Home
ಮೊಬೈಲ್

ಇನ್ಮೇಲೆ ಇದರದ್ದೇ ಹವಾ! ಇಂದು ಮೊಟೊನ ಈ ಹೊಸ ಫೋನ್‌ ಲಾಂಚ್: ಖರೀದಿಗೆ ಕ್ಯೂ ಖಚಿತ!

ಮೊಟೊರೊಲಾ ಕಂಪನಿಯು ವಿಶೇಷ ಹಾಗೂ ವಿಭಿನ್ನ ಫೀಚರ್ಸ್‌ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇತ್ತೀಚಿಗೆ ವಿಭಿನ್ನ ತಂತ್ರಜ್ಞಾನ ಹೊಂದಿರುವ ವಿವಿಧ ಸರಣಿಯ ಹಲವು ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇಂದು ಭಾರತದಲ್ಲಿ ತನ್ನ ಬಹು ನಿರೀಕ್ಷಿತ Moto Razr 50 Ultra ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್ Snapdragon 8s Gen 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಈ ಇತ್ತೀಚಿನ ಮಾದರಿಯು IPX8 ರೇಟೆಡ್ ವಿನ್ಯಾಸ ಹೊಂದಿದೆ. ಇದು Samsungನ ಮುಂಬರುವ Galaxy Z ಫ್ಲಿಪ್ 6ಗೆ ಪೈಪೋಟಿ ನೀಡುವುದರಲ್ಲಿ ಎರಡನೇ ಮಾತಿಲ್ಲ. ಹಾಗಿದ್ರೆ, ಈ ಫೋನ್ ಏನೆಲ್ಲಾ ವಿಶೇಷತೆ ಒಳಗೊಂಡಿದೆ ತಿಳಿಯೋಣ ಬನ್ನಿ.

ಮೊಟೊರೊಲಾದ Motorola Razr 50 ಅಲ್ಟ್ರಾ ಫೋನ್‌ 1-165Hz ರಿಫ್ರೆಶ್ ರೇಟ್‌ ಜೊತೆಗೆ 6.9 ಇಂಚಿನ ಫುಲ್ HD+ ಇಂಟರ್ನಲ್ ಫೋಲ್ಡಬಲ್ LTPO ಫೋಲ್ಡ್ ಡಿಸ್‌ಪ್ಲೇ ಹೊಂದಿದೆ. 4 ಇಂಚಿನ ಹೊರ Poled 1-165Hz LPTO ಸ್ಕ್ರೀನ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆ, ಸ್ನಾಪ್‌ಡ್ರಾಗನ್ 8s Gen 3 GBPDR125X, 4.0 ಸ್ಟೋರೇಜ್, 50MP ಮುಖ್ಯ ಕ್ಯಾಮರಾ ಜೊತೆಗೆ OIS + 50MP 2x ಟೆಲಿಫೋಟೋ ಕ್ಯಾಮೆರಾ, 32MP ಮುಂಭಾಗದ ಕ್ಯಾಮರಾ ಮತ್ತು 4000mAh ಬ್ಯಾಟರಿ ಜೊತೆಗೆ 45W ವೈರ್ಡ್ ಫಾಸ್ಟ್ ಚಾರ್ಜಿಂಗ್, ಮತ್ತು 15W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದ ಜೊತೆಗೆ ಬರಲಿದೆ.

ಇನ್ಮೇಲೆ ಇದರದ್ದೇ ಹವಾ! ಇಂದು ಮೊಟೊನ ಈ ಹೊಸ ಫೋನ್‌ ಲಾಂಚ್: ಖರೀದಿಗೆ ಕ್ಯೂ ಖಚಿತ!

ಬಿಡುಗಡೆ ಮತ್ತು ಲಭ್ಯತೆ

ಭಾರತದಲ್ಲಿ Motorola Razr 50 Ultra ಫೋನ್‌ನ ಅಧಿಕೃತ ಇಂದು ಮಧ್ಯಾಹ್ನ 12 ಗಂಟೆಗೆ ನಿಗದಿಪಡಿಸಲಾಗಿದೆ. ಇದು Amazon ಮತ್ತು Motorola ನ ಅಧಿಕೃತ ಸೈಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಈ ಫೋನ್ ವಿವಿಧ ಚಿಲ್ಲರೆ ಅಂಗಡಿಗಳಲ್ಲಿಯೂ ಮಾರಾಟವಾಗಲಿದೆ. ಈ ಸ್ಮಾರ್ಟ್‌ಫೋನ್ ಸ್ಪ್ರಿಂಗ್ ಗ್ರೀನ್, ಪೀಚ್ ಫಜ್ ಮತ್ತು ಮಿಡ್‌ನೈಟ್ ಬ್ಲೂ ಬಣ್ಣಗಳಲ್ಲಿ ಬರಲಿದೆ.

ಈ ಹೊಸ ಫೋನ್‌ನ ಬೆಲೆ ಎಷ್ಟು?

ಭಾರತದಲ್ಲಿ Motorola Razr 50 Ultra ಸ್ಮಾರ್ಟ್‌ಫೊನ್ ಬೆಲೆ ನಿಗದಿ ಬಗ್ಗೆ ಮೊಟೊರೊಲಾ ಕಂಪನಿ ಇನ್ನೂ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ, ಜಾಗತಿಕವಾಗಿ ಲಾಂಚ್ ಆದ ಈ ಫೋನ್‌ನ ಬೆಲೆಯನ್ನು ನೋಡಿದರೆ, ಸುಮಾರು 12GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್ ಮೂಲ ಮಾದರಿಯ ಬೆಲೆ ಸುಮಾರು 65,500 ರೂ. ಇರಬಹುದು.

ಚೀನಾದಲ್ಲಿ ಈ ಫೋನ್‌ನ ಬಲು ದುಬಾರಿ

Moto Razr 50 Ultra ಫೋನ್‌ 12GB/256GB ಸ್ಟೋರೇಜ್‌ ವೇರಿಯಂಟ್‌ ಬೆಲೆ ಚೀನಾದಲ್ಲಿ ಸುಮಾರು 65,500 ರೂ. (CNY 5,699) ಇದೆ. 12GB/512GB ಸ್ಟೋರೇಜ್ ಮಾದರಿಯ ಬೆಲೆ ಅಂದಾಜು 72,250 ರೂ.ನಿಂದ (CNY 6,199) ಪ್ರಾರಂಭವಾಗುತ್ತದೆ. Moto Razr 50 Ultra ಫೋನ್ ಡಿಲ್, ನೇವಿ ಬ್ಲೇಜರ್ ಮತ್ತು ಪೀಚ್ ಫಜ್ ಸೇರಿದಂತೆ ಮೂರು ಪ್ಯಾಂಟೋನ್ ಮೌಲ್ಯೀಕರಿಸಿದ ಬಣ್ಣಗಳಲ್ಲಿ ಲಭ್ಯವಿದೆ.

Moto Razr 50 Ultra ಸಂಪೂರ್ಣ ವಿಶೇಷತೆಗಳು

  • ಡಿಸ್ಲ್ಪೇ: ಇಂಟರ್ನಲ್- 6.9 ಇಂಚಿನ (2640×1080 ಪಿಕ್ಸೆಲ್‌ಗಳು) FlexView FHD+ ಪೋಲ್ಡ್ LTPO ಡಿಸ್ಲ್ಪೇ, 100% DCI-P3 color gamut, 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌, Dolby Vision ಬ್ರೈಟ್‌ನೆಸ್‌.
  • ಎಕ್ಸ್‌ಟ್ರನಲ್: 4″ (1272×1080 ಪಿಕ್ಸೆಲ್‌ಗಳು) ಕ್ವಿಕ್‌ವ್ಯೂ ಪೋಲ್ಡ್ LTPO ಡಿಸ್‌ಪ್ಲೇ, 100% DCI-P3 color gamut, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್
  • ರಿಫ್ರೆಶ್ ರೇಟ್: 1-165Hz ರಿಫ್ರೆಶ್ ರೇಟ್, 10-ಬಿಟ್ HDR 10+
  • ಪ್ರೊಸೆಸರ್: ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8s Gen 3 4nm ಮೊಬೈಲ್ ಪ್ಲಾಟ್‌ಫಾರ್ಮ್ ಜೊತೆಗೆ Adreno 735 GPU
  • ಸ್ಟೋರೇಜ್: 12GB LPDDR5X RAM ಜೊತೆಗೆ 256GB / 512GB UFS 4.0 ಸ್ಟೋರೇಜ್
  • OS: ಆಂಡ್ರಾಯ್ಡ್ 14
  • ಸಿಮ್: ಡ್ಯುಯಲ್ ಸಿಮ್ (eSIM + ನ್ಯಾನೋ)
  • ಕ್ಯಾಮೆರಾ: 50MP (1/1.95″ ಸಂವೇದಕದೊಂದಿಗೆ) ಮುಖ್ಯ ಕ್ಯಾಮೆರಾ, f/1.79 ದ್ಯುತಿರಂಧ್ರ, OIS, 1/1.95″ ಸಂವೇದಕದೊಂದಿಗೆ 50MP 2x ಟೆಲಿಫೋಟೋ ಕ್ಯಾಮೆರಾ, f/2.0 ಅಪರ್ಚರ್
  • ಫ್ರಂಟ್ ಕ್ಯಾಮೆರಾ: f/2.4 ದ್ಯುತಿರಂಧ್ರದೊಂದಿಗೆ 32MP ಫ್ರಂಟ್ ಕ್ಯಾಮರಾ
  • ಆಡಿಯೋ: ಯುಎಸ್‌ಬಿ ಟೈಪ್-ಸಿ ಆಡಿಯೋ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್
  • ಅಳತೆ: 171.42 (open) × 73.99×7.09mm (open)
  • ತೂಕ: 189 ಗ್ರಾಂ
  • ಬಣ್ಣಗಳು: Razr 50 Ultra ಭಾರತದಲ್ಲಿ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ: ಮಿಡ್ನೈಟ್ ಬ್ಲೂ, ಸ್ಪ್ರಿಂಗ್ ಗ್ರೀನ್ ಮತ್ತು ಪೀಚ್ ಫಜ್.
  • ಫಿಂಗರ್‌ಪ್ರಿಂಟ್: ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್
  • ಪ್ರೊಟೆಕ್ಷನ್: ಜಲನಿರೋಧಕ (IPX8)
  • ಕನೆಕ್ಟಿವಿಟಿ ಆಯ್ಕೆಗಳು: 5G SA/NSA, ಡ್ಯುಯಲ್ 4G VoLTE, Wi-Fi 6E 802.11ax (2.4GHz/5GHz) MIMO, ಬ್ಲೂಟೂತ್ 5.3, GPS, USB ಟೈಪ್-C, NFC
  • ಬ್ಯಾಟರಿ: 4000mAh ಬ್ಯಾಟರಿ
  • ಚಾರ್ಜಿಂಗ್: 44W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್, 15W ವೈರ್‌ಲೆಸ್ ಚಾರ್ಜಿಂಗ್
Best Mobiles in India

English summary
The Motorola Razr 50 Ultra, the latest iteration of Motorola's foldable phone, launches today. Check Price, specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+