Home
ಮೊಬೈಲ್

ಪ್ರೀಮಿಯಂ ಕ್ಲಾಸ್ Motorola Signature ಬಿಡುಗಡೆ: ಬೆಲೆ ಮತ್ತು ಫೀಚರ್ಸ್‌ಗೆ ಫಿಧಾ!

ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಅತ್ಯಂತ ಕಾತುರದಿಂದ ಎದುರುನೋಡುತ್ತಿದ್ದ Motorola Signature ಸ್ಮಾರ್ಟ್‌ಫೋನ್ ಇಂದು(ಜ.23 ಶುಕ್ರವಾರ) ದೇಶದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಮೊಟೊರೊಲಾ ಕಂಪೆನಿಯು ಮುಂಬೈನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಈ ಹೊಸ Motorola Signature ಸ್ಮಾರ್ಟ್‌ಫೋನ್ ಪರಿಚಯಗೊಂಡಿದ್ದು, ಈ ಪ್ರೀಮಿಯಂ ಫೋನ್ ತನ್ನ ಆಕರ್ಷಕ ಡಿಸೈನ್, ಕಾರ್ಯಕ್ಷಮತೆ ಮತ್ತು ಲೈಫ್ಸ್ಟೈಲ್ ಸೇವೆಗಳ ಸಂಯೋಜನೆಯೊಂದಿಗೆ ಗ್ರಾಹಕರ ಗಮನ ಸೆಳೆಯುತ್ತಿದೆ. ಹಾಗಾದರೆ, ಹೊಸ Motorola Signature ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆಗಳು ಎಷ್ಟು ಮತ್ತು ಸಂಪೂರ್ಣ ಫೀಚರ್ಸ್ ಹೇಗಿವೆ ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

Motorola Signature: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Motorola Signature ಫೋನ್ ಬೆಲೆ 59,999 ರೂ. ರಿಂದ ಆರಂಭವಾಗುತ್ತದೆ. 12GB RAM ಮತ್ತು 256GB ಸ್ಟೋರೇಜ್ ಇರುವ ಬೇಸ್ ವೇರಿಯಂಟ್‌ಗೆ ಈ ಬೆಲೆ ನಿಗದಿಯಾಗಿದೆ. ಇದರ 16GB RAM + 512GB ಸ್ಟೋರೇಜ್ ಮಾದರಿಯ ಬೆಲೆ ರೂ. 64,999 ಆಗಿದ್ದು, 16GB RAM ಮತ್ತು 1TB ಸ್ಟೋರೇಜ್ ಹೊಂದಿರುವ ಟಾಪ್ ವೇರಿಯಂಟ್ ರೂ. 69,999ಕ್ಕೆ ಲಭ್ಯ. HDFC ಹಾಗೂ Axis ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ರೂ. 5,000 ತಕ್ಷಣದ ರಿಯಾಯಿತಿ ಅಥವಾ ರೂ. 5,000 ವರೆಗೆ ಎಕ್ಸ್ಚೇಂಜ್ ಬೋನಸ್ ಸಿಗುತ್ತದೆ. ಜನವರಿ 30ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಆರಂಭವಾಗಲಿರುವ ಈ ಫೋನ್ Pantone Carbon ಮತ್ತು Pantone Martini Olive ಎಂಬ ಎರಡು ಪ್ರೀಮಿಯಂ ಬಣ್ಣಗಳಲ್ಲಿ ಲಭ್ಯವಿರಲಿದೆ.

ಪ್ರೀಮಿಯಂ ಕ್ಲಾಸ್ Motorola Signature ಬಿಡುಗಡೆ: ಬೆಲೆ ಮತ್ತು ಫೀಚರ್ಸ್‌ಗೆ ಫಿಧಾ

Motorola Signature: ಪ್ರಮುಖ ವೈಶಿಷ್ಟ್ಯಗಳು
ಡಿಸ್ಪ್ಲೇ ವಿಭಾಗದಲ್ಲಿ Motorola Signature ಫೋನ್ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. 6.8 ಇಂಚಿನ Super HD LTPO Extreme AMOLED ಡಿಸ್ಪ್ಲೇ, 165Hz ರಿಫ್ರೆಶ್ ರೇಟ್‌ನೊಂದಿಗೆ ಸ್ಮೂತ್ ವೀಕ್ಷಣಾ ಅನುಭವ ನೀಡುತ್ತದೆ. ಡಾಲ್ಬಿ ವೀಷನ್, HDR10+ ಬೆಂಬಲ ಮತ್ತು 6,200 ನಿಟ್ಸ್ ಪೀಕ್ ಬ್ರೈಟ್‌ನೆಸ್ ಇರುವುದರಿಂದ ಗೇಮಿಂಗ್, ವೀಡಿಯೊ ಸ್ಟ್ರೀಮಿಂಗ್ ಮತ್ತು ಹೊರಾಂಗಣ ಬಳಕೆಗೆ ಇದು ಸೂಕ್ತವಾಗಿದೆ. ತೇವವಿರುವ ಬೆರಳಿನಿಂದಲೂ ಸ್ಕ್ರೀನ್ ಬಳಸಲು ಸಹಾಯ ಮಾಡುವ Smart Water Touch ಫೀಚರ್ ಇದರಲ್ಲಿ ಸೇರಿದೆ.

ಕಾರ್ಯಕ್ಷಮತೆಯ ವಿಷಯಕ್ಕೆ ಬಂದರೆ, Motorola Signature ನಲ್ಲಿ Qualcomm Snapdragon 8 Gen 5 ಪ್ರೊಸೆಸರ್ ಬಳಸಲಾಗಿದೆ. 3nm ತಂತ್ರಜ್ಞಾನದಲ್ಲಿ ನಿರ್ಮಿತ ಈ ಚಿಪ್‌ಸೆಟ್ ವೇಗದ ಕಾರ್ಯಕ್ಷಮತೆ ಮತ್ತು ಉತ್ತಮ ಪವರ್ ಎಫಿಷಿಯನ್ಸಿ ನೀಡುತ್ತದೆ. ಫೋನ್‌ನಲ್ಲಿ 16GB ವರೆಗೆ LPDDR5x RAM ಮತ್ತು 1TB ವರೆಗೆ UFS 4.1 ಸ್ಟೋರೇಜ್ ಸಿಗುತ್ತದೆ. Android 16 ಆಧಾರಿತ Hello UI ಇದರ ಸಾಫ್ಟ್‌ವೇರ್ ಅನುಭವವಾಗಿದೆ. ಜೊತೆಗೆ IP68 ಮತ್ತು IP69 ರೇಟಿಂಗ್, MIL-STD 810H ಪ್ರಮಾಣಪತ್ರ ಹಾಗೂ Gorilla Glass Victus 2 ರಕ್ಷಣೆ ಫೋನ್‌ಗೆ ಬಲ ಮತ್ತು ದೀರ್ಘಾಯುಷ್ಯ ನೀಡುತ್ತವೆ.

ಪ್ರೀಮಿಯಂ ಕ್ಲಾಸ್ Motorola Signature ಬಿಡುಗಡೆ: ಬೆಲೆ ಮತ್ತು ಫೀಚರ್ಸ್‌ಗೆ ಫಿಧಾ

ಫೋಟೋಗ್ರಫಿ ಪ್ರಿಯರಿಗೆ Motorola Signature ಅತ್ಯುತ್ತ ಆಯ್ಕೆಯಾಗಿದೆ. ಇದರ ಹಿಂಭಾಗದಲ್ಲಿ 50MP Sony LYT 828 ಪ್ರಾಥಮಿಕ ಕ್ಯಾಮೆರಾ (OIS ಸಹಿತ), 50MP ಅಲ್ಟ್ರಾ ವೈಡ್ ಲೆನ್ಸ್ ಮತ್ತು 50MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ. 3x ಆಪ್ಟಿಕಲ್ ಜೂಮ್ ಮತ್ತು 100x ಹೈಬ್ರಿಡ್ ಜೂಮ್ ಬೆಂಬಲದಿಂದ ದೂರದ ವಿಷಯಗಳನ್ನೂ ಸ್ಪಷ್ಟವಾಗಿ ಸೆರೆಹಿಡಿಯಬಹುದು. ಮುಂಭಾಗದ 50MP ಸೆಲ್ಫಿ ಕ್ಯಾಮೆರಾ ಹೈ-ಕ್ವಾಲಿಟಿ ಫೋಟೋ ಮತ್ತು ವಿಡಿಯೋ ಕರೆಗಳಿಗೆ ಸಹಕಾರಿ. ಈ ಫೋನ್ 8K ವೀಡಿಯೊ ರೆಕಾರ್ಡಿಂಗ್‌ಗೂ ಬೆಂಬಲ ನೀಡುತ್ತದೆ.

ಬ್ಯಾಟರಿ ವಿಭಾಗದಲ್ಲೂ Motorola Signature ನಿರೀಕ್ಷೆಗಳನ್ನು ಮೀರಿಸಿದೆ. 5,200mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಹೊಂದಿರುವ ಈ ಫೋನ್ 90W ವೈರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಕಂಪನಿಯ ಪ್ರಕಾರ, ಒಂದೇ ಚಾರ್ಜ್‌ನಲ್ಲಿ 41 ಗಂಟೆಗಳವರೆಗೆ ಬಳಕೆಗೆ ಸಾಧ್ಯ. ಜೊತೆಗೆ ರಿವರ್ಸ್ ಚಾರ್ಜಿಂಗ್ ಆಯ್ಕೆಯೂ ಇದೆ. 5G, Wi-Fi 7, Bluetooth 6.0 ಸೇರಿದಂತೆ ಎಲ್ಲಾ ಆಧುನಿಕ ಸಂಪರ್ಕ ಆಯ್ಕೆಗಳು ಇದರಲ್ಲಿ ಲಭ್ಯ. ಒಟ್ಟಾರೆ, Motorola Signature ಭಾರತದಲ್ಲಿ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಹುಡುಕುತ್ತಿರುವ ಬಳಕೆದಾರರಿಗೆ ಗಮನಾರ್ಹ ಆಯ್ಕೆಯಾಗಿದೆ.

Best Mobiles in India

English summary
Motorola has launched the premium Motorola Signature smartphone in India, starting at ₹59,999, featuring a stylish design, powerful performance, and multiple storage options, with sales beginning January 30 on Flipkart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+