Home
ಮೊಬೈಲ್

ಮೊಟೊರೋಲಾದ ಹೊಸ “ಸಿಗ್ನೇಚರ್” ಪ್ರೀಮಿಯಂ ಸ್ಮಾರ್ಟ್‌ಫೋನ್ ಲೀಕ್!

ಮೋಟೋರೋಲಾ ತನ್ನ ಪ್ರೀಮಿಯಂ ಸ್ಮಾರ್ಟ್‌ಫೋನ್ ಸಾಲಿಗೆ ಹೊಸ " ಸಿಗ್ನೇಚರ್"(Signature) ಬ್ರ್ಯಾಂಡ್‌ನಡಿಯಲ್ಲಿ ಮತ್ತೊಂದು ಆಕರ್ಷಕ ಸಾಧನವನ್ನು ಪರಿಚಯಿಸುವ ತಯಾರಿಯಲ್ಲಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.. ಇತ್ತೀಚೆಗೆ ಲೀಕ್ ಆದ ಚಿತ್ರಗಳ ಪ್ರಕಾರ, ಈ ಫೋನ್ ವಿನ್ಯಾಸವನ್ನು ನೋಡುವುದಾದರೆ, ಇದು ಈಗಾಗಲೇ ಪರಿಚಯಗೊಂಡಿರುವ ಮೊಟೊರೊಲಾದ ಮುಂದಿನ ತಲೆಮಾರಿನ Motorola Edge 70 Ultra ಗೆ ಹೋಲಿಕೆಯಾಗಿದ್ದು, ವಿಭಿನ್ನ ಹೆಸರಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಅಧಿಕೃತ ಘೋಷಣೆ ಇನ್ನೂ ಆಗಿಲ್ಲದಿದ್ದರೂ, ಲೀಕ್‌ಗಳು ಬಳಕೆದಾರರ ಕುತೂಹಲವನ್ನು ಹೆಚ್ಚಿಸಿವೆ.

ಟಿಪ್‌ಸ್ಟರ್ ಇವಾನ್ ಬ್ಲಾಸ್ (@evleaks) ಹೇಳಲಾದ ಮೊಟೊರೊಲಾ ಸಿಗ್ನೇಚರ್ ಫೋನ್‌ನ ರೆಂಡರ್‌ಗಳನ್ನು ಸೋರಿಕೆ ಮಾಡಿದ್ದಾರೆ. ಲೀಕ್ ಆದ ರೆಂಡರ್‌ಗಳು ಕಾರ್ಬನ್ ಮತ್ತು ಮಾರ್ಟಿನಿ ಆಲಿವ್ ಎರಡು ಬಣ್ಣಗಳಲ್ಲಿ ಫೋನ್‌ನ ಹಿಂಭಾಗದ ವಿನ್ಯಾಸವನ್ನು ಸ್ಪಷ್ಟವಾಗಿ ತೋರಿಸುತ್ತವೆ. ಚೌಕಾಕಾರದ ರಿಯರ್ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಮತ್ತು LED ಫ್ಲ್ಯಾಶ್ ಇರುವುದನ್ನು ಕಾಣಬಹುದು. ಹಿಂಬದಿ ಪ್ಯಾನೆಲ್‌ಗೆ ಟೆಕ್ಸ್ಚರ್ಡ್ ಫಿನಿಷ್ ನೀಡಲಾಗಿದ್ದು, ಮಧ್ಯದಲ್ಲಿ ಮೋಟೋರೋಲಾ ಲೋಗೋ ಕಾಣಿಸುತ್ತದೆ. ಈ ವಿನ್ಯಾಸವು ಪ್ರೀಮಿಯಂ ಲುಕ್ ನೀಡುವ ನಿರೀಕ್ಷೆಯಿದೆ.

ಈ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ ಹೋಲ್-ಪಂಚ್ ಕಟ್‌ಔಟ್ ಹೊಂದಿರುವ ಡಿಸ್‌ಪ್ಲೇ ಜೊತೆಗೆ ಕಾಣಿಸಿಕೊಳ್ಳುತ್ತದೆ. ಈ ಫೋನ್‌ಗೆ ಮೆಟಲ್ ಫ್ರೇಮ್ ಇರಬಹುದೆಂದು ಲೀಕ್ ಸೂಚಿಸಿದ್ದು, ಪವರ್ ಬಟನ್ ಮತ್ತು ವಾಲ್ಯೂಮ್ ಕೀಗಳು ಬಲಭಾಗದಲ್ಲಿ ಇರಲಿದ್ದು, ಎಡಭಾಗವನ್ನು ಸರಳವಾಗಿ ವಿನ್ಯಾಸಗೊಳಿಸಿರುವ ಸಾಧ್ಯತೆ ಇದೆ. ಆದರೆ, ಈ ಕುರಿತಂತೆ ಕಂಪನಿಯಿಂದ ಯಾವುದೇ ಅಧಿಕೃತ ದೃಢೀಕರಣ ಇನ್ನೂ ಇಲ್ಲದ ಕಾರಣ, ಈ ಮಾಹಿತಿಯನ್ನು ತಾತ್ಕಾಲಿಕವೆಂದು ಪರಿಗಣಿಸಬೇಕು. ಇನ್ನು "Signature" ಬ್ರ್ಯಾಂಡ್ Motorola Edge 70 Ultra ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿರಬಹುದು ಎಂಬುದನ್ನು ಸಹ ನೋಡೋಣ ಬನ್ನಿ.

ಮೊಟೊರೋಲಾದ ಹೊಸ “ಸಿಗ್ನೇಚರ್” ಪ್ರೀಮಿಯಂ ಸ್ಮಾರ್ಟ್‌ಫೋನ್ ಲೀಕ್!

ಆನ್‌ಲೈನಿನಲ್ಲಿ ಸೋರಿಕೆಯಾಗಿರುವ Motorola Edge 70 Ultra ಸ್ಮಾರ್ಟ್‌ಫೋನಿನ ಹಾರ್ಡ್‌ವೇರ್ ಸ್ಪೆಸಿಫಿಕೇಶನ್‌ಗಳ ಬಗ್ಗೆ ಮಾತನಾಡುವುದಾದರೆ, Motorola Edge 70 Ultra ಮಾದರಿಯಂತೆಯೇ ಈ ಸಿಗ್ನೇಚರ್ ಸ್ಮಾರ್ಟ್‌ಫೋನ್ ಕೂಡ Qualcomm‌ನ 3nm ತಂತ್ರಜ್ಞಾನದ Snapdragon 8 Gen 5 ಪ್ರೊಸೆಸರ್‌ನಿಂದ ಚಾಲಿತವಾಗಬಹುದು. ಇದರಲ್ಲಿ 6.7 ಇಂಚಿನ ಫ್ಲ್ಯಾಟ್ OLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 1.5K ರೆಸಲ್ಯೂಷನ್ ಇರಬಹುದೆಂದು ವರದಿಗಳು ಸೂಚಿಸುತ್ತಿವೆ. ಆದರೆ, ಈ ಎಲ್ಲಾ ಮಾಹಿತಿಗಳು ಕೇವಲ ಆನ್‌ಲೈನಿನಲ್ಲಿ ಲೀಕ್ ಆಗಿರುವ ಮಾಹಿಗಳು ಎಂಬುದನ್ನು ಗಮನಿಸಿ.

ಭಾರತದಲ್ಲಿ ಇತ್ತೀಚಿಗಷ್ಟೇ Motorola Edge 70 ಫೋನ್ ಮಧ್ಯಮ ಬೆಲೆಯಲ್ಲಿ ಪರಿಚಯಗೊಂಡಿದೆ. ಇದೀಗ ಮೋಟೋರೋಲಾದ ಹೊಸ ಸಿಗ್ನೇಚರ್ Motorola Edge 70 Ultra ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಹೊಸ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಅಧಿಕೃತ ಘೋಷಣೆ ಮತ್ತು ಲಾಂಚ್ ದಿನಾಂಕದ ವಿವರಗಳು ಇನ್ನೂ ಬಾಕಿ ಇದ್ದರೂ, ಲೀಕ್‌ಗಳಿಂದ ಲಭ್ಯವಾದ ಮಾಹಿತಿ ಟೆಕ್ ಪ್ರೇಮಿಗಳ ಗಮನವನ್ನು ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಮೋಟೋರೋಲಾ ಈ ಹೊಸ ಫೋನ್ ಮೂಲಕ ಯಾವ ಹೊಸ ಅನುಭವವನ್ನು ನೀಡಲಿದೆ ಎಂಬುದನ್ನು ನೋಡಬೇಕು.

ಮಧ್ಯಮ ಪ್ರೀಮಿಯಂ ಬೆಲೆಯಲ್ಲಿ ಆಗಮಿಸಿದೆ Motorola Edge 70!
ಮೊಟೊರೊಲಾ ತನ್ನ ಬಹುನಿರೀಕ್ಷಿತ ಮಿಡ್‌ರೇಂಜ್-ಪ್ರೀಮಿಯಂ Motorola Edge 70 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಇದೇ ಡಿ.15, ಸೋಮವಾರದಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಮಧ್ಯಮ ಬೆಲೆ ವಿಭಾಗದಲ್ಲಿ ಪ್ರೀಮಿಯಂ ಅನುಭವ ನೀಡುವ ಗುರಿಯೊಂದಿಗೆ ಬಂದಿರುವ ಈ ಫೋನ್, ಶಕ್ತಿಶಾಲಿ Qualcommಪ್ರೊಸೆಸರ್, ಆಧುನಿಕ ಡಿಸೈನ್ ಮತ್ತು ಎಐ ಆಧಾರಿತ ವೈಶಿಷ್ಟ್ಯಗಳ ಮೂಲಕ ಭಾರತೀಯ ಬಳಕೆದಾರರ ಗಮನ ಸೆಳೆಯುವಂತಿದೆ. ಹಾಗಾದರೆ, ಮೊಟೊರೊಲಾ ಪರಿಚಯಿಸಿರುವ ಹೊಸ Motorola Edge 70 ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
Motorola is reportedly gearing up to launch a new premium smartphone under its “Signature” branding. Leaked images suggest the device will feature a design similar to the Motorola Edge 70 Ultra, but is expected to debut under a different name.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+