ಮೊಟೊರೊಲಾದಿಂದ ಮತ್ತೆರಡು ಸೂಪರ್ ಫೋನ್ ಸಿದ್ಧ

ಪ್ರತಿಷ್ಟಿತ ಮೊಟೊರೊಲಾ ಕಂಪನಿ ಮೊಟೊರೊಲಾ ಸ್ಪೈಸ್ ಮತ್ತು ಮೊಟೊರೊಲಾ ಫೈರ್ ಎಂಬ ಅತ್ಯಾಕರ್ಷಕ ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಿದೆ. ಗ್ರಾಹಕರ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಈ ಎರಡು ಚೆಂದದ ಫೋನ್ ಗಳನ್ನು ಹೊರತಂದಿರುವುದಾಗಿ ಕಂಪನಿ ತಿಳಿಸಿದೆ.
ಮೊಟೊರೊಲಾ ಸ್ಪೈಸ್ ಮತ್ತು ಮೊಟೊರೊಲಾ ಫೈರ್ ಮೊಬೈಲ್ ಗಳು ಆಂಡ್ರಾಯ್ಡ್ ಬೆಂಬಲಿತವಾಗಿದೆ. ಮೊಟೊರೊಲಾ ಸ್ಪೈಸ್ ಆಂಡ್ರಾಯ್ಡ್ 2.1 Éclair ಆಯಾಮ ಹೊಂದಿದ್ದರೆ ಮೊಟೊರೊಲಾ ಫೈರ್ 2.3 ಜಿಂಜರ್ ಬ್ರೆಡ್ ಪಡೆದುಕೊಂಡಿದೆ. GSM, CDMA ಮತ್ತು HSDPA ಬೆಂಬಲಿತ ಸ್ಮಾರ್ಟ್ ಫೋನ್ ಗಳು ಇವಾಗಿದೆ.
ಮೊಟೊರೊಲಾ ಫೈರ್ ನ 1420 mAh ಬ್ಯಾಟರಿ 2ಜಿ ಮತ್ತು 3ಜಿಯಲ್ಲಿ 7 ಮತ್ತು 5 ಗಂಟೆ ಟಾಕ್ ಟೈಂ ನೀಡಲಿದ್ದು, 21 ದಿನಗಳ ಸ್ಟ್ಯಾಂಡ್ ಬೈ ಟೈಂ ನಿಡುತ್ತದೆ. ಮೊಟೊರೊಲಾ ಸ್ಟೈಸ್ 1170mAh Li-ion ಬ್ಯಾಟರಿಯಿಂದ 180 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 320 ನಿಮಿಷ ಟಾಕ್ ಟೈಂ ನೀಡುತ್ತದೆ. ಈ ಮೊಬೈಲ್ ಗಳ ಇನ್ನಿತರ ಮಾಹಿತಿಗಳನ್ನು ಮುಂದೆ ತಿಳಿಯಿರಿ.
ಮೊಟೊರೊಲಾ ಫೈರ್ ವಿಶೇಷತೆ:
* ಟಚ್ ಸ್ಕ್ರೀನ್ ಮತ್ತು ಕ್ವೆರ್ಟಿ ಕೀ ಪ್ಯಾಡ್
* 116.5 x 58 x 13.45 ಎಂ ಎಂ ಸುತ್ತಳತೆ
* 110 ಗ್ರಾಂ ತೂಕ
* 2.8 ಇಂಚಿನ TFT ಡಿಸ್ಪ್ಲೇ, 240 x 320 ಪಿಕ್ಸಲ್ ರೆಸೊಲ್ಯೂಷನ್
* 2,62,000 ಬಣ್ಣ ಬೆಂಬಲಿತ ಸ್ಕ್ರೀನ್
* 3 ಮೆಗಾ ಪಿಕ್ಸಲ್ ಕ್ಯಾಮೆರಾ, ಡಿಜಿಟಲ್ ಝೂಮ್
* ವೈ-ಫೈ, 2.1 ಬ್ಲೂಟೂಥ್, USB2.0 ಪೋರ್ಟ್
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* 3.5 ಎಂಎಂ ಆಡಿಯೋ ಜ್ಯಾಕ್
ಮೊಟೊರೊಲಾ ಸ್ಪೈಸ್ ವಿಶೇಷತೆ:
* ಟಚ್ ಸ್ಕ್ರೀನ್ ಮತ್ತು ಕ್ವೆರ್ಟಿ ಕೀ ಪ್ಯಾಡ್
* 97 x 61 x 16.8 ಎಂ ಎಂ ಸುತ್ತಳತೆ
* 145 ಗ್ರಾಂ ತೂಕ
* 3.0 ಇಂಚಿನ TFT ಡಿಸ್ಪ್ಲೇ, 240 x 320 ಪಿಕ್ಸಲ್ ರೆಸೊಲ್ಯೂಷನ್
* 3 ಮೆಗಾ ಪಿಕ್ಸಲ್ ಕ್ಯಾಮೆರಾ, 8x ಝೂಮ್ ಸಾಮರ್ಥ್ಯ
* ವೈ-ಫೈ, 2.0 ಬ್ಲೂಟೂಥ್, USB2.0 ಪೋರ್ಟ್
* 90 ಎಂಬಿವರೆಗು ಆಂತರಿಕ ಮೆಮೊರಿ ಸಾಮರ್ಥ್ಯ
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* 3.5 ಎಂಎಂ ಆಡಿಯೋ ಜ್ಯಾಕ್
ಎರಡೂ ಮೊಬೈಲ್ ಗಳಲ್ಲಿ ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್ ಇದೆ. ಆದರೆ ಮೊಟೊರೊಲಾ ಫೈರ್ ಮೊಬೈಲ್ ಗೆ ಆಂಬಿಯಂಟ್ ಲೈಟ್ ಸೆನ್ಸಾರ್ ವಿಶೇಷವಾಗಿ ನೀಡಲಾಗಿದೆ. ಎಲ್ಲಾ ಮ್ಯುಸಿಕ್ ಫಾರ್ಮೆಟ್ ಗಳನ್ನು ಈ ಫೋನ್ ಗಳು ಬೆಂಬಲಿಸಿ ಉತ್ಕ್ರಷ್ಟ ಮಟ್ಟದ ಸಂಗೀತ ನೀಡಲಿವೆ. ಎರಡರಲ್ಲೂ ಎಫ್ ಎಂ ಆಯ್ಕೆಯಿದೆ.
ಮೊಟೊರೊಲಾ ಫೈರ್ ಬೆಲೆ ಸುಮಾರು 10,000 ಅಥವಾ ಅದಕ್ಕಿಂತ ಸ್ವಲ್ಪ ಮೇಲ್ಪಟ್ಟಿದ್ದು, ಮೊಟೊರೊಲಾ ಸ್ಪೈಸ್ ಮೊಬೈಲ್ ಕೂಡ ಅದೇ ಬೆಲೆಯಲ್ಲಿ ಲಭ್ಯವಿರುವುದಾಗಿ ತಿಳಿದುಬಂದಿದೆ.


Click it and Unblock the Notifications