ಜ.23 ರಂದು ಅಲ್ಟ್ರಾ-ಸ್ಲಿಮ್ Motorola Signature ಎಂಟ್ರಿ: ಫುಲ್ ಡೀಟೇಲ್ಸ್!
Motorola ತನ್ನ ಹೊಸ ಪ್ರೀಮಿಯಂ ಸ್ಮಾರ್ಟ್‌ಫೋನ್ Motorola Signature ಅನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಅಲ್ಟ್ರಾ-ಸ್ಲಿಮ್ ವಿನ್ಯಾಸ ಮತ್ತು ಫ್ಲಾಗ್‌ಶಿಪ್ ಮಟ್ಟದ ವೈಶಿಷ್ಟ್ಯಗಳೊಂದಿಗೆ ಬರುವ ಈ ಫೋನ್, ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಿದೆ. Snapdragon 8 ಸರಣಿಯ ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಈ ಫೋನ್ 1TB ವರೆಗೆ ಸ್ಟೋರೇಜ್ ಹೊಂದಿರುವುದನ್ನು ಸಹ ದೃಢಪಡಿಸಲಾಗಿದೆ. ಈ ಲೇಖನದಲ್ಲಿ Motorola Signature ಫೋನಿನ ಬಿಡುಗಡೆ ದಿನಾಂಕ, ನಿರೀಕ್ಷಿತ ವೈಶಿಷ್ಟ್ಯಗಳು ಹಾಗೂ ಬೆಲೆ ವಿವರಗಳನ್ನು ನಾವು ನೋಡೋಣ.
Motorola Signature : ಜನವರಿ 23 ರಂದು ಬಿಡುಗಡೆ
ಫ್ಲಿಪ್‌ಕಾರ್ಟ್‌ನಲ್ಲಿ Motorola Signature ಫೋನಿಗಾಗಿ ಮೀಸಲಾದ ಮೈಕ್ರೋಸೈಟ್‌ನಲ್ಲಿ ಭಾರತದಲ್ಲಿ ಜನವರಿ 23 ರಂದು ಈ ಫೋನ್ ಬಿಡುಗಡೆಯಾಗವುದು ದೃಢಪಡಿಸಿದೆ. ಈ ಫೋನ್ ಅನಿರ್ದಿಷ್ಟ ಸ್ನಾಪ್‌ಡ್ರಾಗನ್ 8 ಸರಣಿಯ ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ, ಮತ್ತು 16GB ವರೆಗೆ RAM ಮತ್ತು 1TB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ ಎಂದು ಮೈಕ್ರೋಸೈಟ್ ದೃಢಪಡಿಸುತ್ತದೆ. ಇದು ಡಾಲ್ಬಿ ವಿಷನ್, ಡಾಲ್ಬಿ ಅಟ್ಮಾಸ್, ಸೌಂಡ್ ಬೈ ಬೋಸ್ ಬೆಂಬಲದೊಂದಿಗೆ ಬರುತ್ತದೆ ಮತ್ತು 5,200mAh ಬ್ಯಾಟರಿಯನ್ನು ಹೊಂದಿದೆ ಎಂದು ಸಹ ತೋರಿಸಲಾಗಿದೆ.
ಮತ್ತೊಂದು ಕುತೂಹಲಕರ ವಿಷಯವೆಂದರೆ, Motorola Signature ಲಾಂಚ್ ವೇಳೆ ಕಂಪನಿ ಹೊಸ Moto Watch ಅನ್ನು ಕೂಡ ಪರಿಚಯಿಸಲಿದೆ. ಈ ಸ್ಮಾರ್ಟ್‌ವಾಚ್ Polar ತಂತ್ರಜ್ಞಾನದಿಂದ ಚಾಲಿತವಾಗಿದ್ದು, ಫಿಟ್‌ನೆಸ್ ಮತ್ತು ಆರೋಗ್ಯ ಟ್ರ್ಯಾಕಿಂಗ್ ಮೇಲೆ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ. ಆದರೆ, ಈ ವಾಚ್ ಫೋನ್ ಜೊತೆಗೆ ಬಂಡಲ್ ಆಗಿ ಬರುತ್ತದೆಯೇ ಅಥವಾ ಪ್ರತ್ಯೇಕವಾಗಿ ಮಾರಾಟವಾಗುತ್ತದೆಯೇ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಬೆಲೆ ಬಗ್ಗೆ ಲೀಕ್ ಆಗಿರುವ ಮಾಹಿತಿಯಂತೆ, 16GB RAM ಮತ್ತು 1TB ಸ್ಟೋರೇಜ್ ಹೊಂದಿರುವ ಟಾಪ್ ವೇರಿಯಂಟ್ Motorola Signature ಪೋನಿನನ ಬಾಕ್ಸ್ ಬೆಲೆ ಸುಮಾರು ರೂ. 84,999 ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಲಾಂಚ್ ಆಫರ್‌ಗಳು, ಬ್ಯಾಂಕ್ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಡೀಲ್‌ಗಳ ಮೂಲಕ ನಿಜವಾದ ಮಾರಾಟ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಆದ್ದರಿಂದ, ಪ್ರೀಮಿಯಂ ಫೋನ್ ಹುಡುಕುತ್ತಿರುವ ಬಳಕೆದಾರರಿಗೆ ಇದು ಗಮನಾರ್ಹ ಆಯ್ಕೆಯಾಗಬಹುದು.
ಗಮನಿಸುವುದಾದರೆ, ಜಾಗತಿಕವಾಗಿ Motorola Signature ಅನ್ನು ಜನವರಿ 7ರಂದು CES 2026 ಕಾರ್ಯಕ್ರಮದಲ್ಲಿ ಪರಿಚಯಿಸಲಾಗಿತ್ತು. ಗ್ಲೋಬಲ್ ಮಾದರಿಯಲ್ಲಿ Android 16 ಆಧಾರಿತ Hello UI, Snapdragon 8 Gen 5 ಚಿಪ್‌ಸೆಟ್, LPDDR5X RAM ಮತ್ತು UFS 4.1 ಸ್ಟೋರೇಜ್ ನೀಡಲಾಗಿದೆ. ಜೊತೆಗೆ, ಇದರಲ್ಲಿಮ 6.8 ಇಂಚಿನ Full HD+ LTPO AMOLED ಡಿಸ್ಪ್ಲೇ, 165Hz ರಿಫ್ರೆಶ್ ರೇಟ್ ಮತ್ತು 6,200 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಪ್ರಮುಖ ಹೈಲೈಟ್‌ಗಳಾಗಿವೆ.
ಒಟ್ಟಾರೆಯಾಗಿ, Motorola Signature ಭಾರತದಲ್ಲಿ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಪ್ರೀಮಿಯಂ ಅನುಭವವನ್ನು ಒಂದೇ ಪ್ಯಾಕೇಜ್‌ನಲ್ಲಿ ನೀಡುವ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಫೋನ್ ಲಾಂಚ್ ಬಳಿಕ ನಿಖರ ಬೆಲೆ ಮತ್ತು ಆಫರ್‌ಗಳು ಬಹಿರಂಗವಾಗಲಿದ್ದು, ಫ್ಲಾಗ್‌ಶಿಪ್ ಸೆಗ್ಮೆಂಟ್‌ನಲ್ಲಿ ಇದು ಎಷ್ಟು ದೊಡ್ಡ ಸ್ಪರ್ಧೆ ನೀಡಲಿದೆ ಎಂಬುದು ಇದೀಗ ಎಲ್ಲರ ಕುತೂಹಲದ ವಿಷಯವಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?..Motorola Signature ಫೋನ್ ಹೊಸದೊಂದು ಸಂಚಲನ ಮೂಡಿಸಬಹುದೇ? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








