ಮೋಟೋರೋಲಾದ ಬುಹುನಿರೀಕ್ಷಿತ ಫೋನ್ ರೂ 12,999 ಕ್ಕೆ

Written By:

ಮೋಟೋರೋಲಾ ಕೊನೆಗೂ ಬಹು ನಿರೀಕ್ಷೆಯ ಸ್ಮಾರ್ಟ್‌ಫೋನ್ ಮೋಟೋ ಜಿ ಹ್ಯಾಂಡ್‌ಸೆಟ್ ಅನ್ನು ಬಿಡುಗಡೆ ಮಾಡಿದೆ. ಮೋಟೋ ಜಿ ಹ್ಯಾಂಡ್‌ಸೆಟ್ ಅಧಿಕೃತವಾಗಿ ಬಿಡುಗಡೆಗೊಂಡಿದ್ದು ಮೋಟೋರೋಲಾ ಈ ಹ್ಯಾಂಡ್‌ಸೆಟ್‌ನಲ್ಲಿ ಏನೆಲ್ಲಾ ಮಾರ್ಪಾಡುಗಳನ್ನು ಮಾಡಿದೆ ಎಂಬುದು ನಿರೀಕ್ಷೆಯ ಸಂಗತಿಯಾಗಿದೆ.

ಮೋಟೋರೋಲಾದ ಉತ್ತಮ ಯಶಸ್ವಿ ಹರಿಕಾರ ಎಂದೇ ಗುರುತಿಸಿಕೊಂಡಿರುವ ಈ ಸ್ಮಾರ್ಟ್‌ಫೋನ್ ಉತ್ತ ಸುಧಾರಿತ ವೈಶಿಷ್ಟ್ಯಗಳಿಂದ ಆಸಕ್ತಿಕರ ವಿಶೇಷತೆಗಳಿಂದ ಮನಮೋಹಕವಾಗಿದೆ. ಇದರ ಜೊತೆಗೆ ಮೋಟೋರೋಲಾ ಮೋಟೋ ಎಕ್ಸ್ ಮತ್ತು Moto 360 ಸ್ಮಾರ್ಟ್‌ವಾಚ್ ಅನ್ನು ಕೂಡ ಬಿಡುಗಡೆ ಮಾಡಿದೆ.

ಮೋಟೋರೋಲಾದ ಮೋಟೋ ಜಿ ಹೆಚ್ಚುವರಿ ಮೆಮೊರಿ ಜತೆ

ಇನ್ನು ಫೋನ್‌ನ ವಿಶೇಷತೆಗಳತ್ತ ನೋಡುವುದಾದರೆ, 5 ಇಂಚಿನ (1280 x 720 pixels) ಡಿಸ್‌ಪ್ಲೇಯೊಂದಿಗೆ ಗೋರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ಇದು ನೀಡಿದೆ. ಅತ್ಯಾಧುನಿಕ ಕಿಟ್‌ಕ್ಯಾಟ್ ಓಎಸ್ ಇದರಲ್ಲಿದ್ದು 1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಜೊತೆಗೆ Adreno 305 GPU ಇದರಲ್ಲಿದೆ. 1GB RAM ಫೋನ್‌ನಲ್ಲಿದ್ದು 8ಜಿಬಿ ಮತ್ತು 16ಜಿಬಿ ಹೀಗೆ ಎರಡು ಬೇರೆ ಆಂತರಿಕ ಸಂಗ್ರಹಣೆಗಳಲ್ಲಿ ಇದು ಬಂದಿದೆ.

ಈ ಹ್ಯಾಂಡ್‌ಸೆಟ್ ಡ್ಯುಯಲ್ ಸಿಮ್ ಬೆಂಬಲವನ್ನು ಒದಗಿಸುತ್ತಿದ್ದು 10.9mm ದಪ್ಪ ಹಾಗೂ 149 ಗ್ರಾಮ್‌ಗಳು ತೂಕವನ್ನು ತೂಗುತ್ತಿದೆ. ಆಡಿಯೊ ಜಾಕ್ ಎಫ್‌ಎಮ್ ರೇಡಿಯೊ ಕೂಡ ಸೆಟ್‌ನಲ್ಲಿದೆ. 8MP ರಿಯರ್ ಕ್ಯಾಮೆರಾ ಫೋನ್‌ನಲ್ಲಿದ್ದು ಎಲ್‌ಇಡಿ ಫ್ಲ್ಯಾಶ್ ಮತ್ತು 720p HD ವೀಡಿಯೊ ದಾಖಲಾತಿ ಸೌಲಭ್ಯ ಫೋನ್‌ನಲ್ಲಿದೆ. ಫೋನ್‌ನ ಮುಂಭಾಗ ಕ್ಯಾಮೆರಾ 2MP ಆಗಿದೆ.

ಇನ್ನು ಫೋನ್‌ನ ಸಂಪರ್ಕ ವಿಶೇಷತೆಗಳಾದ 3ಜಿ, ವೈಫೈ, ಬ್ಲ್ಯೂಟೂತ್ 4.0 LE ಮತ್ತು ಜಿಪಿಎಸ್ ಮೋಡಿ ಮಾಡುವಂತಿದೆ. 2,070mAh ಬ್ಯಾಟರಿ ಸಾಮರ್ಥ್ಯ ಡಿವೈಸ್‌ನಲ್ಲಿದೆ.

English summary
This article tells about Motorola Reveals New Moto G Successor with External Memory Slot at Rs 12,999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot