Motorola Signature ಎಂಟ್ರಿಗೆ ಇನ್ನೆರಡೇ ದಿನ: ಹೇಗಿದೆ ಗೊತ್ತಾ ಫೋನ್?
ಭಾರತದಲ್ಲಿ ಮೋಟೋರೋಲಾ ತನ್ನ ಮುಂದಿನ ಫ್ಲಾಗ್‌ಶಿಪ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಬಿಡುಗಡೆಗೆ (ಜನವರಿ 7 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ) ಸಜ್ಜಾಗುತ್ತಿದೆ . ಕಳೆದ ಕೆಲವು ದಿನಗಳಿಂದ ಕಂಪನಿ ನೀಡುತ್ತಿದ್ದ ಟೀಸರ್‌ಗಳು ಈಗ ಸ್ಪಷ್ಟ ರೂಪ ಪಡೆದಿವೆ. ಹೊಸ ಲೀಕ್‌ಗಳ ಪ್ರಕಾರ, ಈ ಫೋನ್ ಮೋಟೋರೋಲಾದ ಸಂಪೂರ್ಣ ಹೊಸ Motorola Signature ಎಂಬ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಇದು ಕಂಪನಿಯ ಇಮೇಜ್ ಅನ್ನು ಹೈ-ಎಂಡ್ ಸೆಗ್ಮೆಂಟ್‌ನಲ್ಲಿ ಮತ್ತಷ್ಟು ಬದಲಾಯಿಸುವ ಹೆಜ್ಜೆಯಂತೆ ಕಾಣುತ್ತಿದೆ.
ಈವರೆಗೆ Edge ಸರಣಿಯ ಭಾಗವಾಗಿ ಬರುತ್ತದೆ ಎಂದು ನಿರೀಕ್ಷಿಸಲಾಗಿದ್ದ ಈ ಡಿವೈಸ್, ಈಗ ಪ್ರತ್ಯೇಕ ಪ್ರೀಮಿಯಂ ಲೈನ್‌ಅಪ್ ಆಗಿ ಪರಿಚಯವಾಗುತ್ತಿದೆ. ಕಾರ್ಯಕ್ಷಮತೆಯ ವಿಚಾರದಲ್ಲಿ ಇದು ನಿಜವಾದ ಫ್ಲಾಗ್‌ಶಿಪ್ ಆಗಿರಲಿದೆ. ಪ್ರಸಿದ್ಧ ಲೀಕರ್ ಇವಾನ್ ಬ್ಲಾಸ್ ಲೀಕ್ ಮಾಹಿತಿಯ ಪ್ರಕಾರ, ಫೋನ್‌ನಲ್ಲಿ Qualcomm ನ ಹೊಸ Snapdragon 8 Gen 5 ಪ್ರೊಸೆಸರ್ ಬಳಸಲಾಗಿದ್ದು, ಇದು 3nm ತಂತ್ರಜ್ಞಾನದಲ್ಲಿ ತಯಾರಾದ ಅತ್ಯಾಧುನಿಕ ಚಿಪ್‌ಸೆಟ್ ಆಗಿದೆ. ಇದರಿಂದ ವೇಗ, AI ಕಾರ್ಯಕ್ಷಮತೆ ಮತ್ತು ಪವರ್ ಎಫಿಶಿಯನ್ಸಿಯ ಅನುಭವ ದೊರೆಯಲಿದೆ.

ಈ ಬಾರಿ ಡಿಸೈನ್ ಮತ್ತು ಬಿಲ್ಡ್ ಗುಣಮಟ್ಟದ ವಿಷಯದಲ್ಲಿ ಮೋಟೋರೋಲಾ ಈ ಬಾರಿ ಹೆಚ್ಚು ಗಮನ ಹರಿಸಿದೆ. Motorola Signature ಫೋನ್ವಿಮಾನ ದರ್ಜೆಯ ಅಲ್ಯೂಮಿನಿಯಂ ಫ್ರೇಮ್, IP68 ಮತ್ತು IP69 ರೇಟಿಂಗ್, ಜೊತೆಗೆ ಮಿಲಿಟರಿ ಸ್ಟ್ಯಾಂಡರ್ಡ್ (MIL-STD 810H) ರಕ್ಷಣೆಯು ಈ ಫೋನ್‌ಗೆ ದೀರ್ಘಕಾಲಿಕ ಬಲವನ್ನು ನೀಡುತ್ತದೆ. ಇಷ್ಟೊಂದು ಬಲವಾದ ರಚನೆ ಇದ್ದರೂ, ಕೇವಲ 6.99mm ದಪ್ಪ ಮತ್ತು 186 ಗ್ರಾಂ ತೂಕ ಹೊಂದಿರುವುದು ಗಮನಾರ್ಹ. ಲಿನನ್ ಮತ್ತು ಟ್ವಿಲ್ ಪ್ರೇರಿತ ಫಿನಿಶ್‌ಗಳು ಫೋನ್‌ಗೆ ಪ್ರೀಮಿಯಂ ಲುಕ್ ನೀಡಲಿವೆ ಎನ್ನಲಾಗಿದೆ.
ಡಿಸ್ಪ್ಲೇ, ಕ್ಯಾಮೆರಾಗಳು ಮತ್ತು ಕೋರ್ ಹಾರ್ಡ್‌ವೇರ್ ಕುರಿತಂತೆ ಸೋರಿಕೆಯಾದ ಮಾಹಿತಿಗಳು ನಮಗೆ ಪರಿಚಿತ ಫ್ಲ್ಯಾಗ್‌ಶಿಪ್ ಚಿತ್ರವನ್ನು ಒದಗಿಸಿವೆ. ಡಿಸ್ಪ್ಲೇ ವಿಭಾಗದಲ್ಲಿ ಈ ಪೋನ್ 6.8 ಇಂಚಿನ 1.5K AMOLED ಸ್ಕ್ರೀನ್, LTPO ತಂತ್ರಜ್ಞಾನ ಮತ್ತು 165Hz ರಿಫ್ರೆಶ್ ರೇಟ್ ಹೊಂದಿದ್ದು, ಗರಿಷ್ಠ 6200 ನಿಟ್ಸ್ ಬ್ರೈಟ್ನೆಸ್ ನೀಡಲಿದೆ. ಹೊರಾಂಗಣದಲ್ಲಿ ಕೂಡ ಸ್ಪಷ್ಟ ವೀಕ್ಷಣೆಗೆ ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೆ, ಈ ಫೋನ್ Gorilla Glass Victus 2 ರಕ್ಷಣೆ ಹೊಂದಿರಲಿದ್ದು, ಸ್ಕ್ರೀನ್‌ನ ದೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ಕ್ಯಾಮೆರಾ ಪ್ರೇಮಿಗಳಿಗೆ ಈ ಫೋನ್ ಆಕರ್ಷಕವಾಗಬಹುದು. Motorola Signature ಫೋನಿನ ಹಿಂಭಾಗದಲ್ಲಿ ಮೂರು 50MP ಕ್ಯಾಮೆರಾಗಳಿದ್ದು, Sony ಸೆನ್ಸರ್‌ಗಳ ಬಳಕೆ ಮಾಡಲಾಗಿದೆ. ಇದ ಮುಖ್ಯ ಕ್ಯಾಮೆರಾ OIS ಹೊಂದಿದ್ದು, ಅಲ್ಟ್ರಾ ವೈಡ್ ಮತ್ತು ಟೆಲಿಫೋಟೋ ಲೆನ್ಸ್‌ಗಳು ಮಲ್ಟಿ-ಪರ್ಪಸ್ ಶೂಟಿಂಗ್‌ಗೆ ಸಹಕಾರಿಯಾಗುತ್ತವೆ. 8K ವೀಡಿಯೋ ರೆಕಾರ್ಡಿಂಗ್ ಮತ್ತು Dolby Vision ಸಪೋರ್ಟ್ ಇರುವುದರಿಂದ ವಿಡಿಯೋ ಕ್ರಿಯೇಟರ್‌ಗಳಿಗೆ ಇದು ಒಳ್ಳೆಯ ಆಯ್ಕೆಯಾಗಬಹುದು. ಮುಂಭಾಗದ 50MP ಸೆಲ್ಫಿ ಕ್ಯಾಮೆರಾ ಕೂಡ ಹೈ-ರೆಸಲ್ಯೂಶನ್ ಔಟ್‌ಪುಟ್ ನೀಡುತ್ತದೆ.
ಕಾರ್ಯಕ್ಷಮತೆಗಾಗಿ 12GB ಅಥವಾ 16GB LPDDR5X RAM ಮತ್ತು ವೇಗದ UFS 4.1 ಸ್ಟೋರೇಜ್ ಆಯ್ಕೆಗಳು ಲಭ್ಯವಿರಲಿವೆ. ಫೋನ್ Android 16 ಜೊತೆ ಬಿಡುಗಡೆಯಾಗಲಿದ್ದು, ಇದರ ಜೊತೆಗೆ ಮೋಟೋರೋಲಾ 7 ವರ್ಷಗಳ OS ಅಪ್‌ಡೇಟ್ ಮತ್ತು ಸೆಕ್ಯುರಿಟಿ ಅಪ್‌ಡೇಟ್ ಭರವಸೆ ನೀಡಿರುವುದು ಭಾರತೀಯ ಗ್ರಾಹಕರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಬಹುದು. ಇನ್ನು ಬ್ಯಾಟರಿ ವಿಭಾಗದಲ್ಲಿ, 5200mAh ಬ್ಯಾಟರಿ, 90W ಫಾಸ್ಟ್ ವೈರ್ಡ್ ಚಾರ್ಜಿಂಗ್, 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಇರಲಿದೆ ಎನ್ನಲಾಗಿದೆ.
ಕನೆಕ್ಟಿವಿಟಿ ದೃಷ್ಟಿಯಿಂದ 5G SA/NSA, Wi-Fi 7, Bluetooth 6.0, NFC ಮತ್ತು USB Type-C (USB 3.2) ಸಪೋರ್ಟ್ ದೊರೆಯಲಿದೆ. ಜೊತೆಗೆ ಇನ್-ಡಿಸ್ಪ್ಲೇ ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು Dolby Atmos ಸ್ಟೀರಿಯೋ ಸ್ಪೀಕರ್‌ಗಳು ಪ್ರೀಮಿಯಂ ಆಗಿ ಬರಲಿವೆ. ಇನ್ನು ನಾವು ಈಗಾಗಲೇ ತಿಳಿದಿರುಂತೆ, ಮೋಟೋರೋಲಾ ತನ್ನ ಹೊಸ Signature Series ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಜನವರಿ 7ರಂದು Lenovo Tech World ಕಾರ್ಯಕ್ರಮದಲ್ಲಿ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಿಗೆ ಅಧಿಕೃತವಾಗಿ ಅನಾವರಣಗೊಳಿಸುವ ನಿರೀಕ್ಷೆ ಇದೆ.
2026ರಲ್ಲಿ ಭಾರತೀಯ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಸ್ಪರ್ಧೆ ನೀಡುವ ನಿರೀಕ್ಷೆ ಮೂಡಿಸಿರುವ ಇದೇ ಫೋನ್ ಚೀನಾದ ಮಾರುಕಟ್ಟೆಯಲ್ಲಿ Moto X70 Air Pro ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಆವೃತ್ತಿಯ ಪ್ರಮುಖ ಆಕರ್ಷಣೆ ಸ್ಟೈಲಸ್ ಸಪೋರ್ಟ್ ಆಗಿರಬಹುದು. ಸ್ಟೈಲಸ್ ಮೂಲಕ ನೇರವಾಗಿ AI ಫೀಚರ್‌ಗಳನ್ನು ಬಳಸುವ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ, ಈ ಹೊಸ Signature Series ಫೋನ್ ಮೋಟೋರೋಲಾದ ಬ್ರಾಂಡ್ ಇಮೇಜ್ ಅನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಬಹುದು. ಏನಂತಿರಾ?


Click it and Unblock the Notifications








