Home
ಮೊಬೈಲ್

ಜನವರಿ 7ರ ಲಾಂಚ್‌ಗೆ ಮುನ್ನವೇ Motorola Signature ಡಿಸೈನ್ ಲೀಕ್!

ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ 'Motorola Signature' ಸ್ಮಾರ್ಟ್‌ಫೋನ್ ಇದೇ ಜನವರಿ 7 ರಂದು ಅಧಿಕೃತವಾಗಿ ಎಂಟ್ರಿ ನೀಡಲು ಸಜ್ಜಾಗಿದೆ. ಈಗಾಗಲೇ ಫ್ಲಿಪ್‌ಕಾರ್ಟ್‌ನಲ್ಲಿ ಇದಕ್ಕಾಗಿ ವಿಶೇಷ ಮೈಕ್ರೋಸೈಟ್ ಒಂದು ಕೂಡ ಲೈವ್ ಆಗಿದೆ. ಆದರೆ, ಮುಂಬರುವ ಈ ಫೋನ್ ವಿನ್ಯಾಸದ ಕುರಿತಾದ ಯಾವುದೇ ಮಾಹಿತಿ ಈವರೆಗೂ ಲಭ್ಯವಾಗಿರಲಿಲ್ಲ. ಆದರೀಗ, ಅಧಿಕೃತ ಬಿಡುಗಡೆಗೂ ಮುನ್ನವೇ ಮೋಟೋರೋಲಾ Signature ಫೋನ್‌ನ ರೆಂಡರ್‌ಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ.!

ಹೌದು, ಬಹುನಿರೀಕ್ಷಿತ Motorola Signature ವಿನ್ಯಾಸದ ಬಗ್ಗೆ ಸ್ಪಷ್ಟ ಚಿತ್ರಣ ನೀಡುವ ಚಿತ್ರಗಳು(YTECHB ನಲ್ಲಿ) ಲೀಕ್ ಆಗಿವೆ. ಈ ಚಿತ್ರಗಳ ಪ್ರಕಾರ, ಈ ಫೋನ್ ಹಿಂಭಾಗದಲ್ಲಿ ಗಮನಸೆಳೆಯುವ ಸ್ಕ್ವಿರ್ಕಲ್ ಆಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿರಲಿದೆ. ಜೊತೆಗೆ, ಹೊಸ ಮತ್ತು ಪ್ರೀಮಿಯಂ ಲುಕ್ ನೀಡುವ Martini Olive ಬಣ್ಣದ ಆಯ್ಕೆಯೂ ಕಾಣಿಸಿಕೊಂಡಿದೆ. ಈ ರೆಂಡರ್‌ಗಳಲ್ಲಿ ಮೋಟೋರೋಲಾದ ಇತರೆ ಉತ್ಪನ್ನಗಳಾದ Edge 70 Swarovski Crystals Edition, Moto Stylus, ಸ್ಮಾರ್ಟ್‌ವಾಚ್, Moto Tag ಮತ್ತು ಸ್ಪೀಕರ್‌ಗಳನ್ನು ಕೂಡ ಪ್ರದರ್ಶಿಸಲಾಗಿದೆ.

ಜನವರಿ 7ರ ಲಾಂಚ್‌ಗೆ ಮುನ್ನವೇ Motorola Signature ಡಿಸೈನ್ ಲೀಕ್!
Photo Credit:

ಇತ್ತೀಚಿಗಷ್ಟೇ Motorola 30K ವಿಭಾಗದಲ್ಲಿ ಅಲ್ಟ್ರಾ-ಸ್ಲಿಮ್ ವಿನ್ಯಾಸದ Edge 70 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ ನಂತರ, ಇದೀಗ ಕಂಪೆನಿಯ ಹೊಸ Signature ಸ್ಮಾರ್ಟ್‌ಫೋನ್ ಕುರಿತು ಸಾಕಷ್ಟು ನಿರೀಕ್ಷೆ ಮೂಡಿದೆ. ಈವರೆಗೆ ಪ್ರೀಮಿಯಂ ಫ್ಲಾಗ್‌ಶಿಪ್( iPhone Air ಮತ್ತು Galaxy S25 Edge) ಫೋನ್‌ಗಳಿಗೆ ಮಾತ್ರ ಸೀಮಿತವಾಗಿದ್ದ ಸ್ಲಿಮ್ ಲುಕ್ ಅನ್ನು Edge 70 ಸ್ಮಾರ್ಟ್‌ಫೋನ್ ಮಧ್ಯಮ ವಿಭಾಗಕ್ಕೆ ತಂದಿತ್ತು. ಇದೀಗ ಹೊಸ Signature ಸಾಧನವು ಸಂಪೂರ್ಣ ಡಿವೈಸ್ ಇಕೋಸಿಸ್ಟಮ್‌ನ್ನು ಒಂದೇ ವೇದಿಕೆಯಲ್ಲಿ ವಿಭಿನ್ನವಾಗಿ ತರಬಹುದು ಎನ್ನಾಗುತ್ತಿದೆ.

Motorola Signature: ಪ್ರಮುಖ ವೈಶಿಷ್ಟ್ಯಗಳು(ನಿರೀಕ್ಷಿತ)
ಈಗಾಲೇ ಆನ್‌ಲೈನಿನಲ್ಲಿ ಸೋರಿಕೆಯಾದ ಮಾಹಿತಿಯಂತೆ, ಮುಂಬರುವ ಮೋಟೋರೋಲಾ Signature ಫೋನಿನಲ್ಲಿ 6.7 ಇಂಚಿನ 1.5K ರೆಸಲ್ಯೂಶನ್ ಹೊಂದಿರುವ OLED ಡಿಸ್ಪ್ಲೇ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲಿಸುವ ಸಾಧ್ಯತೆ ಇದೆ. Geekbench ಲಿಸ್ಟಿಂಗ್ ಪ್ರಕಾರ, ಈ ಫೋನ್‌ನಲ್ಲಿ 3.80GHz ವೇಗದ ಎರಡು ಕೋರ್‌ಗಳು ಮತ್ತು 3.32GHz ವೇಗದ ಆರು ಕೋರ್‌ಗಳಿರುವ ಶಕ್ತಿಶಾಲಿ ಪ್ರೊಸೆಸರ್ ಕಾಣಿಸಿಕೊಂಡಿದೆ. ಇದರೊಂದಿಗೆ Adreno 829 GPU ಇರಲಿದ್ದು, ಇದು Snapdragon 8 Gen 5 ಚಿಪ್‌ಸೆಟ್ ಆಗಿರಬಹುದು ಎಂಬ ಅಂದಾಜು ಮೂಡಿಸಿದೆ.

ಕ್ಯಾಮೆರಾ ಪ್ರಿಯರಿಗೆ ಕೂಡ ಈ ಫೋನ್ ಆಕರ್ಷಕವಾಗಿರಬಹುದು. ಲೀಕ್ ಮಾಹಿತಿಯ ಪ್ರಕಾರ, ಮೋಟೋರೋಲಾ Signature ನಲ್ಲಿ 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇರಲಿದೆ. ಇದರಲ್ಲಿ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಸೇರಿರುವ ಸಾಧ್ಯತೆ ಇದ್ದು, ದೂರದ ಫೋಟೋಗ್ರಫಿ ಮತ್ತು ಜೂಮ್ ಶಾಟ್‌ಗಳಿಗೆ ಉತ್ತಮ ಫಲಿತಾಂಶ ನೀಡಬಹುದು. ಇದರ ಜೊತೆಗೆ, ಈ ಫೋನ್ ಸ್ಟೈಲಸ್ ಪೆನ್ ಬೆಂಬಲ ಹೊಂದಿರಲಿದೆ ಎಂಬ ನಿರೀಕ್ಷೆಯೂ ಇದೆ, ಇದು ಕ್ರಿಯೇಟಿವ್ ಯೂಸರ್ಸ್ ಮತ್ತು ಪ್ರೊಡಕ್ಟಿವಿಟಿ ಬಳಕೆಗೆ ಸಹಕಾರಿ.

ಮೆಮೊರಿ ಮತ್ತು ಸಾಫ್ಟ್‌ವೇರ್ ವಿಭಾಗದಲ್ಲೂ ಈ ಫೋನ್ ಪ್ರೀಮಿಯಂ ಅನುಭವ ನೀಡುವ ಸಾಧ್ಯತೆ ಇದೆ. ಮೋಟೋರೋಲಾ Signature ಗರಿಷ್ಠವಾಗಿ 16GB RAM ಆಯ್ಕೆಯೊಂದಿಗೆ ಬರಬಹುದು. ಸಾಫ್ಟ್‌ವೇರ್ ವಿಷಯದಲ್ಲಿ, ಈ ಫೋನ್ ಹೊಸ ತಲೆಮಾರಿನ Android 16 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಲಾಂಚ್ ಆಗುವ ನಿರೀಕ್ಷೆಯಿದೆ. ಆದಾಗ್ಯೂ, ಬ್ಯಾಟರಿ ಸಾಮರ್ಥ್ಯ, ಚಾರ್ಜಿಂಗ್ ಸ್ಪೀಡ್ ಮತ್ತು ಬೆಲೆ ಕುರಿತು ಕಂಪನಿಯಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ಮೇಲಿನ ಎಲ್ಲ ವಿವರಗಳನ್ನು ಲೀಕ್‌ಗಳ ಆಧಾರದ ಮೇಲೆ ಮಾತ್ರ ಅಂದಾಜಿಸಲಾಗಿದೆ. ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಮೋಟೋರೋಲಾ Signature ಒಂದು ಪ್ರೀಮಿಯಂ ಡಿಸೈನ್, ಶಕ್ತಿಶಾಲಿ ಹಾರ್ಡ್‌ವೇರ್ ಮತ್ತು ಮುಂದಿನ ತಲೆಮಾರಿನ ಸಾಫ್ಟ್‌ವೇರ್ ಅನುಭವವನ್ನು ಒದಗಿಸುವ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ. ನಿಖರವಾದ ವೈಶಿಷ್ಟ್ಯಗಳು ಮತ್ತು ಬೆಲೆ ವಿವರಗಳನ್ನು ತಿಳಿಯಲು ನಾವು ಜನವರಿ 7ರ ಅಧಿಕೃತ ಲಾಂಚ್ ಕಾರ್ಯಕ್ರಮದವರೆಗೆ ಕಾಯಬೇಕು.

Best Mobiles in India

English summary
The Motorola Signature smartphone is launching in India on January 7, with leaked renders revealing a premium design and a unique camera module.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+