Home
ಮೊಬೈಲ್

Motorola Signature ಬೆಲೆ ಸೋರಿಕೆ: ಪ್ರೀಮಿಯಂ ಕ್ಲಾಸ್ ಇನ್ನು ಕಡಿಮೆ ಬೆಲೆಗೆ!

ಮೋಟೊರೋಲಾ ಕಂಪೆನಿಯು ಭಾರತದಲ್ಲಿ ತನ್ನ ಹೊಸ ಅಲ್ಟ್ರಾ-ಸ್ಲಿಮ್ Signature ಸರಣಿಯ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ಇದೇ 23 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸರಣಿಯ ಮೊದಲ ಮಾದರಿಯಾಗಿ ಬರುತ್ತಿರುವ Motorola Signature ಫೋನ್ ಫ್ಲಾಗ್‌ಶಿಪ್ ವೈಶಿಷ್ಟ್ಯಗಳು, ಶಕ್ತಿಶಾಲಿ ಕಾರ್ಯಕ್ಷಮತೆ ಮತ್ತು ದೀರ್ಘಕಾಲದ ಅಪ್‌ಡೇಟ್ ಭರವಸೆಯೊಂದಿಗೆ ಭಾರತೀಯ ಗ್ರಾಹಕರ ಗಮನ ಸೆಳೆಯುವ ಗುರಿ ಹೊಂದಿದೆ. ಈ ಫೋನ್ ಚೀನಾದಲ್ಲಿ ಬಿಡುಗಡೆಯಾದ Moto X70 Air Pro ಆಧಾರಿತವಾಗಿದ್ದು, ಈಗಾಗಲೇ ಯುರೋಪ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಇದೀಗ ಭಾರತದಲ್ಲಿ ಬಿಡುಗಡೆ ಸನಿಹದಲ್ಲಿರುವಾಗ, ಈ Motorola Signature ಫೋನ್ ಬೆಲೆಯು ಸೋರಿಕೆಯಾಗಿದೆ.!

ಹೌದು, ಜನಪ್ರಿಯ ಟಿಪ್‌ಸ್ಟರ್ ಸಂಜು ಚೌಧರಿ ಅವರು Motorola Signature ಫೋನ್ ಬೆಲೆಯನ್ನು ಸೋರಕೆ ಮಾಡಿದ್ದಾರೆ. ಇವರ ಪ್ರಕಾರ, ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ ಸುಮಾರು ರೂ.59,999 ಆಗಿರಬಹುದು. ಈ ದರವು 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ವೇರಿಯಂಟ್‌ಗೆ ಅನ್ವಯಿಸುವ ನಿರೀಕ್ಷೆ ಇದೆ. ಅದೇ ರೀತಿ, ಹೆಚ್ಚಿನ ಸ್ಟೋರೇಜ್ ಅಗತ್ಯವಿರುವ ಬಳಕೆದಾರರಿಗೆ 12GB/512GB ಮಾದರಿ ರೂ.64,999 ಮತ್ತು 16GB/1TB ಟಾಪ್ ವೇರಿಯಂಟ್ ರೂ.69,999 ದರದಲ್ಲಿ ಲಭ್ಯವಾಗಬಹುದು.

Motorola Signature ಬೆಲೆ ಸೋರಿಕೆ: ಪ್ರೀಮಿಯಂ ಕ್ಲಾಸ್ ಇನ್ನು ಕಡಿಮೆ ಬೆಲೆಗೆ!

ಇಷ್ಟೇ ಅಲ್ಲದೆ, ಲಾಂಚ್ ಆಫರ್‌ಗಳ ಭಾಗವಾಗಿ ಮೋಟೊರೋಲಾ ಗ್ರಾಹಕರಿಗೆ ಆಕರ್ಷಕ ಪ್ರಯೋಜನಗಳನ್ನು ನೀಡುವ ಸಾಧ್ಯತೆ ಇದೆ. Motorola Signature ಖರೀದಿಗೆ ಬ್ಯಾಂಕ್ ಆಫರ್ ಮೂಲಕ ರೂ.5,000 ತಕ್ಷಣದ ರಿಯಾಯಿತಿ ಮತ್ತು ಹಳೆಯ ಫೋನ್ ಎಕ್ಸ್‌ಚೇಂಜ್ ಮಾಡಿದರೆ ರೂ.7,500 ವರೆಗೆ ಹೆಚ್ಚುವರಿ ಬೋನಸ್ ಸಿಗಬಹುದು ಎಂದು ಹೇಳಿದ್ದಾರೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಈ ಫೋನ್ ಸುಮಾರು ರೂ.82,000 ಬೆಲೆಯೊಂದಿಗೆ ಲಭ್ಯವಿರುವುದನ್ನು ಗಮನಿಸಿದರೆ, ಭಾರತಕ್ಕೆ ಇದು ಸ್ಪರ್ಧಾತ್ಮಕ ಬೆಲೆಯಲ್ಲಿ ಬರಲಿದೆ ಎನ್ನಬಹುದು.

Motorola Signature: ಲಭ್ಯತೆ, ಡಿಸೈನ್ ಮತ್ತು ಬಣ್ಣಗಳು
ನಾವು ಈಗಾಗಲೇ ತಿಳಿದಿರುವಂತೆ, Motorola Signature ಪೋನ್ ಬಿಡುಗಡೆಯಾದ ಬಳಿಕ Flipkart ಮೂಲಕ ಮಾರಾಟಕ್ಕೆ ಬರಲಿದೆ. ಡಿಸೈನ್ ವಿಚಾರದಲ್ಲಿ Motorola Signature ಫೋನ್ ಪ್ರೀಮಿಯಂ ಲುಕ್ ನೀಡುತ್ತದೆ. ಕೇವಲ 6.99 ಮಿಮೀ ದಪ್ಪ ಮತ್ತು 186 ಗ್ರಾಂ ತೂಕ ಹೊಂದಿರುವ ಈ ಫೋನ್ ಹಿಡಿಯಲು ಹಗುರವಾಗಿದ್ದು, Pantone Carbon ಮತ್ತು Pantone Martini Olive ಎಂಬ ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. Pantone ಸರ್ಟಿಫಿಕೇಶನ್ ಇದಕ್ಕೆ ವಿಭಿನ್ನ ಮತ್ತು ಸ್ಟೈಲಿಷ್ ಫಿನಿಷ್ ನೀಡುತ್ತದೆ ಎನ್ನಲಾಗಿದೆ.

Motorola Signature: ಪ್ರಮುಖ ವೈಶಿಷ್ಟ್ಯಗಳು
ಕಾರ್ಯಕ್ಷಮತೆಯ ದೃಷ್ಟಿಯಿಂದ, Motorola Signature ನಲ್ಲಿ ಹೊಸ ತಲೆಮಾರಿನ Snapdragon 8 Gen 5 ಪ್ರೊಸೆಸರ್ ಬಳಸಲಾಗಿದೆ. ಇದಕ್ಕೆ ಗರಿಷ್ಠವಾಗಿ 16GB LPDDR5X RAM ಮತ್ತು 1TB UFS 4.1 ಸ್ಟೋರೇಜ್ ಬೆಂಬಲ ಇದೆ. ಫೋನ್ Android 16 ಆಧಾರಿತವಾಗಿದ್ದು, Moto AI ಫೀಚರ್‌ಗಳೊಂದಿಗೆ ಬರುತ್ತದೆ. ಮುಖ್ಯವಾಗಿ, ಮೋಟೊರೋಲಾ 7 ವರ್ಷಗಳ Android OS ಮತ್ತು ಸೆಕ್ಯೂರಿಟಿ ಅಪ್‌ಡೇಟ್‌ಗಳ ಭರವಸೆ ನೀಡಿರುವುದು ಪ್ರೀಮಿಯಂ ಬಳಕೆದಾರರಿಗೆ ದೊಡ್ಡ ಪ್ಲಸ್ ಆಗಲಿದೆ.

Motorola Signature ಬೆಲೆ ಸೋರಿಕೆ: ಪ್ರೀಮಿಯಂ ಕ್ಲಾಸ್ ಇನ್ನು ಕಡಿಮೆ ಬೆಲೆಗೆ!

ಕ್ಯಾಮೆರಾ ವಿಭಾಗದಲ್ಲಿ ಈ Motorola Signature ಸ್ಮಾರ್ಟ್‌ಫೋನ್ ವಿಶೇಷ ಗಮನ ಸೆಳೆಯುತ್ತದೆ. ಈ ಫೋನ್ ಮೂರು ಕ್ಯಾಮೆರಾಗಳನ್ನು ಹೊಂದಿದೆ. ಇದರ ಪ್ರಾಥಮಿಕ ಘಟಕವು OIS ಮತ್ತು f/1.6 ಅಆರ್ಚರ್‌ನೊದಿಗೆ 50MP ಸೋನಿ ಲಿಟಿಯಾ 828 ಸೆನ್ಸರ್ ಹೊಂದಿದೆ. ಇದು 122-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು ಮ್ಯಾಕ್ರೋ ಬೆಂಬಲದೊಂದಿಗೆ 50MP ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ ಸೇರಿಕೊಂಡಿದೆ, ಜೊತೆಗೆ 3x ಆಪ್ಟಿಕಲ್ ಜೂಮ್ ನೀಡುವ 50MP ಸೋನಿ ಲಿಟಿಯಾ 600 ಪೆರಿಸ್ಕೋಪ್ ಲೆನ್ಸ್ ಅನ್ನು ಹೊಂದಿದೆ.

ಈ Motorola Signature ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗೆ ಸಹ ಹೆಚ್ಚು ಒತ್ತು ನೀಡಿದೆ. ಇದರ ಮುಂಭಾಗದಲ್ಲಿ, ತೀಕ್ಷ್ಣವಾದ ಶಾಟ್‌ಗಳಿಗಾಗಿ ಆಟೋಫೋಕಸ್‌ನೊಂದಿಗೆ 50MP ಸೋನಿ ಲಿಟಿಯಾ 500 ಕ್ಯಾಮೆರಾ ಇದೆ. ಒಟ್ಟಾರೆಯಾಗಿ, ನಾಲ್ಕು 50MP ಸೆನ್ಸರ್‌ಗಳ ಈ ಸಂಯೋಜನೆಯು ಬಳಕೆದಾರರಿಗೆ ಪ್ರಮಾಣಿತ, ಅಗಲ, ಜೂಮ್ ಮಾಡಿದ ಮತ್ತು ಮುಂಭಾಗಕ್ಕೆ ಎದುರಾಗಿರುವ ಚಿತ್ರಗಳಲ್ಲಿ ಸ್ಥಿರವಾದ ವಿವರಗಳನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ಹೇಳಿವೆ.

ಡಿಸ್ಪ್ಲೇ ಅನುಭವದ ವಿಚಾರದಲ್ಲಿ Motorola Signature ಫ್ಲಾಗ್‌ಶಿಪ್ ಮಟ್ಟದ ಸ್ಪೆಸಿಫಿಕೇಶನ್ ನೀಡುತ್ತದೆ. 6.8 ಇಂಚಿನ FHD+ AMOLED ಡಿಸ್ಪ್ಲೇ, 165Hz ರಿಫ್ರೆಶ್ ರೇಟ್, 6,200 ನಿಟ್ಸ್ ಪೀಕ್ ಬ್ರೈಟ್ನೆಸ್, HDR10+ ಮತ್ತು Dolby Vision ಸಪೋರ್ಟ್ ಇದರಲ್ಲಿ ಲಭ್ಯವಿದೆ. Gorilla Glass Victus 2 ರಕ್ಷಣೆ ಹಾಗೂ Pantone Color ಮತ್ತು SkinTone ಸರ್ಟಿಫಿಕೇಶನ್‌ಗಳು ಡಿಸ್ಪ್ಲೇ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಆಡಿಯೋ ಅನುಭವಕ್ಕಾಗಿ Dolby Atmos ಬೆಂಬಲದ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು ಮತ್ತು Bose ಟ್ಯೂನಿಂಗ್ ನೀಡಲಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್ ವಿಷಯದಲ್ಲಿ ಕೂಡ ಈ ಫೋನ್ ಶಕ್ತಿಯುತವಾಗಿ ಕಾಣುತ್ತಿದೆ. ಇದರಲ್ಲಿ 5,200mAh ಬ್ಯಾಟರಿ ಇದೆ. ಇದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಜೊತೆಗೆ 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 10W ರಿವರ್ಸ್ ವೈರ್ಡ್ ಮತ್ತು 5W ರಿವರ್ಸ್ ವೈರ್‌ಲೆಸ್ ಔಟ್‌ಪುಟ್‌ನೊಂದಿಗೆ ರಿವರ್ಸ್ ಚಾರ್ಜಿಂಗ್ ಸಹ ಲಭ್ಯವಿದೆ. ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್‌ಗಳು ಇದ್ದರೆ, ಫೋನ್ ಸುರಕ್ಷತೆ ಮತ್ತು ಗಟ್ಟಿತನಕ್ಕಾಗಿ MIL-STD-810H ಪ್ರಮಾಣೀಕರಣವಿದೆ.

Best Mobiles in India

English summary
Motorola is set to launch its ultra-slim premium Signature smartphone in India on January 23. Based on the Moto X70 Air Pro, the device is expected to offer flagship-level performance, long-term software updates, and premium design, with leaked prices starting around ₹59,999 for the base variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+