ಭಾರತಕ್ಕೆ Motorola Razr 60 Ultra ಫ್ಲಿಪ್ ಫೋನ್ ಆಗಮನ ಖಚಿತ!
ಲೆನೊವೊ ಒಡೆತನದ ಪ್ರಮುಖ ಮೊಬೈಲ್ ಬ್ರ್ಯಾಂಡ್ Motorola ತನ್ನ ಬಹುನಿರೀಕ್ಷಿತ Razr 60 Ultra ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪೆನಿಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್ (ಹಿಂದೆ ಟ್ವಿಟರ್) ಮೂಲಕ ಈ ಕುರಿತು ಅಧಿಕೃತ ಘೋಷಣೆ ಮಾಡಿದೆ. Motorola ಸಂಸ್ಥೆಯು Amazon ನಲ್ಲಿ ಈ ಫೋನ್‌ಗಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ಸಹ ರಚಿಸಿದ್ದು, Razr 60 Ultra ಅನ್ನು "ವಿಶ್ವದ ಅತ್ಯಂತ ಶಕ್ತಿಶಾಲಿ AI ಫ್ಲಿಪ್ ಫೋನ್" ಎಂದು ಬಣ್ಣಿಸಿದೆ. ಈ ಕುರಿತಂತೆ ಮತ್ತಷ್ಟು ಮಾಹಿತಿಯನ್ನು ನೋಡೋಣ ಬನ್ನಿ.
Motorola Razr 60 Ultra ಈಗಾಗಲೇ ಜಾಗತಿಕ ಮಾರುಕಟ್ಟೆಗಳಲ್ಲಿ Razr 50 Ultra ನ ಉತ್ತರಾಧಿಕಾರಿಯಾಗಿ ಏಪ್ರಿಲ್ 24 ರಂದು ಬಿಡುಗಡೆಯಾಗಿತ್ತು. ಇದೀಗ ದೇಶದಲ್ಲಿ ಬಿಡುಗಡೆಗೊಳಿಸಲು Motorola ಕಂಪೆನಿಯು ಸಜ್ಜಾಗಿದೆ. Amazon ನಲ್ಲಿ ತೆರೆದಿರುವ ಪುಟದಲ್ಲಿರುವ ಮಾಹಿತಿಯ ಪ್ರಕಾರ, ಈ ಸ್ಮಾರ್ಟ್‌ಫೋನ್ ಪ್ರಮುಖ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದು ಅತ್ಯುತ್ತಮವಾದ ಕೃತಕ ಬುದ್ಧಿಮತ್ತೆ (AI) ಕಾರ್ಯಕ್ಷಮತೆಯನ್ನು ನೀಡುತ್ತದೆ. ಅಲ್ಲದೆ, ಈ ಫೋನ್ Motorola ದ ಇತ್ತೀಚಿನ ಆಂತರಿಕ AI ಸೂಟ್ ಆದ Moto AI ಯೊಂದಿಗೆ ಬರಲಿದೆ, ಇದರಲ್ಲಿ ನೆಕ್ಸ್ಟ್ ಮೂವ್, ಪ್ಲೇಲಿಸ್ಟ್ ಸ್ಟುಡಿಯೋ, ಇಮೇಜ್ ಸ್ಟುಡಿಯೋ ಮತ್ತು ಲುಕ್ ಮತ್ತು ಟಾಕ್‌ನಂತಹ ನವೀನ ವೈಶಿಷ್ಟ್ಯಗಳು ಸೇರಿವೆ ಎಂದು ತಿಳಿಸಲಾಗಿದೆ.

ಇಷ್ಟೇ ಅಲ್ಲದೆ, Razr 60 Ultra ಕೆಂಪು, ಹಸಿರು ಮತ್ತು ಮರದ ಥೀಮ್‌ಗಳ ಬಣ್ಣಗಳಲ್ಲಿ ಲಭ್ಯವಿರಬಹುದು ಎಂದು ಸೂಚಿಸಿದ್ದು, ಇವು ಪ್ಯಾಂಟೋನ್‌ನಿಂದ ರಚಿತವಾಗುರಯವ ಆಯ್ಕೆಗಳಾಗಿರುವ ಸಾಧ್ಯತೆ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಂಟೋನ್ ರಿಯೊ ರೆಡ್, ಪ್ಯಾಂಟೋನ್ ಸ್ಕಾರಬ್, ಪ್ಯಾಂಟೋನ್ ಮೌಂಟೇನ್ ಟ್ರಯಲ್ ಮತ್ತು ಪ್ಯಾಂಟೋನ್ ಕ್ಯಾಬರೆ ಬಣ್ಣಗಳೊಂದಿಗೆ ಇದು ಹೊಂದಿಕೆಯಾಗುವ ನಿರೀಕ್ಷೆಯಿದೆ ಅಂದರೆ, ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಫೋನ್ ಕೂಡ ಜಾಗತಿಕ ಮಾದರಿಯ ವಿಶೇಷಣಗಳನ್ನೇ ಹೊಂದಿರಬಹುದು ಎಂದು ನಾವು ಅಂದಾಜಿಸಬಹುದು.ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ Motorola Razr 60 Ultra ಫೋನ್ ತನ್ನ ವಿಶಿಷ್ಟವಾದ ಕ್ಲಾಮ್‌ಶೆಲ್ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದ ಗಮನ ಸೆಳೆದಿದೆ.
Motorola Razr 60 Ultra ಫೋನ್ ಫಿಚರ್ಸ್ ಹೇಗಿವೆ?
ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ Motorola Razr 60 Ultra ಫೋನ್ 7-ಇಂಚಿನ 1.5K (1,224 x 2,992 ಪಿಕ್ಸೆಲ್‌ಗಳು) pOLED LTPO ಒಳಗಿನ ಡಿಸ್ಪ್ಲೇಯನ್ನು 165Hz ರಿಫ್ರೆಶ್ ದರ ಮತ್ತು 4,000 nits ಗರಿಷ್ಠ ಹೊಳಪಿನೊಂದಿಗೆ ಬಂದಿದೆ. ಇದರ ಕವರ್ ಸ್ಕ್ರೀನ್ 4-ಇಂಚಿನ (1,272 x 1,080 ಪಿಕ್ಸೆಲ್‌ಗಳು) pOLED LTPO ಡಿಸ್ಪ್ಲೇಯಾಗಿದ್ದು, 165Hz ರಿಫ್ರೆಶ್ ದರ ಮತ್ತು 3,000 nits ಗರಿಷ್ಠ ಹೊಳಪನ್ನು ಹೊಂದಿದೆ. ಈ ಎರಡೂ ಡಿಸ್ಪ್ಲೇಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸೆರಾಮಿಕ್‌ನಿಂದ ರಕ್ಷಿಸಲ್ಪಟ್ಟಿವೆ. ಫೋನ್‌ನ ಕಾರ್ಯಕ್ಷಮತೆಗಾಗಿ ಪ್ರಮುಖ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್, 16GB ವರೆಗಿನ LPDDR5X RAM ಮತ್ತು 512GB ವರೆಗಿನ UFS 4.1 ಶೇಖರಣಾ ಸಾಮರ್ಥ್ಯವನ್ನು ನೀಡಲಾಗಿದೆ. ಇದು Android 15-ಆಧಾರಿತ Hello UI ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಭಾಗದಲ್ಲಿ, ಈ Motorola Razr 60 Ultra ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ f/1.8 ಅಪರ್ಚರ್ ಮತ್ತು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು f/2.0 ಅಪರ್ಚರ್‌ನೊಂದಿಗೆ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಸೇರಿವೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಒಳಗಿನ ಡಿಸ್ಪ್ಲೇಯಲ್ಲಿ f/2.0 ಅಪರ್ಚರ್‌ನೊಂದಿಗೆ 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ. ಬ್ಯಾಟರಿ ವಿಷಯಕ್ಕೆ ಬಂದರೆ, ಈ ಫೋನ್ 68W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಮತ್ತು 30W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,700mAh ಬ್ಯಾಟರಿಯನ್ನು ಒಳಗೊಂಡಿದೆ.Motorola Razr 60 Ultra ಬಿಡುಗಡೆಯು ಹತ್ತಿರವಾಗುತ್ತಿದ್ದಂತೆ, ಇದರ ಬೆಲೆ ಮತ್ತು ಇತರ ವಿವರಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ. ಸದ್ಯದ ಅಂದಾಜಿನ ಪ್ರಕಾರ, ಈ ಫೋನಿನ ಬೆಲೆ ಭಾರತದಲ್ಲಿ ಸುಮಾರು 50 ಸಾವಿರ ರೂ.ಗಳ ಆಸುಪಾಸಿನಲ್ಲಿ ಇರಬಹುದು. ಇದು ಭಾರತೀಯ ಮಾರುಕಟ್ಟೆಯಲ್ಲಿ ಫ್ಲಿಪ್ ಫೋನ್ ವಿಭಾಗದಲ್ಲಿ ಹೊಸ ಸಂಚಲನವನ್ನು ಮೂಡಿಸುವ ನಿರೀಕ್ಷೆಯಿದೆ.


Click it and Unblock the Notifications








