Subscribe to Gizbot

ಸ್ಟೈಲಿಷ್ ಲುಕ್ ನೀಡುತ್ತೆ ಮೊಟೊರೊಲಾ XT532 ಮೊಬೈಲ್

Posted By:
ಸ್ಟೈಲಿಷ್ ಲುಕ್ ನೀಡುತ್ತೆ ಮೊಟೊರೊಲಾ XT532 ಮೊಬೈಲ್
ಮೊಬೈಲ್ ಫೋನ್ ಭಾರತಕ್ಕೆ ಪರಿಚಯವಾದಾಗ ದಶಕಗಳ ಕಾಲ ಮೊಟೊರೊಲಾ ಕಂಪನಿಯ ಮೊಬೈಲ್ ಗಳು ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿದ್ದವು. ನಂತರ ಅನೇಕ ಮೊಬೈಲ್ ಕಂಪನಿಗಳು ತಮ್ಮ ಹೊಸ ಮೊಬೈಲ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದವು. ಇದರಿಂದಾಗಿ ಭಾತದಲ್ಲಿ ಮೊಬೈಲ್ ಸಾಮ್ರಾಜ್ಯ ವಿಸ್ತಾರವಾಯಿತು. ಆದರೂ ಕೂಡ ಮೊಟೊರೊಲಾ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಇದೀಗ ಮೊಟೊರೊಲಾ XT532 ಮಾಡಲ್ ಅನ್ನು ಬಿಡುಗಡೆ ಮಾಡಿದ್ದು ಈ ಮೊಬೈಲ್ ನೋಡಲು ಸ್ಟೈಲಿಷ್ ಆಗಿದ್ದು ಹೆಚ್ಚಾಗಿ ಯುವ ಜನಾಂಗವನ್ನು ಸೆಳೆಯುವಂತೆ ಇದೆ.

ಈ ಹೊಸ ಮಾಡಲ್ ಗುಣಮಟ್ಟದಲ್ಲಿ ಉತ್ತಮವಾಗಿದ್ದು ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

* ಡ್ಯುಯೆಲ್ ಸಿಮ್

* ಟಚ್ ಸ್ಕ್ರೀನ್

* 3.5 ಇಂಚಿನ ಸ್ಕ್ರೀನ್

* MP3 ರಿಂಗ್ ಟೋನ್

* ವಿಸ್ತರಿಸಬಹುದಾದ ಮೆಮೊರಿ 32GB

* GPRS/EDGE ಸಪೋರ್ಟ್

* WLAN

* ಬ್ಲೂಟೂಥ್ ಮತ್ತು USB ಸಂಪರ್ಕ

* 114 mm x 62 mm x 12 mm ಡೈಮೆಂಶನ್

* 115 ಗ್ರಾಂ ತೂಕ

*ರೆಸ್ಯೂಲೇಶನ್ 320 x 480 ಪಿಕ್ಸಲ್

* ಕ್ಯಾಮೆರಾ ಸಾಮರ್ಥ್ಯ 5 ಮೆಗಾ ಪಿಕ್ಸಲ್

*ಕ್ವಾಲ್ ಕಮ್ MSM7227T-1 ಪ್ರೊಸೆಸರ್

* 512 MB ಇಂಟರ್ನಲ್ ಮೆಮೊರಿ ಸಾಮಾರ್ಥ್ಯ

* ಆಂಡ್ರಾಯ್ಡ್ 2.3.7 ಆಯಾಮದ ಆಪರೇಟಿಂಗ್ ಸಿಸ್ಟಮ್

* ಲೀಥಿಯಂ ಬ್ಯಾಟರಿ

ಮೊಟೊರೊಲಾ XT532 ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ 30,000 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot