10000 ಅಗ್ಗ! ದೈತ್ಯ Motorola ಫೋನಿನ ಬೆಲೆ ಇಳಿಕೆ; ಹೊಸ ಬೆಲೆ, ಡಿಸ್ಕೌಂಟ್ ಎಷ್ಟು?
ಮೊಟೊರೊಲಾ ತನ್ನ ಗ್ರಾಹಕರಿಗೆ ಒಳ್ಳೆಯ ಸುದ್ದಿಯನ್ನು ನೀಡಿದೆ. ಇತ್ತೀಚೆಗೆ ಬಿಡುಗಡೆಯಾದ ಫೋಲ್ಡಬಲ್ ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ಹೌದು, ಕಂಪನಿಯು ಮೊಟೊರೊಲಾ ರೇಜರ್ 50 ಅಲ್ಟ್ರಾ (Motorola Razr 50 Ultra) ಫೋನನ್ನು ಈ ವರ್ಷದ ಜುಲೈನಲ್ಲಿ ಬಿಡುಗಡೆ ಮಾಡಿತ್ತು. ಪ್ರಸ್ತುತ, ಫೋನಿನ ಬೆಲೆಯನ್ನು 10,000 ರೂ. ಕಡಿಮೆ ಮಾಡಿದೆ. ನೀವು, ಹೊಸ ಫ್ಲಿಪ್ ಫೋನ್ ಖರೀದಿಸಲು ಬಯಸಿದರೆ, ಇದು ಉತ್ತಮ ಆಯ್ಕೆಯಾಗಿದೆ. ಬೆಲೆ ಇಳಿಕೆ ಜೊತೆಗೆ, ಬ್ಯಾಂಕ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್ ಮತ್ತು ನೋ ಕಾಸ್ಟ್ ಇಎಂಐ ಸಹ ಲಭ್ಯವಿದೆ.
ಮೊಟೊರೊಲಾ ರೇಜರ್ 50 ಅಲ್ಟ್ರಾ ಮೊಬೈಲ್ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6ಗೆ ಭಾರೀ ಪೈಪೋಟಿ ನೀಡಿದೆ. ಈ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8S ಜೆನ್ 3 ಪ್ರೊಸೆಸರ್ ಹೊಂದಿದೆ. ಮೊಟೊರೊಲಾ ರೇಜರ್ 50 ಅಲ್ಟ್ರಾ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ. ಇದು 6.9 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 4000mAh ಬ್ಯಾಟರಿಯನ್ನು ಹೊಂದಿದೆ.

ಮೊಟೊರೊಲಾ ರೇಜರ್ 50 ಅಲ್ಟ್ರಾ ಬೆಲೆ ಮತ್ತು ಆಫರ್‌ಗಳು
ಕಂಪನಿಯು ಮೊಟೊರೊಲಾ ರೇಜರ್ 50 ಅಲ್ಟ್ರಾ ಫೋನನ್ನು 89,999 ರೂ.ಗೆ ಬಿಡುಗಡೆ ಮಾಡಿದೆ. ಪ್ರಸ್ತುತ 10,000 ರೂ. ಡಿಸ್ಕೌಂಟ್ ಘೋಷಿಸಿದೆ. ನೀವು 79,999 ರೂ.ಗೆ ಖರೀದಿಸಬಹುದು. 1,500 ರೂ. ವರೆಗೆ ರಿಯಾಯಿತಿ ಲಭ್ಯವಿದೆ. ಕಂಪನಿಯು 3 ರಿಂದ 18 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ನೀಡುತ್ತಿದೆ.
ನೀವು 25,700 ರೂ. ವರೆಗೆ ಎಕ್ಸ್‌ಚೇಂಜ್ ಆಫರ್ ಪಡೆಯಬಹುದು. ಈ ಮೊಬೈಲ್ ಪೀಚ್ ಫಡ್ಜ್, ಸ್ಪ್ರಿಂಗ್ ಗ್ರೀನ್ ಮತ್ತು ಮಿಡ್ನೈಟ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ನೀವು, ಮೊಟೊರೊಲಾ ರೇಜರ್ 50 ಅಲ್ಟ್ರಾ ಫೋನನ್ನು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಅಮೆಜಾನ್, ಕಂಪನಿಯ ವೆಬ್‌ಸೈಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಸಬಹುದು.
ಮೊಟೊರೊಲಾ ರೇಜರ್ 50 ಅಲ್ಟ್ರಾ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಮೊಟೊರೊಲಾ ರೇಜರ್ 50 ಅಲ್ಟ್ರಾ ಮೊಬೈಲ್ 6.9 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಪೋಲೆಡ್ LTPO ಮುಖ್ಯ ಡಿಸ್ಪ್ಲೇಯನ್ನು ಹೊಂದಿದೆ. ಇದು 165Hz ರಿಫ್ರೆಶ್ ದರ, 2640×1080 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಈ ಫೋನಿನಲ್ಲಿ 4 ಇಂಚಿನ ಪೋಲೆಡ್ LTPO ಕವರ್ ಡಿಸ್ಪ್ಲೇ ಇದೆ. ಇದು 165Hz ರಿಫ್ರೆಶ್ ರೇಟ್, 1272×1080 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲ ಹೊಂದಿದೆ. ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಮೊಟೊರೊಲಾ ರೇಜರ್ 50 ಅಲ್ಟ್ರಾ ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8S ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಇದು ಗ್ರಾಫಿಕ್ಸ್‌ಗಾಗಿ ಅಡ್ರಿನೊ 735 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಧಾರಿತ ಹಲೋ ಯುಐನಲ್ಲಿ ಕೆಲಸ ಮಾಡುತ್ತದೆ. ಫೋನಿನಲ್ಲಿ 12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಲಭ್ಯವಿದೆ.

ಕ್ಯಾಮೆರಾ ಸೆಟಪ್
ಮೊಟೊರೊಲಾ ರೇಜರ್ 50 ಅಲ್ಟ್ರಾ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. OIS ಜೊತೆಗೆ 50 ಮೆಗಾಪಿಕ್ಸೆಲ್ 2x ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಮೊಟೊರೊಲಾ ರೇಜರ್ 50 ಅಲ್ಟ್ರಾ ಫೋನಿನಲ್ಲಿ 4000mAh ಸಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ಟರ್ಬೋಪವರ್ ವೇಗದ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.
ಇತರೆ ವೈಶಿಷ್ಟ್ಯಗಳು
ಮೊಟೊರೊಲಾ ರೇಜರ್ 50 ಅಲ್ಟ್ರಾ ಫೋನ್ ಸ್ಟಿರಿಯೊ ಸ್ಪೀಕರ್‌ಗಳು, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಡಾಲ್ಬಿ ಅಟ್ಮಾಸ್, ಐಪಿಎಕ್ಸ್ 8 ರೇಟಿಂಗ್ ಹೊಂದಿದೆ. ಜೊತೆಗೆ ಡ್ಯುಯಲ್ ಸಿಮ್ 5G, 4G VoLTE, ವೈ-ಫೈ 6E, ಬ್ಲೂಟೂತ್ 5.3 ಸೇರಿದಂತೆ ಹಲವು ಕನೆಕ್ಟಿವಿಟಿ ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








