Home
ಮೊಬೈಲ್

Motorola: ಹೊಸ ಫೋನ್ ಲಾಂಚ್.. 41,800 ಬೆಲೆ.. ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು!

ಮೊಟೊರೊಲಾ ಕಂಪನಿಯು ಇತ್ತೀಚೆಗೆ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ ಮೊಟೊರೊಲಾ ಥಿಂಕ್‌ಫೋನ್ 25 (Motorola ThinkPhone 25) ಎಂಬ ಹೆಸರಿನೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದನ್ನು ಮೊಟೊರೊಲಾ ಥಿಂಕ್‌ಫೋನ್ ಸರಣಿಯ ಅಡಿಯಲ್ಲಿ ಪರಿಚಯಿಸಲಾಗಿದೆ. ಈ ಫೋನ್ ಕಳೆದ ವರ್ಷ ಬಿಡುಗಡೆಯಾದ ಫೋನಿನ ಉತ್ತರಾಧಿಕಾರಿಯಾಗಿ ಬರುತ್ತದೆ. ನೀವು, ಈ ಫೋನಿ ಖರೀದಿಗೂ ಮುನ್ನ ಈ ಟಾಫ್‌ ಫೀಚರ್ಸ್‌ಗಳನ್ನು ತಿಳಿಯುವುದು ಉತ್ತಮ.

ಮೊಟೊರೊಲಾ ಥಿಂಕ್‌ಫೋನ್ 25 ಅನ್ನು ಕೇವಲ ಒಂದೇ ಸ್ಟೋರೇಜ್‌ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಅನ್ನು ಹೊಂದಿದೆ. ಇದರಲ್ಲಿ6.36 ಇಂಚಿನ ಪೋಲೆಡ್ ಡಿfಪ್ಲೇಯನ್ನು ಅಳವಡಿಸಲಾಗಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸಲ್ಫಿ ಕ್ಯಾಮೆರಾ ಇದೆ. 8GB RAM, 4310mAh ಬ್ಯಾಟರಿ ಮತ್ತು 68W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಒಳಗೊಂಡಿದೆ.

Moto: ಹೊಸ ಫೋನ್ ಲಾಂಚ್.. 41,800 ಬೆಲೆ.. ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು!

ಮೊಟೊರೊಲಾ ಥಿಂಕ್‌ಫೋನ್ 25 ಸ್ಮಾರ್ಟ್‌ಫೋನ್ ಥಿಂಕ್‌ಶೀಲ್ಡ್ ಭದ್ರತೆ, ಮೂರು ವರ್ಷಗಳ ವಾರಂಟಿ, ಮೊಟೊ ಎಐ (Moto AI), 5 ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್ ಬೆಂಬಲ ಮತ್ತು MIL-STD 810H ಮಿಲಿಟರಿ ದರ್ಜೆಯ ಬಾಡಿಯನ್ನು ಸಹ ಹೊಂದಿದೆ. ಸ್ಮಾರ್ಟ್‌ ಕನೆಕ್ಟ್‌ (Smart Connect) ವೈಶಿಷ್ಟ್ಯದೊಂದಿಗೆ, ಥಿಂಕ್‌ಫೋನನ್ನು ಪಿಸಿಗೆ (PC) ಸಂಪರ್ಕಿಸಬಹುದು ಮತ್ತು ಫೈಲ್‌ಗಳನ್ನು ಸುಲಭವಾಗಿ ಶೇರ್ ಮಾಡಬಹುದು. ಯಾವುದೇ ಫೈಲ್‌ಗಳು, ಟೆಕ್ಸ್ಟ್‌, ಫೋಟೋ, ಡಾಕ್ಯುಮೆಂಟ್‌ ಮತ್ತು ಇತರ ಹಲವು ವಿಷಯಗಳನ್ನು ಸುಲಭವಾಗಿ ಡ್ರ್ಯಾಗ್ ಮತ್ತು ಡ್ರಾಪ್‌ನೊಂದಿಗೆ ಹಂಚಿಕೊಳ್ಳಬಹುದು.

ಮೊಟೊರೊಲಾ ಥಿಂಕ್‌ಫೋನ್ 25 ಬೆಲೆ ಎಷ್ಟು?

ಮೊಟೊರೊಲಾ ಥಿಂಕ್‌ಫೋನ್ 25 ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 41,800 ರೂ.ಗೆ (ಅಂದಾಜು US $ 499) ಬಿಡುಗಡೆ ಮಾಡಲಾಗಿದೆ. ನವೆಂಬರ್ ತಿಂಗಳ ಆರಂಭದಿಂದ ಈ ಫೋನ್ ಖರೀದಿಗೆ ಲಭ್ಯವಾಗಲಿದೆ. ನೀವು, ಹೊಸ ಮೊಟೊರೊಲಾ ಫೋನ್‌ ಅನ್ನುಕಾರ್ಬನ್ ಕಪ್ಪು ಬಣ್ಣದಲ್ಲಿ ಕೊಳ್ಳಬಹುದು.

ಮೊಟೊರೊಲಾ ಥಿಂಕ್‌ಫೋನ್ 25 ಟಾಪ್ 5 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಮೊಟೊರೊಲಾ ಥಿಂಕ್‌ಫೋನ್ 25 ಮೊಬೈಲ್ 6.36 ಇಂಚಿನ ಪೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, HDR10+ ಬೆಂಬಲ, 3,000 ನಿಟ್ಸ್‌ ವರೆಗಿನ ಗರಿಷ್ಠ ಬ್ರೈಟ್‌ನೆಸ್ ಮತ್ತು 2670 x 1220 ರೆಸಲ್ಯೂಶನ್ ಹೊಂದಿದೆ. ಡಿಸ್ಪ್ಲೇಯ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಅನ್ನು ನೀಡಲಾಗಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಈ ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನೊಂದಿಗೆ ಪರಿಚಯಿಸಿದೆ. ಇದು ಗೇಮಿಂಗ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಲಿದೆ. ಈ ಮೊಬೈಲ್ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ಮೊಟೊರೊಲಾ ಥಿಂಕ್‌ಫೋನ್ 25 ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ರಚನೆ

ಮೊಟೊರೊಲಾ ಥಿಂಕ್‌ಫೋನ್ 25 ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ, 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಬ್ಯಾಕಪ್

ಈ ಫೋನ್ 4,310mAh ಸಾಮರ್ಥ್ಯ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 68W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಲಭ್ಯವಿದೆ. ಇತರೆ ವೈಶಿಷ್ಟ್ಯಗಳಲ್ಲಿ ಬ್ಲೂಟೂತ್ 5.3, ಎನ್‌ಎಫ್‌ಸಿ, ಡಾಲ್ಬಿ ಅಟ್ಮಾಸ್ ಜೊತೆಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ವೈಫೈ 6E, ನೀರು ಮತ್ತು ಧೂಳಿನ ನಿರೋಧಕ IP68 ರೇಟಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳು ಒಳಗೊಂಡಿವೆ.

Best Mobiles in India

English summary
Motorola ThinkPhone 25 smartphone top things you need to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+