ್ಕಾಮ್ (Qualcomm) ನ ಸ್ನಾಪ್‌ಡ್ರಾಗನ್ 8s Gen 3 SoC ಹೊಂದಿರಲಿದೆ ಎಂದು ಊಹಿಸಲಾಗಿದೆ. ಫೋನ್ 8GB, 12GB, 16GB ಮತ್ತು 18GBಯ RAM ಆಯ್ಕೆಗಳಲ್ಲಿ ಲಭ್ಯವಿರಲಿದ್ದು ಇವುಗಳನ್ನು 28GB, 256GB, 512GB ಮತ್ತು 1TB ಈ ನಾಲ್ಕು ವೇರಿಯಂಟ್‌ಗಳಲ್ಲಿ ಹೊಂದಿಸಲಾಗುವುದು ಹೇಳಲಾಗಿದೆ.
ಕ್ಯಾಮೆರಾ ವಿಭಾಗ ನೋಡುವುದಾದರೆ 32MP ಸೆಲ್ಫಿ ಶೂಟರ್ ಜೊತೆಗೆ ಡ್ಯುಯಲ್ 50 MP ಹಿಂಬದಿಯ ಕ್ಯಾಮೆರಾ ಸೆನ್ಸಾರ್ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಮೊಟೊರೊಲಾ Razr 50 ಅಲ್ಟ್ರಾ ಡ್ಯುಯಲ್ ಸೆಲ್‌ಗಳಿಂದ ಬೆಂಬಲಿತವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಹಿಂದಿನ 3C ಪಟ್ಟಿಯು ಹ್ಯಾಂಡ್‌ಸೆಟ್ 68W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಸೂಚಿಸಿದೆ. ಮತ್ತು ಫೋನ್ 189g ತೂಕ ಮತ್ತು 171.4 x 73.9 x 7mm ಗಾತ್ರ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.
ಮೊಟೊರೊಲಾ Razr 50 ಅಲ್ಟ್ರಾ ಈ ಹಿಂದೆ ಆಂಡ್ರಾಯ್ಡ್ 14 ಆಧಾರಿತ OS ನೊಂದಿಗೆ ಬಿಡುಗಡೆ ಮಾಡಲು ಸಲಹೆ ನೀಡಲಾಗಿದೆ. ಹ್ಯಾಂಡ್‌ಸೆಟ್ ನೀರಿನ ಪ್ರತಿರೋಧ ಮತ್ತು ವೈರ್‌ಲೆಸ್ ಚಾರ್ಜಿಂಗ್ ಬೆಂಬಲಕ್ಕಾಗಿ IPX8 ರೇಟಿಂಗ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಇದು ಮಿಡ್‌ನೈಟ್ ಬ್ಲೂ, ಸ್ಪ್ರಿಂಗ್ ಗ್ರೀನ್ ಮತ್ತು ಹಾಟ್ ಪಿಂಕ್ ಕಲರ್‌ಗಳಲ್ಲಿ ಜೊತೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಈ ಫೋನ್‌ನ 12GB RAM + 512GB ಸ್ಟೋರೆಜ್ ಬೆಲೆ ಸುಮಾರು EUR 1200 ಅಂದರೆ ಸುಮಾರು 1,07,00 ರೂ. ಎಂದು ಅಂದಾಜಿಸಲಾಗಿದೆ.


Click it and Unblock the Notifications








