Motorola Signature ಫೋನ್ ಲಾಂಚ್: ಫೀಚರ್ಸ್ ಮತ್ತು ಬೆಲೆ ನೋಡಿ!
ಭಾರತದ ಮಾರುಕಟ್ಟೆಗೆ ನಾಳೆ (ಜ.8,ಗುರುವಾರ) ಬಿಡುಗಡೆಯಾಗುವ ನಿರೀಕ್ಷೆಯಿರುವ ಬಹುನಿರೀಕ್ಷಿತ Motorola Signature ಫೋನ್ ಅನ್ನು ಇಂದು CES 2026ರಲ್ಲಿ ಅಧಿಕೃತವಾಗಿ ಪರಿಚಯಿಸಲಾಗಿದೆ. ಹಲವು ದಿನಗಳಿಂದ ಟೆಕ್ ವಲಯದಲ್ಲಿ ಚರ್ಚೆಯಾಗುತ್ತಿದ್ದ ಈ ಡಿವೈಸ್, ನಿರೀಕ್ಷೆಯಂತೆಯೇ ಪ್ರೀಮಿಯಂ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಆಗಮನಿಸಿದ್ದು, ವಿಮಾನ-ದರ್ಜೆಯ ಅಲ್ಯೂಮಿನಿಯಂ ಫ್ರೇಮ್ ಮತ್ತು ಟ್ವಿಲ್ ಲಿನಿನ್-ಪ್ರೇರಿತ ಟೆಕಶ್ಚರ್‌ಗಳ ವಿನ್ಯಾಸ, ನಾಲ್ಕು 50-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5,200mAh ಬ್ಯಾಟರಿಯಂತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Motorola Signature: ಬೆಲೆ ಮತ್ತು ಲಭ್ಯತೆ
ಜಾಗತಿಕವಾಗಿ Motorola Signature ಫೋನ್ ಒಂದೇ ವೇರಿಯಂಟ್‌ನಲ್ಲಿ ಪರಿಚಯಗೊಂಡಿದದ್ದು, ಇದು 12GB RAM ಮತ್ತು 512GB ಸ್ಟೋರೇಜ್ ಹೊಂದಿದೆ. ಇದರ ಅಂತರರಾಷ್ಟ್ರೀಯ ಬೆಲೆ EUR 899.99 ಆಗಿದ್ದು, ಭಾರತೀಯ ಮೌಲ್ಯದಲ್ಲಿ ಸುಮಾರು ₹82,000 ಆಗುತ್ತದೆ. ಪ್ರಾರಂಭಿಕ ಹಂತದಲ್ಲಿ ಈ ಫೋನ್ ಮಧ್ಯಪ್ರಾಚ್ಯ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ. ಪ್ರತಿ ದೇಶದಲ್ಲಿ ಬೆಲೆ ಮತ್ತು ಮಾರಾಟದ ಸಮಯ ಬದಲಾಗುವ ಸಾಧ್ಯತೆ ಇದೆ.
Motorola Signature: ಪ್ರಮುಖ ಫೀಚರ್ಸ್
ಹೊಸ Motorola Signature ಫೋನಿನ ವಿನ್ಯಾಸದ ವಿಷಯದಲ್ಲಿ ಈ ವರೆಗೂ ಕಾಣದಂತಹ ವಿಭಿನ್ನ ಗುರುತನ್ನು ಹೊಂದಿದೆ. ಕಾಂಟೂರ್ಡ್ ಬಾಡಿ, ಏರ್‌ಕ್ರಾಫ್ಟ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್ ಹಾಗೂ ಲಿನನ್ ಪ್ರೇರಿತ ಟೆಕ್ಸ್ಚರ್ ಫಿನಿಷ್‌ಗಳು ಇದಕ್ಕೆ ಲಕ್ಸುರಿ ಲುಕ್ ನೀಡಿವೆ. Pantone Carbon ಮತ್ತು Pantone Martini Olive ಎಂಬ ಎರಡು ಬಣ್ಣ ಆಯ್ಕೆಗಳು ಫ್ಯಾಷನ್ ಹಾಗೂ ಪ್ರೊಫೆಷನಲ್ ಬಳಕೆದಾರರನ್ನು ಸಮಾನವಾಗಿ ಆಕರ್ಷಿಸುವಂತೆ ರೂಪಿಸಲಾಗಿದೆ. ಆನ್-ಡಿಮಾಂಡ್ ವೈಟ್-ಗ್ಲೋವ್ ಸಹಾಯದೊಂದಿಗೆ ಐಷಾರಾಮಿ ಅನುಭವವನ್ನು ಒದಗಿಸುತ್ತದೆ.'

ಡಿಸ್ಪ್ಲೇ ವಿಭಾಗದಲ್ಲಿ, Motorola Signature 6.8 ಇಂಚಿನ Super HD LTPO AMOLED ಸ್ಕ್ರೀನ್ ಹೊಂದಿದ್ದು, ಇದು165Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ 6,200 ನಿಟ್ಸ್ ಬ್ರೈಟ್ನೆಸ್‌ನ್ನು ಬೆಂಬಲಿಸುತ್ತದೆ. 360Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 100 ಪ್ರತಿಶತ DCI-P3 ಬಣ್ಣದ ಗ್ಯಾಮಟ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ನಿಂದ ರಕ್ಷಿಸಲ್ಪಟ್ಟಿದೆ. ಇದಲ್ಲದೆ, Pantone ವೆರಿಫೈಡ್ ಕಲರ್ ಅಕ್ಯುರಸಿಯಿಂದ ಫೋನ್‌ನ ಪ್ಯಾನೆಲ್ ಬಣ್ಣ ಮತ್ತು ಚರ್ಮದ ಟೋನ್ ನಿಖರತೆಗಾಗಿ ಪ್ಯಾಂಟೋನ್-ಮೌಲ್ಯೀಕರಿಸಲ್ಪಟ್ಟಿದೆ ಎಂದು ಹೇಳಲಾಗಿದೆ.

ಕಾರ್ಯಕ್ಷಮತೆಗಾಗಿ, ಈ ಫೋನ್ Qualcomm Snapdragon 8 Gen 5 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದರೊಂದಿಗೆ 16GB LPDDR5X RAM ಮತ್ತು 512GB UFS 4.1 ಆನ್‌ಬೋರ್ಡ್ ಸ್ಟೋರೇಜ್ ಇದೆ. ಇದು ಇನ್-ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್, ಫೇಸ್ ಅನ್‌ಲಾಕ್ ಬೆಂಬಲ ಮತ್ತು ಥಿಂಕ್‌ಶೀಲ್ಡ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಆಡಿಯೊಗಾಗಿ, ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳಿವೆ.
ಸಾಫ್ಟ್‌ವೇರ್ ಅನುಭವವು Motorola Signatureನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈ ಸ್ಮಾರ್ಟ್‌ಫೋನ್ Android 16 ಆಧಾರಿತ Hello UI ಮೇಲೆ ಕಾರ್ಯನಿರ್ವಹಿಸುತ್ತದೆ. ಕಂಪನಿ ಈ ಫೋನ್‌ಗೆ 7 ವರ್ಷಗಳ OS ಅಪ್‌ಡೇಟ್ ಮತ್ತು 7 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್ ನೀಡುವುದಾಗಿ ಘೋಷಿಸಿದ್ದು, ಇದು ಪ್ರೀಮಿಯಂ ಆಂಡ್ರಾಯ್ಡ್ ಫೋನ್‌ಗಳಲ್ಲಿ ಅಪರೂಪದ ಭರವಸೆ ಎಂದು ಹೇಳಬಹುದು. ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ವೈಟ್-ಗ್ಲೋವ್ ಅಸಿಸ್ಟೆನ್ಸ್ ಸೇವೆಯನ್ನೂ ಒದಗಿಸಲಾಗುತ್ತದೆ.
ಫೋಟೋಗ್ರಫಿ ಪ್ರಿಯರಿಗೆ Motorola Signature ವಿಶೇಷ ಗಮನ ನೀಡುತ್ತದೆ. ಈ ಫೋನಿನ ಹಿಂಭಾಗದಲ್ಲಿ 50MP Sony LYTIA ಪ್ರೈಮರಿ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್ ಹೊಂದಿರುವ 50MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ. ಫೋನ್‌ನ ಹಿಂಭಾಗದಲ್ಲಿ ಮಲ್ಟಿಸ್ಪೆಕ್ಟ್ರಲ್ 3-ಇನ್-1 ಲೈಟ್ ಸೆನ್ಸರ್ ಇದೆ. ಮುಂಭಾಗದಲ್ಲಿರುವ 50MP ಸೆಲ್ಫಿ ಕ್ಯಾಮೆರಾ ವ್ಲಾಗಿಂಗ್ ಮತ್ತು ವಿಡಿಯೋ ಕಾಲಿಂಗ್‌ಗೆ ಸಹಕಾರಿಯಾಗುತ್ತದೆ.
ಬ್ಯಾಟರಿ ಮತ್ತು ಕನೆಕ್ಟಿವಿಟಿ ವಿಷಯದಲ್ಲೂ ಈ ಫೋನ್ ಪ್ರೀಮಿಯಂ ಮಟ್ಟವನ್ನು ಹೊಂದಿದ್ದು, ಇದು 5,200mAh ಬ್ಯಾಟರಿ 90W ಫಾಸ್ಟ್ ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. Wi-Fi 7, Bluetooth 6, 5G, NFC ಕನೆಕ್ಟಿವಿಟಿ ವೈಶಿಷ್ಟ್ಯಗಳಲ್ಲಿ ವೈ-ಫೈ 7, ಬ್ಲೂಟೂತ್ 6, 5G, 4G LTE, NFC, GPS, ಮತ್ತು USB ಟೈಪ್-C ಸೇರಿವೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 + IP69-ರೇಟೆಡ್ ಬಿಲ್ಡ್ ಇದ್ದು, 162.1 x 76.4 x 6.99mm ಅಳತೆ ಮತ್ತು 186g ತೂಕವನ್ನು ಹೊಂದಿದೆ.


Click it and Unblock the Notifications








