Home
ಮೊಬೈಲ್

ಶಿಯೋಮಿಗೂ ನಡುಕ ಹುಟ್ಟಿಸುವ ಮೊಟೊ ಸ್ಮಾರ್ಟ್ ಫೋನ್..! ಬೆಲೆಯಲ್ಲಿಯೇ ಮೋಡಿ ಮಾಡಲಿದೆ..!

By Srinidhi

ಚೀನಾ ಮೂಲದ ಲಿನೊವೊ ಒಡೆತನಕ್ಕೆ ಸೇರಿಕೊಂಡಿರುವ ಮೊಟೊರೊಲಾ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿದೆ. ಇದಲ್ಲದೇ ಮತ್ತೊಂದು ಬಜೆಟ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡುವ ಸನಿಹದಲ್ಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನ್ ಅನ್ನು ಶೀಘ್ರವೇ ಮಾರಾಟ ಮಾಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮೊಟೊ ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನ್ ಬಗ್ಗೆ ಮಾಹಿತಿಯೂ ಮುಂದಿನಂತಿದೆ.

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಆಂಡ್ರಾಯ್ಡ್ ಗೋ ಸ್ಮಾರ್ಟ್ ಪೋನ್ ಗಳು ಮಾರಾಟವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಟಾಪ್ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ಆಂಡ್ರಾಯ್ಡ್ ಗೋ ಸ್ಮಾರ್ಟ್ ಪೋನ್ ಗಳನ್ನು ಲಾಂಚ್ ಮಾಡುತ್ತಿವೆ. ಇದೇ ಸಾಲಿಗೆ ಮೊಟೊರೊಲಾ ಸೇರಿಕೊಳ್ಳಲಿದ್ದು, ಆಂಡ್ರಾಯ್ಡ್ ಗೋ ಸ್ಮಾರ್ಟ್ ಪೋನ್ ಗಳು ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಬೆಲೆಯಲ್ಲಿಯೇ ಮೋಡಿ ಮಾಡಲಿದೆ ಮೊಟೊ ಸ್ಮಾರ್ಟ್ ಫೋನ್..!

ಮೊಟೊ C2 ಸ್ಮಾರ್ಟ್ ಫೋನ್

ಮೊಟೊ C2 ಸ್ಮಾರ್ಟ್ ಫೋನ್

ಆಂಡ್ರಾಯ್ಡ್ ಗೋ ಸ್ಮಾರ್ಟ್ ಪೋನ್ ಸಾಲಿಗೆ ಹೊಸದಾಗಿ ಸೇರ್ಪಡೆಯಾಗುವ ಮೊಟೊ C2, ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡುವ ಸಾಧ್ಯತೆ ಇದೆ. ಸದ್ಯ ಮೊಟೊ C XT1920 ಮಾಡಲ್ ಹೆಸರಿನಲ್ಲಿ ಕಾಣಿಸಿಕೊಂಡಿದ್ದು, ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯೂ ದಟ್ಟವಾಗಿದೆ.

RAM ಮತ್ತು ಸ್ಟೋರೆಜ್

RAM ಮತ್ತು ಸ್ಟೋರೆಜ್

ಆಂಡ್ರಾಯ್ಡ್ ಗೋ ಸ್ಮಾರ್ಟ್ ಪೋನ್ ಗಳಲ್ಲಿ ಇರುವಂತೆ ಮೊಟೊ C2ನಲ್ಲಿಯೂ 1GB RAM ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ 16GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಇದಲ್ಲದೇ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಇದರೊಂದಿಗೆ ಕಾಣಬಹುದಾಗಿದೆ.

ಡಿಸ್ ಪ್ಲೇ:

ಡಿಸ್ ಪ್ಲೇ:

ಮೊಟೊ C2 ಆಂಡ್ರಾಯ್ಡ್ ಗೋ ಸ್ಮಾರ್ಟ್ ಪೋನಿನಲ್ಲಿ 5.2 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಇದು ಫುಲ್ ಸ್ಕ್ರಿನ್ ಡಿಸ್ ಪ್ಲೇ ವಿನ್ಯಾಸವನ್ನು ಹೊಂದಿರಲಿದೆ. ಇದಲ್ಲದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೋನ್ ಗಳಿಗಿಂತ ಭಿನ್ನವಾಗಿ ಈ ಸ್ಮಾರ್ಟ್ ಫೋನ್ ಕಾಣಿಸಿಕೊಳ್ಳಲಿದೆ.

ಬ್ಯಾಟರಿ

ಬ್ಯಾಟರಿ

ಮೊಟೊ C2 ಆಂಡ್ರಾಯ್ಡ್ ಗೋ ಸ್ಮಾರ್ಟ್ ಪೋನಿನಲ್ಲಿ 2000mAh ಬ್ಯಾಟರಿಯನ್ನು ನೀಡಲಾಗಿದ್ದು, ಇದು ಕಡಿಮೆಯಾದರು ಸಹ ಹೆಚ್ಚಿನ ಶಕ್ತಿಯನ್ನು ಬೇಡದ ಹಿನ್ನಲೆಯಲ್ಲಿ ಬ್ಯಾಟರಿ ಬಾಳಿಕೆಯೂ ಹೆಚ್ಚು ಆಗಿರಲಿದೆ. ಈ ಹಿನ್ನಲೆಯಲ್ಲಿ ಮೊಟೊ C2 ಆಂಡ್ರಾಯ್ಡ್ ಗೋ ಸ್ಮಾರ್ಟ್ ಪೋನ್ ಬೆಸ್ಟ್ ಬ್ಯಾಕಪ್ ಇರಲಿದೆ.

ಬೆಲೆ

ಬೆಲೆ

ಮೊಟೊ C2 ಆಂಡ್ರಾಯ್ಡ್ ಗೋ ಸ್ಮಾರ್ಟ್ ಪೋನ ಬೆಲೆಯೂ ರೂ. 3000ದಿಂದ 4000ದ ಒಳಗೆ ದೊರೆಯಲಿದೆ ಎನ್ನಲಾಗಿದೆ. ಈ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗುವ ಸಾಧ್ಯತೆ ಇದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸಿಕೊಳ್ಳಲಿದೆ. ಒಟ್ಟಿನಲ್ಲಿ ಮತ್ತೊಂದು ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
Motorola first android go smrtphone. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+