'ಮೊಟೊ ಜಿ7' ಸರಣಿಯ ಒಟ್ಟು ನಾಲ್ಕು ಸ್ಮಾರ್ಟ್‌ಪೋನ್‌ಗಳು ಲಾಂಚ್!!
ಬಜೆಟ್ ಬೆಲೆಯಲ್ಲೂ ಕೂಡ ಸ್ಮಾರ್ಟ್‌ಪೋನ್‌ಗಳನ್ನು ನೀಡಬಹುದು ಎಂದು ತೊರಿಸಿಕೊಟ್ಟಿದ್ದ ಲೆನೊವೊ ಅಧೀನತೆಯಲ್ಲಿರುವ 'ಮೊಟೊ' ಮತ್ತೆ ಕಮ್‌ಬ್ಯಾಕ್ ಮಾಡಿದೆ. ಕಳೆದ ಕೆಲವು ದಿನಗಳಿಂದ ಮೊಬೈಲ್ ಮಾರುಕಟ್ಟೆಯಿಂದ ಮರೆಯಾಗಿದ್ದ 'ಮೊಟೊ' ಮೊಬೈಲ್ ಬ್ರ್ಯಾಂಡ್, ಇದೀಗ ಅತಿ ನೂತನ ಜಿ7 ಶ್ರೇಣಿಯ ಮೂಲಕ ಒಮ್ಮೆಗೆ ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಮೂಲಕ ಆಶ್ಚರ್ಯಗೊಳಿಸಿದೆ.
ಬ್ರೆಜಿಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮೊಟೊರೊಲಾ ಸಂಸ್ಥೆಯು ಅತಿ ನೂತನ ಜಿ7 ಶ್ರೇಣಿಯ ಒಟ್ಟು ನಾಲ್ಕು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಂಡಿದ್ದು, ಮೊಟೊ ಜಿ7, ಮೊಟೊ ಜಿ7 ಪ್ಲಸ್, ಮೊಟೊ ಜಿ7 ಪ್ಲೇ ಮತ್ತು ಮೊಟೊ ಜಿ7 ಪವರ್ ಎಂಬ ನಾಲ್ಕು ಸ್ಮಾರ್ಟ್‌ಫೋನ್‌ಗಳು ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿವೆ. ಜೊತೆಗೆ ಮೊಟೊ ಬಿಡುಗಡೆ ಮಾಡಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಪ್ರಿಯರನ್ನು ಸೆಳೆಯುತ್ತಿವೆ.

ಮೊಟೊರೊಲಾ ಜಿ7 ಶ್ರೇಣಿಯ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಅತಿ ನೂತನ ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಂ ಪಡೆಯಲಿದ್ದು, ಅಲ್ಲದೆ ಆಧುನಿಕತೆಗೆ ತಕ್ಕಂತೆ ಅತಿ ಚಿಕ್ಕ ಬೆಜೆಲ್, 4G LTE ಬೆಂಬಲ, ಫಿಂಗರ್ ಪ್ರಿಂಟ್ ಸೆನ್ಸಾರ್ ಇತ್ಯಾದಿ ಫೀಚರ್‌ಗಳನ್ನು ಹೊಂದಿವೆ. ಹಾಗಾದರೆ, ವಿಶ್ವ ಮೊಬೈಲ್ ಮಾರುಕಟ್ಟೆಗೆ ಇದೀಗ ಬಿಡುಗಡೆಯಾಗಿರುವ ಮೊಟೊ ಜಿ7 ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಹೇಗಿವೆ?, ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಮೊಟೊ ಜಿ7 ವಿಶೇಷತೆಗಳು:
- 6.24 ಇಂಚುಗಳ ಫುಲ್ HD+ (1080x2270 ಪಿಕ್ಸೆಲ್) ಮ್ಯಾಕ್ಸ್ ವಿಷನ್ ಡಿಸ್‌ಪ್ಲೇ,
- 1.8GHz ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 632 SoC,
- 4GB RAM/64GB ಸ್ಟೋರೇಜ್
- 128GB ವರೆಗೂ ವರ್ಧಿಸಬಹುದು.
- 3,000mAh ಬ್ಯಾಟರಿ.
- ಡ್ಯುಯಲ್ ಸಿಮ್ ನ್ಯಾನೋ,
- ಡ್ಯುಯಲ್ ರಿಯರ್ ಕ್ಯಾಮೆರಾ,
- 12 MP + 5 MP,
- 8 MP ಸೆಲ್ಫಿ ಕ್ಯಾಮೆರಾ.

ಮೊಟೊ ಜಿ7 ಪ್ಲಸ್ ವಿಶೇಷತೆಗಳು:
6.24 ಇಂಚುಗಳ HD+ (1080x2270 ಪಿಕ್ಸೆಲ್) ಮ್ಯಾಕ್ಸ್ ವಿಷನ್ ಸ್ಕ್ರೀನ್,
1.8GHz ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 636 SoC,
4GBRAM/64GB.
512GB ವರೆಗೂ ವರ್ಧಿಸಬಹುದು.
ಡ್ಯುಯಲ್ ರಿಯರ್ ಕ್ಯಾಮೆರಾ,
16 MP + 5 MP,
12 MP ಸೆಲ್ಫಿ ಕ್ಯಾಮೆರಾ,
3,000mAh ಬ್ಯಾಟರಿ.

ಮೊಟೊ ಜಿ7 ಪವರ್:
6.2 ಇಂಚುಗಳ HD+ (720x1520 ಪಿಕ್ಸೆಲ್) ರೆಸೊಲ್ಯೂಷನ್,
5,000mAh,
3GB RAM/32GB ಆಂತರಿಕ ಸ್ಟೋರೆಜ್,
1.8GHz ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 632 SoC,
12 MP ರಿಯರ್ ಕ್ಯಾಮೆರಾ,
8 MP ಫ್ರಂಟ್ ಶೂಟರ್,

ಮೊಟೊ ಜಿ7 ಪ್ಲೇ:
5.7 ಇಂಚುಗಳ ಮ್ಯಾಕ್ಸ್ ವಿಷನ್ ಸ್ಕ್ರಿನ್ HD (720x1512 ಪಿಕ್ಸೆಲ್) ರೆಸೊಲ್ಯೂಷನ್,
1.8GHz ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 632 SoC,
2GB RAM/32GB.
128GB ವರೆಗೂ ವರ್ಧಿಸಬಹುದು.
3,000mAh ಬ್ಯಾಟರಿ,
13 MP ರಿಯರ್ ಕ್ಯಾಮೆರಾ,
8 MP ಸೆಲ್ಫಿ ಕ್ಯಾಮೆರಾ

ಸ್ಮಾರ್ಟ್‌ಪೋನ್ ಬೆಲೆಗಳು
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮೊಟೊ ಜಿ7 $299 (ಅಂದಾಜು ರೂ. 21,300) ಬೆಲೆ ಹೊಂದಿದೆ, ಇನ್ನು ಮೊಟೊ ಜಿ7 ಪ್ಲಸ್ ಬೆಲೆ 299.99 ಯುರೊ (ಅಂದಾಜು. 24,500 ರೂ) ಗಳಾದರೆ, ಮೊಟೊ ಜಿ7 ಪವರ್ ಮತ್ತು ಮೊಟೊ ಜಿ7 ಪ್ಲೇ ಸ್ಮಾರ್ಟ್‌ಫೋನ್ ಬೆಲೆಗಳು ಕ್ರಮವಾಗಿ $ 249 (ಸರಿಸುಮಾರು 17,800 ರೂ.) $ 199 (ಸರಿಸುಮಾರು 14,200 ರೂ.)ಗಳಾಗಿವೆ. ಆದರೆ, ಭಾರತದಲ್ಲಿ ಈ ಎಲ್ಲಾ ಸ್ಮಾರ್ಟ್‌ಪೋನ್‌ಗಳು ಕಡಿಮೆ ಬೆಲೆಗೆ ಬಿಡುಗಡೆಯಾಗಲಿವೆ.


Click it and Unblock the Notifications








