Home
ಮೊಬೈಲ್

ಬಹುನಿರೀಕ್ಷಿತ Motorola Razr Fold ಮತ್ತು Edge 70 Fusion ಭರ್ಜರಿ ಲಾಂಚ್!

ವಿಶ್ವ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Motorola Razr Fold ಮತ್ತು Motorola Edge 70 Fusion ಎರಡು ಸ್ಮಾರ್ಟ್‌ಫೋನ್‌ಗಳು MWC 2026 (ಮೊಬೈಲ್ ವರ್ಲ್ಡ್ ಕಾಂಗ್ರೆಸ್) ನಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿವೆ. ನಿರೀಕ್ಷೆಯಂತೆಯೇ, ಪ್ರೀಮಿಯಂ ಫೋಲ್ಡಬಲ್ ವಿಭಾಗಕ್ಕೆ Motorola Razr Fold ಫೋನ್ ಪ್ರವೇಶಿಸಿದರೆ, ಸ್ಟೈಲಿಶ್ ಮಧ್ಯಮ ಶ್ರೇಣಿಗೆ ಹೊಸ ಸ್ಪರ್ಧಿಯಾಗಿ Motorola Edge 70 Fusion ಆಗಮನವು ಗಮನಸೆಳೆದಿದೆ.

ಹೊಸ Motorola Razr Fold ಮೊಟೊರೊಲಾದಿಂದ ಬಿಡುಗಡೆಯಾದ ಮೊದಲ ಪುಸ್ತಕ ಶೈಲಿಯ ಮಡಿಸಬಹುದಾದ ಸ್ಮಾರ್ಟ್‌ಫೋನ್ ಆಗಿದ್ದು, ಸ್ನಾಪ್‌ಡ್ರಾಗನ್ 8 Gen 5 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6,000mAh ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ವಿರುದ್ಧವಾಗಿ, Motorola Edge 70 Fusion ಯಲ್ಲಿ ಸ್ನಾಪ್‌ಡ್ರಾಗನ್ 7s Gen 3 ಚಿಪ್‌ಸೆಟ್ ಅನ್ನು ಹೊಂದಿದೆ ಮತ್ತು 5,200mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

Motorola Razr Fold: ಬುಕ್-ಸ್ಟೈಲ್ ಫೋಲ್ಡಬಲ್‌ನಲ್ಲಿ ಮೋಟೊರೊಲಾದ ಹೊಸ ಪ್ರಯೋಗ
ಮೊದಲೇ ಹೇಳಿದಂತೆ, Motorola Razr Fold ಕಂಪನಿಯ ಮೊದಲ ಪುಸ್ತಕದಂತೆ ತೆರೆಯಬಹುದಾದ ಫೋಲ್ಡಬಲ್ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆಯಾಗಿದೆ. ಡಿಸ್‌ಪ್ಲೆ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ 6.6-ಇಂಚಿನ (1,080x2,520 ಪಿಕ್ಸೆಲ್‌ಗಳು) LTPO pOLED ಕವರ್ ಡಿಸ್ಪ್ಲೇಯನ್ನು 21:9 ಆಕಾರ ಅನುಪಾತ, 165Hz ರಿಫ್ರೆಶ್ ದರ ಮತ್ತು 6,000 nits ಗರಿಷ್ಠ ಹೊಳಪು ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸೆರಾಮಿಕ್ 3 ಲೇಪನವನ್ನು ಹೊಂದಿದೆ.

ಮಡಿಸಬಹುದಾದ ಈ ಫೋಲ್ಡಬಲ್ 8.1-ಇಂಚಿನ ಒಳಗಿನ LTPO pOLED ಡಿಸ್ಪ್ಲೇಯನ್ನು 2K ರೆಸಲ್ಯೂಶನ್, 120Hz ರಿಫ್ರೆಶ್ ದರ, 6,200 nits ಗರಿಷ್ಠ ಹೊಳಪು ಮತ್ತು ಅಲ್ಟ್ರಾ ಥಿನ್ ಗ್ಲಾಸ್ (UTG) ರಕ್ಷಣೆಯನ್ನು ಹೊಂದಿದೆ. ತೆರೆದ ಸ್ಥಿತಿಯಲ್ಲಿ ಸುಮಾರು 4.7 ಮಿಮೀ ದಪ್ಪ ಮತ್ತು ಮುಚ್ಚಿದಾಗ ಸುಮಾರು 10 ಮಿಮೀ ದಪ್ಪ ಇರುವ ಈ ಫೋನ್, ಕೇವಲ 243 ಗ್ರಾಂ ತೂಕ ಹೊಂದಿದೆ. ಸ್ಲಿಮ್ ವಿನ್ಯಾಸದೊಂದಿಗೆ ಪ್ರೀಮಿಯಂ ಲುಕ್ ನೀಡಲು ಕಂಪನಿ ವಿಶೇಷ ಗಮನ ಹರಿಸಿದೆ.

ಬಹುನಿರೀಕ್ಷಿತ Motorola Razr Fold ಮತ್ತು Edge 70 Fusion ಭರ್ಜರಿ ಲಾಂಚ್!

ಕಾರ್ಯಕ್ಷಮತೆ ವಿಭಾಗದಲ್ಲಿ, Razr Fold ನಲ್ಲಿ Snapdragon 8 Gen 5 ಚಿಪ್‌ಸೆಟ್ ಅಳವಡಿಸಲಾಗಿದೆ. 16GB ವರೆಗೆ RAM ಹಾಗೂ 1TB ವರೆಗೆ ಸ್ಟೋರೇಜ್ ಆಯ್ಕೆ ಲಭ್ಯ. 'RAM Boost' ಮೂಲಕ ಹೆಚ್ಚುವರಿ ವರ್ಚುವಲ್ ಮೆಮೊರಿಯನ್ನು ಬಳಸುವ ವ್ಯವಸ್ಥೆಯೂ ಇದೆ. ಸಾಫ್‌ವೇರ್ ವಿಭಾಗದಲ್ಲಿ, Android 16 ಆಧಾರಿತ My UX ಮೇಲೆ ಕಾರ್ಯನಿರ್ವಹಿಸುವ ಈ ಸಾಧನಕ್ಕೆ ಏಳು ವರ್ಷಗಳವರೆಗೆ Android OS ಅಪ್ಡೇಟ್ ಮತ್ತು ಭದ್ರತಾ ಅಪ್ಡೇಟ್‌ಗಳನ್ನು ನೀಡುವುದಾಗಿ ಮೋಟೊರೊಲಾ ಘೋಷಿಸಿದೆ.

ಫೋಟೋಗ್ರಫಿ ವಿಭಾಗದಲ್ಲಿ Razr Fold ಗಮನಾರ್ಹವಾಗಿದೆ. ಈ ಫೋನ್ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ Sony LYTIA ಮುಖ್ಯ ಸೆನ್ಸರ್, 3x ಆಪ್ಟಿಕಲ್ ಜೂಮ್ ಹೊಂದಿರುವ 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾ ಹೊಂದಿದೆ.ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ 32MP ಕವರ್ ಕ್ಯಾಮೆರಾ ಹಾಗೂ 20MP ಒಳಗಿನ ಕ್ಯಾಮೆರಾ ಲಭ್ಯ. ಫೋನಿನಲ್ಲಿ 8K 30fps ಮತ್ತು 4K 60fps ವಿಡಿಯೋ ರೆಕಾರ್ಡಿಂಗ್ ಬೆಂಬಲವಿದೆ ಎಂದು ತಿಳಿಸಲಾಗಿದೆ.

ಬ್ಯಾಟರಿ ವಿಭಾಗದಲ್ಲಿ, Razr Fold ನಲ್ಲಿ 6,000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. 80W ವೈರ್‌ಡ್ ಫಾಸ್ಟ್ ಚಾರ್ಜಿಂಗ್ ಹಾಗೂ 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಇದೆ. Wi-Fi 7, 5G, NFC ಸೇರಿದಂತೆ ನವೀನ ಸಂಪರ್ಕ ಆಯ್ಕೆಗಳು, ಜೊತೆಗೆ IP49 ರೇಟಿಂಗ್ ನೀಡಲಾಗಿದೆ.

Motorola Razr Fold: ಬೆಲೆ ಎಷ್ಟು?
ಪ್ರಸ್ತುತ ಯುರೋಪ್ ಮಾರುಕಟ್ಟೆಯಲ್ಲಿ Motorola Razr Fold ಬೆಲೆ EUR 1,999 (ಸುಮಾರು ₹2.14 ಲಕ್ಷ) ಎಂದು ಘೋಷಿಸಲಾಗಿದೆ. Pantone Blackened Blue ಮತ್ತು Pantone Lily White ಬಣ್ಣಗಳಲ್ಲಿ ಪರಿಚಯವಾಗಿರುವ ಈ ಫೋನ್ Moto Pen Ultra ಜೊತೆಗೆ ಬಂಡಲ್ ರೂಪದಲ್ಲಿ ಲಭ್ಯವಾಗಲಿದೆ. ಇನ್ನು ಫುಟ್ಬಾಲ್ ಅಭಿಮಾನಿಗಳಿಗೆ ವಿಶೇಷವಾಗಿ FIFA World Cup 26 Collection ಆವೃತ್ತಿಯನ್ನೂ ಪರಿಚಯಿಸಲಾಗಿದ್ದು, ಫುಟ್ಬಾಲ್ ಪ್ರೇರಿತ ವಿನ್ಯಾಸ, 24K ಗೋಲ್ಡ್ ಅಲಂಕಾರ ಮತ್ತು ವಿಶೇಷ "26" ಬ್ರ್ಯಾಂಡಿಂಗ್ ಈ ಆವೃತ್ತಿಯ ಪ್ರಮುಖ ವಿಶೇಷತೆಯಾಗಿದೆ.

Motorola Edge 70 Fusion: ಪ್ರೀಮಿಯಂ ಫೀಚರ್‌ಗಳೊಂದಿಗೆ ಮಧ್ಯಮ ಶ್ರೇಣಿ
Motorola Razr Fold ಜೊತೆಗೆ ಮಾರುಕಟ್ಟೆಯ ಗಮನಸೆಳೆದ ಮತ್ತೊಂದು ಸ್ಮಾರ್ಟ್‌ಫೋನ್ Motorola Edge 70 Fusion. ಈ ಹೊಸ ಸಾಧನವು 6.8 ಇಂಚಿನ AMOLED ಡಿಸ್‌ಪ್ಲೆ ಹೊಂದಿದ್ದು, 1.5K ರೆಸಲ್ಯೂಶನ್, 144Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ 5,200 ನಿಟ್ಸ್ ಬ್ರೈಟ್‌ನೆಸ್ ನೀಡುತ್ತದೆ. ಇದು Gorilla Glass 7i ರಕ್ಷಣೆ, IP68 + IP69 ರೇಟಿಂಗ್ ಹಾಗೂ MIL-STD-810H ಪ್ರಮಾಣೀಕರಣವನ್ನು ಹೊಂದಿರುವುದು ವಿಶೇಷವಾಗಿದೆ.

ಕಾರ್ಯಕ್ಷಮತೆ ವಿಭಾಗದಲ್ಲಿ, ಈ ಫೋನ್ Snapdragon 7s Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಿದೆ. ಕ್ಯಾಮೆರಾ ವಿಭಾಗದಲ್ಲಿ 50MP Sony LYTIA 710 (OIS), 13MP ಅಲ್ಟ್ರಾವೈಡ್ ಮತ್ತು ಮ್ಯಾಕ್ರೋ ಲೆನ್ಸ್ ಹೊಂದಿದೆ. ಜೊತೆಗೆ 32MP ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾ ಇದೆ. ಬ್ಯಾಟರಿ ವಿಭಾಗದಲ್ಲಿ, 5,200mAh ಸಾಮರ್ಥ್ಯದ ಬ್ಯಾಟರಿ ಮತ್ತು 68W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ. ಮತ್ತು ಬೆಲೆಯು ಇನ್ನೂ ಪ್ರಕಟವಾಗಿಲ್ಲ.

ಭಾರತದಲ್ಲಿ ಬಿಡುಗಡೆ ಯಾವಾಗ?
Motorola Razr Fold ಮತ್ತು Edge 70 Fusion ಎರಡೂ ಏಷ್ಯಾ ಪ್ಯಾಸಿಫಿಕ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ ಎಂದು Motorola ಕಂಪನಿ ದೃಢಪಡಿಸಿದೆ. ಆದ್ದರಿಂದ ಭಾರತದಲ್ಲಿ ಈ ಎರಡೂ ಫೋನ್‌ಗಳ Motorola ಕುರಿತು ಅಧಿಕೃತ ಘೋಷಣೆ ಶೀಘ್ರದಲ್ಲೇ ನಿರೀಕ್ಷಿಸಬಹುದು. ಬೆಲೆ ವಿವರಗಳು ಪ್ರಕಟವಾದ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ. Razr Fold ಪ್ರೀಮಿಯಂ ವಿಭಾಗದಲ್ಲಿ ಹೊಸ ಸ್ಪರ್ಧೆ ಹುಟ್ಟುಹಾಕಿದರೆ, Edge 70 Fusion ವೈಶಿಷ್ಟ್ಯ ಮತ್ತು ಬೆಲೆಯ ಸಮತೋಲನದ ಆಯ್ಕೆಯಾಗಿ ಕಾಣುತ್ತಿದೆ.

Best Mobiles in India

English summary
Motorola has officially launched the premium Razr Fold and stylish mid-range Edge 70 Fusion smartphones at MWC 2026. The Razr Fold debuts as Motorola’s first book-style foldable powered by the Snapdragon 8 Gen 5 chipset and a 6,000mAh battery, while the Edge 70 Fusion arrives with Snapdragon 7s Gen 3 and a 5,200mAh battery, targeting the competitive mid-range segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+