ಮೊಟೋದಿಂದ ಸ್ವಾತಂತ್ರ್ಯೋತ್ಸವಕ್ಕೆ ಮೂರು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ..!
ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಅಭಿಮಾನಿ ಬಳಗವನ್ನು ಹೊಂದಿರುವ ಮೊಟೊರೊಲಾ ಈಗಾಗಲೇ ಮಾರುಕಟ್ಟೆಗೆ Z3 ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದೆ. ಇದರೊಂದಿಗೆ ಇನ್ನು ಹಲವು ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುವ ಸನಿಹದಲ್ಲಿ. ಮೂಲಗಳ ಪ್ರಕಾರ ಆಗಸ್ಟ್ 15 ರಂದು ಚೀನಾ ಮಾರುಕಟ್ಟೆಯಲ್ಲಿ ಮೂರು ಸ್ಮಾರ್ಟ್ ಫೋನ್ ಗಳನ್ನ ಲಾಂಚ್ ಮಾಡಲಿದೆ ಎನ್ನಲಾಗಿದೆ.
ಮೊಟೊರೊಲಾ ಮಾರುಕಟ್ಟೆಗೆ ಹೊಸದಾಗಿ P ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುತ್ತಿದೆ. ಮೊಟೊ P 30, ಮೊಟೊ P 30 ನೋಟ್ ಮತ್ತು ಮೊಟೊ P 30 ಪ್ಲೇ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುತ್ತಿದೆ. ಈ ಮೂರು ಸ್ಮಾರ್ಟ್ ಫೋನ್ ಕುರಿತ ಮಾಹಿತಿಯೂ ಲೀಕ್ ಆಗಿದೆ.

ಮೊಟೊ P 30 ಸ್ಮಾರ್ಟ್ ಫೋನ್ ಎರಡು ಆವೃತ್ತಿಯಲ್ಲಿ ಮಾರಾಟವಾಗಲಿದೆ. 6 GB RAM + 64 GB ಇಂಟರ್ನಲ್ ಮೆಮೊರಿಯೊಂದಿಗೆ ಹಾಗೂ 6 GB RAM + 128 GB ಇಂಟರ್ನಲ್ ಮೆಮೊರಿಯೊಂದಿಗೆ ಮತ್ತೊಂದು ಆವೃತ್ತಿಯಲ್ಲಿಯೂ ದೊರೆಯಲಿದೆ. ಈ ಸ್ಮಾರ್ಟ್ ಫೋನ್ ಜೆಡ್ ವೈಟ್, ಬ್ರೈಟ್ ಬ್ಲಾಕ್ ಮತ್ತು ಅರೋಮ್ ಹುಸ್ ಬಣ್ಣಗಳಲ್ಲಿ ಮಾರಾಟವಾಗಲಿದೆ.
ಮೊಟೊ P 30 ಪ್ಲೇ ಸ್ಮಾರ್ಟ್ ಫೋನ್ ಒಂದು ಆವೃತ್ತಿಯಲ್ಲಿ ಮಾತ್ರವೇ ಮಾರಾಟವಾಗಲಿದ್ದು, 4 GB RAM + 64 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಈ ಸ್ಮಾರ್ಟ್ ಪೋನ್ ಸಹ ಐಸ್ ಜೆಡ್ ವೈಟ್ ಮತ್ತು ಬೈಟ್ ಬ್ಲಾಕ್ ಬಣ್ಣಗಳಲ್ಲಿ ದೊರೆಯಲಿದೆ.

ಮೊಟೊ P 30 ನೋಟ್ ಸ್ಮಾರ್ಟ್ ಫೋನ್ ಸಹ ಎರಡು ಆವೃತಿಯಲ್ಲಿ ಮಾರಾಟವಾಗಲಿದೆ. 4GB RAM + 64 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದ್ದು, ಮತ್ತೊಂದು ಆವೃತ್ತಿ 6GB RAM + 64 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ಬ್ರೈಟ್ ಬ್ಲಾಕ್ ಬಣ್ಣದಲ್ಲಿ ದೊರೆಯಲಿದೆ.
ಇದರೊಂದಿಗೆ ಮೊಟೊ Z3 ಸ್ಮಾರ್ಟ್ ಫೋನ್ ಸಹ ಮಾರಾಟವಾಗಲಿದೆ. 6 ಇಂಚಿನ OLED ಡಿಸ್ ಪ್ಲೇಯನ್ನು ಇದರಲ್ಲಿ ಕಾಣಬಹುದಾಗಿದೆ. ಅಲ್ಲದೇ ಇದು 18:9 ಅನುಪಾತದಿಂದ ಕೂಡಿದೆ. 4 GB RAM + 64 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದೆ.


Click it and Unblock the Notifications








