Motorola Razr 60: ಹೊಸ ಫೋಲ್ಡಬಲ್ ಫೋನ್‌ನ ಫೀಚರ್ಸ್ ಬಹಿರಂಗ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ Motorola ಕಂಪನಿಯು ತನ್ನ ಮುಂದಿನ Motorola Razr 60 ಸರಣಿಯ ಅಡಿಯಲ್ಲಿ ಹೊಸದಾಗಿ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. Motorola Razr 60 ಸರಣಿಯಲ್ಲಿ ಬೇಸಿಕ್ Motorola Razr 60 ಮತ್ತು Motorola Razr 60 Ultra ಎಂಬ ಎರಡು ಮಾದರಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಲು ಕಂಪೆನಿ ಸಜ್ಜಾಗಿದ್ದು, ಇವುಗಳಲ್ಲಿ Ultra ಮಾದರಿಯ ಸ್ಮಾರ್ಟ್‌ಫೋನ್ ಇತ್ತೀಚೆಗೆ ಚೀನಾದ TENAA ಪ್ರಮಾಣೀಕರಣದಲ್ಲಿ ಕಾಣಿಸಿಕೊಂಡಿದೆ, ಇದರಿಂದಾಗಿ ಮುಂಬರುವ Razr 60 ಸರಣಿ ಸ್ಮಾರ್ಟ್‌ಫೋನಿ ವೈಶಿಷ್ಟ್ಯಗಳು ಬಹಿರಂಗವಾಗಿವೆ.
ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ TENAA ಪಟ್ಟಿಯು Motorola Razr 60 Ultra ಸ್ಮಾರ್ಟ್‌ಫೋನ್ ಎರಡು ಡಿಸ್ಪ್ಲೇಗಳನ್ನು ಹೊಂದಿರುವುದನ್ನು ಖಚಿತಪಡಿಸಿದೆ. ಇದರಲ್ಲಿ ಮುಖ್ಯ ಡಿಸ್‌ಪ್ಲೆಯು 1080 x 2460 ಪಿಕ್ಸೆಲ್‌ಗಳ ಪೂರ್ಣ+ ರೆಸಲ್ಯೂಶನ್ ಸಾಮರ್ಥ್ಯದಲ್ಲಿ 6.9-ಇಂಚಿನ ಒಳಗಿನ OLED ಡಿಸ್‌ಪ್ಲೇ ಹೊಂದಿದ್ದರೆ, ಮುಂಬಾಗದ ಡಿಸ್‌ಪ್ಲೇಯು 1056 x 1056 ಪಿಕ್ಸೆಲ್‌ಗಳ ರೆಯೂಶನ್‌ನೊಂದಿಗೆ 3.63-ಇಂಚಿನ ಕವರ್ OLED ಡಿಸ್‌ಪ್ಲೇಯಾಗಿದೆ. ಪ್ರೊಸೆಸರ್ ವಿಭಾಗದಲ್ಲಿ,Motorola Razr 60 Ultra ಸ್ಮಾರ್ಟ್‌ಫೋನನ್ನು 2.75GHz ಚಿಪ್‌ನೊಂದಿಗೆ ಪಟ್ಟಿಮಾಡಲಾಗಿದೆ, ಇದು ಡೈಮೆನ್ಸಿಟಿ 7400x ಗೆ ಸಂಬಂಧಿಸಿದೆ, ಇದು ಕಳೆದ ವರ್ಷದ ಮಾದರಿಯಲ್ಲಿ ಬಳಸಲಾದ ಡೈಮೆನ್ಸಿಟಿ 7300X ಗಿಂತ ಅಪ್‌ಗ್ರೇಡ್ ಆಗಿರುತ್ತದೆ. ಹಾಗಾಗಿ, ಈ ಸ್ಮಾರ್ಟ್‌ಫೋನ್ ಈ ಹಿಂದಿನ ಮಾದರಿ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಸಾಕಷ್ಟು ಹೆಚ್ಚು ಕಾರ್ಯಕ್ಷಮತೆ ಹೊಂದಿರುವುದು ಸಹ ಖಚಿತವಾಗಿದೆ.

ಇದೇ TENAA ಪಟ್ಟಿಯು Motorola Razr 60 Ultra ಸ್ಮಾರ್ಟ್‌ಫೋನಿನಲ್ಲಿ 1,090mAh + 3,815mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಎಂದು ಸೂಚಿಸುತ್ತದೆ. ಇದಲ್ಲದೆ, Razr 60 ಈ ಸ್ಮಾರ್ಟ್‌ಫೋನ್ 30W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ ನಿರೀಕ್ಷೆಯಿದೆ. ಕ್ಯಾಮೆರಾ ವಿಭಾಗದಲ್ಲಿ, Motorola Razr 60 Ultra ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 13MP ಅಲ್ಟ್ರಾ-ವೈಡ್ ಸೆನ್ಸಾರ್ ಹೊಂದಿದ್ದರೆ, ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ ಎಂದು ತಿಳಿದುಬಂದಿದೆ. ಇವುಗಳ ಜೊತೆಗೆ 8GB, 12GB, 16GB, ಅಥವಾ 18GB RAM ಹಾಗೂ 128GB, 256GB, 512GB, ಅಥವಾ 1TB ಸ್ಟೋರೇಜ್ ಆಯ್ಕೆಗಳಲ್ಲಿ Motorola Razr 60 Ultra ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. ಆದರೆ, ಈ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.
Motorola Razr 60 Ultra ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯಗಳು,
Motorola Razr 60 Ultra ಸ್ಮಾರ್ಟ್‌ಫೋನ್ ಎರಡು ಡಿಸ್‌ಪ್ಲೇಗಳನ್ನು ಹೊಂದಿದೆ:
ಹೊರಗಿನ ಡಿಸ್ಪ್ಲೇ: 3.63 ಇಂಚಿನ OLED ಡಿಸ್ಪ್ಲೇ, 1056 x 1056 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ.
ಒಳಗಿನ ಡಿಸ್ಪ್ಲೇ: 6.9 ಇಂಚಿನ OLED ಡಿಸ್ಪ್ಲೇ, 1080 x 2460 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ.
ಈ ಸ್ಮಾರ್ಟ್‌ಫೋನ್‌ನಲ್ಲಿ MediaTek Dimensity 7400x ಪ್ರೊಸೆಸರ್ ಅನ್ನು ಬಳಸಲಾಗಿದೆ.
4,500mAh ಬ್ಯಾಟರಿ ಇದೆ, ಮತ್ತು ಇದು 30W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 13MP ಅಲ್ಟ್ರಾ-ವೈಡ್ ಕ್ಯಾಮೆರಾ ಇದೆ.
ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ.
8GB, 12GB, 16GB, ಅಥವಾ 18GB RAM ಆಯ್ಕೆಗಳಿವೆ.
128GB, 256GB, 512GB, ಅಥವಾ 1TB ಸ್ಟೋರೇಜ್ ಆಯ್ಕೆಗಳಿವೆ
ಮುಂಬರುವ Motorola Razr 60 ಫೋನ್ ಫೋಲ್ಡಬಲ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುವ ನಿರೀಕ್ಷೆಯಿದೆ.


Click it and Unblock the Notifications








