Home
ಮೊಬೈಲ್

ಏ.24 ರಂದು ದೇಶದಲ್ಲಿ 'ಮೋಟೊರೊಲಾ ರೇಜರ್ 60 ಅಲ್ಟ್ರಾ' ಫೋಲ್ಡೆಬಲ್ ಫೋನ್ ಬಿಡುಗಡೆ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಮೊಟೊರೊಲಾ ಸಂಸ್ಥೆಯು ತನ್ನ ಬಹುನಿರೀಕ್ಷಿತ ಮಡಚಿಕೊಳ್ಳುವ ಸ್ಮಾರ್ಟ್‌ಫೋನ್ ಆದ 'ಮೊಟೊರೊಲಾ ರೇಜರ್ 60 ಅಲ್ಟ್ರಾ' (Motorola Razr 60 Ultra) ಅನ್ನು ಇದೇ ಏಪ್ರಿಲ್ 24 ರಂದು ಅನಾವರಣಗೊಳಿಸಲು ಸಜ್ಜಾಗಿದೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಂತೆ, ಈ ಮೋಟೊರೊಲಾ ರೇಜರ್ 60 ಅಲ್ಟ್ರಾ ಸ್ಮಾರ್ಟ್‌ಫೋನಿನ ಬಹುತೇಕ ಎಲ್ಲಾ ಪ್ರಮುಖ ವಿಶೇಷಣಗಳು ಇದೀಗ ಸೋರಿಕೆಯಾಗಿದ್ದು, ಮೊಟೊರೊಲಾ ತನ್ನ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಕಳೆದ ವರ್ಷ ಬಿಡುಗಡೆಯಾಗಿ ಯಶಸ್ವಿಯಾದ ಮೊಟೊರೊಲಾ ರೇಜರ್ 50 ಅಲ್ಟ್ರಾದ ಮುಂದುವರೆದ ಭಾಗವಾಗಿ ಈ ಹೊಸ ಸ್ಮಾರ್ಟ್‌ಫೋನ್ ದೇಶದ ಮಾರುಕಟ್ಟೆಗೆ ಬರುತ್ತಿದ್ದು, ಈ ಮುಂಬರುವ ಹೊಸ ಮೋಟೊರೊಲಾ ರೇಜರ್ 60 ಅಲ್ಟ್ರಾ ಸ್ಮಾರ್ಟ್‌ಫೋನ್ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.

ಇದೀಗ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಮುಂಬರುವ ಮೊಟೊರೊಲಾ ರೇಜರ್ 60 ಅಲ್ಟ್ರಾ ಸ್ಮಾರ್ಟ್‌ಫೋನ್ ಅತ್ಯಾಧುನಿಕ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಇದು ವೇಗದ ಮತ್ತು ದಕ್ಷ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಈ ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆಯೆಂದರೆ ಇದರ ಎರಡು ಡಿಸ್ಪ್ಲೇಗಳು. ಒಳಭಾಗದಲ್ಲಿ 7-ಇಂಚಿನ ಸೂಪರ್ HD LTPO AMOLED ಡಿಸ್ಪ್ಲೇ ಇರಲಿದ್ದು, ಇದು 120% DCI-P3 ಬಣ್ಣ ವ್ಯಾಪ್ತಿ, 165Hz ರಿಫ್ರೆಶ್ ದರ, HDR10+ ಮತ್ತು ಡಾಲ್ಬಿ ವಿಷನ್ ಬೆಂಬಲದೊಂದಿಗೆ ಅತ್ಯುತ್ತಮ ದೃಶ್ಯ ಅನುಭವವನ್ನು ನೀಡಲಿದೆ. ಇದರ ಗರಿಷ್ಠ ಬ್ರೈಟ್‌ನೆಸ್ 4,500 ನಿಟ್ಸ್ ಆಗಿರಲಿದೆ ಎಂದು ಹೇಳಲಾಗಿದೆ. ಇನ್ನು ಹೊರಭಾಗದಲ್ಲಿ 4-ಇಂಚಿನ LTPO pOLED AMOLED ಕವರ್ ಡಿಸ್ಪ್ಲೇ ಇರಲಿದ್ದು, ಇದು ಕೂಡ 165Hz ವರೆಗಿನ ರಿಫ್ರೆಶ್ ದರ, HDR10+ ಬೆಂಬಲ, 100% DCI-P3 ಬಣ್ಣ ವ್ಯಾಪ್ತಿ ಮತ್ತು 3,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ.

ಮೊಟೊರೊಲಾ ರೇಜರ್ 60 ಅಲ್ಟ್ರಾ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇರಲಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಮ್ಯಾಕ್ರೋ ಸಾಮರ್ಥ್ಯ ದೊಂದಿಗೆ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಇರಲಿದೆ. ಇನ್ನು ಒಳಭಾಗದ ಡಿಸ್ಪ್ಲೇಯಲ್ಲಿ 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಬಹುದು, ಇದು ಹಿಂದಿನ 32-ಮೆಗಾಪಿಕ್ಸೆಲ್ ಕ್ಯಾಮೆರಾಕ್ಕಿಂತ ಉತ್ತಮವಾದ ಅಪ್‌ಗ್ರೇಡ್ ಆಗಿದೆ.ಇದಲ್ಲದೆ, ಈ ಫೋನ್ 16GB LPDDR5x RAM ಮತ್ತು 512GB UFS 4.0 ಸ್ಟೋರೇಜ್ ಅನ್ನು ಹೊಂದಿರಬಹುದು, ಇದು ಸುಗಮವಾದ ಮಲ್ಟಿಟಾಸ್ಕಿಂಗ್ ಮತ್ತು ವೇಗದ ಡೇಟಾ ಪ್ರವೇಶವನ್ನು ಖಚಿತಪಡಿಸುತ್ತದೆ. ಬ್ಯಾಟರಿ ವಿಷಯಕ್ಕೆ ಬಂದರೆ, ಈ ಸ್ಮಾರ್ಟ್‌ಫೋನ್ 68W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 30W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,700mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಏ.24 ರಂದು ದೇಶದಲ್ಲಿ 'ಮೋಟೊರೊಲಾ ರೇಜರ್ 60 ಅಲ್ಟ್ರಾ' ಫೋಲ್ಡೆಬಲ್ ಫೋನ್ ಬಿಡುಗಡೆ!

ಸಂಪರ್ಕ ಆಯ್ಕೆಗಳಲ್ಲಿ, ಮೊಟೊರೊಲಾ ರೇಜರ್ 60 ಅಲ್ಟ್ರಾ ಸ್ಮಾರ್ಟ್‌ಫೋನ್ 5G, 4G LTE, Wi-Fi 7, ಬ್ಲೂಟೂತ್ 5.4, GPS, NFC ಮತ್ತು USB ಟೈಪ್-C ಪೋರ್ಟ್ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಈ ಸ್ಮಾರ್ಟ್‌ಫೋನಿನಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕಗಳು ಇರಲಿವೆ. ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ನೀಡುವ ಸಾಧ್ಯತೆಯಿದೆ. ತೆರೆದಾಗ ಇದರ ಅಳತೆ 73.99x171.48x7.29mm ಮತ್ತು ಮುಚ್ಚಿದಾಗ 73.99x88.12x15.69mm ಇರಲಿದ್ದು, ಇದರ ತೂಕ ಸುಮಾರು 199 ಗ್ರಾಂ ಇರಬಹುದು ಎಂದು ತಿಳಿದುಬಂದಿದೆ.

ಹಿಂದಿನ ಮಾದರಿಗೆ ಹೋಲಿಸಿದರೆ, ಈ ಬಾರಿ ಮೊಟೊರೊಲಾ ರೇಜರ್ 60 ಅಲ್ಟ್ರಾ ಸ್ಮಾರ್ಟ್‌ಫೋನಿನ ಎರಡೂ ಡಿಸ್ಪ್ಲೇಗಳಲ್ಲಿ ಗಮನಾರ್ಹವಾದ ಸುಧಾರಣೆಗಳನ್ನು ಕಾಣಬಹುದು, ಇದರಲ್ಲಿನ ದೊಡ್ಡ ಗಾತ್ರದ ಕವರ್ ಡಿಸ್ಪ್ಲೇ ಬಳಕೆದಾರರಿಗೆ ಅಧಿಸೂಚನೆಗಳನ್ನು ನೋಡಲು, ತ್ವರಿತ ಕಾರ್ಯಗಳನ್ನು ನಿರ್ವಹಿಸಲು ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಹಾಗೆಯೇ, ಕಳೆದ ವರ್ಷದ ಮಾದರಿಯು 4,000mAh ಬ್ಯಾಟರಿಯನ್ನು ಹೊಂದಿತ್ತು. ಈ ಬಾರಿ ಬ್ಯಾಟರಿ ಸಾಮರ್ಥ್ಯದಲ್ಲಿಯೂ ಹೆಚ್ಚಳ ಕಂಡುಬಂದಿದೆ. ಒಟ್ಟಾರೆಯಾಗಿ, ಮೊಟೊರೊಲಾ ರೇಜರ್ 60 ಅಲ್ಟ್ರಾ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಸುಧಾರಿತ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿದೆ. ಏಪ್ರಿಲ್ 24 ರಂದು ನಡೆಯಲಿರುವ ಬಿಡುಗಡೆ ಕಾರ್ಯಕ್ರಮದಲ್ಲಿ ಇದರ ಬೆಲೆ ಮತ್ತು ಲಭ್ಯತೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ಕಾರ್ಯಕ್ರಮದಲ್ಲಿ ಈ ಸರಣಿಯಲ್ಲಿ ಇತರ ಫೋನ್‌ಗಳನ್ನು ಸಹ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

Best Mobiles in India

English summary
The Motorola Razr 60 Ultra is expected to feature a 4,700mAh battery and support 68W wired fast charging. Stay tuned for all the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+