ಮೊಟೊರೊಲಾ ನೀಡಿದೆ ನೂತನ XT615 ಸ್ಮಾರ್ಟ್ ಫೋನ್

By Super
|
ಮೊಟೊರೊಲಾ ನೀಡಿದೆ ನೂತನ XT615 ಸ್ಮಾರ್ಟ್ ಫೋನ್

ಮೊಟೊರೊಲಾ ಕಂಪನಿ ಇತ್ತೀಚೆಗಷ್ಟೆ ಹೊಸ ಸ್ಮಾರ್ಟ್ ಫೋನನ್ನು ಬಿಡುಗಡೆಗೊಳಿಸಿದೆ. ಮೊಟೊರೊಲಾ XT615 ಎಂಬ ನೂತನ ಮೊಬೈಲ್ ಆಧುನಿಕ ವಿನ್ಯಾಸ ಹೊಂದಿದ್ದು, ಗಾಢ ಬೂದು ಬಣ್ಣ ಮತ್ತು ಸಿಲ್ವರ್ ಬಿಳಿ ಬಣ್ಣದ ಮಿಶ್ರಣದಲ್ಲಿರುವ ಈ ಮೊಬೈಲನ್ನು ನೋಡಿದ ತಕ್ಷಣವೇ ಕೊಂಡುಕೊಳ್ಳುವ ಮನಸ್ಸಾಗುತ್ತದೆ.

ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ 800MHz ವೇಗದ ಕ್ವಾಲ್ಕಂ MSM7227A-0 ಪ್ರೊಸೆಸರ್ ಹೊಂದಿದೆ.

ಈ ಮೊಬೈಲಲ್ಲಿ 3ಜಿ ಸಂಪರ್ಕವೂ ಸಾಧ್ಯವಿದೆ.

ಮೊಟೊರೊಲಾ XT615 ಮೊಬೈಲ್ ವಿಶೇಷತೆ:

* 117.7 ಎಂಎಂ x 60.5 ಎಂಎಂ x 9.85 ಎಂಎಂ ಸುತ್ತಳತೆ

* 123.6 ಗ್ರಾಂ ತೂಕ

* 4 ಇಂಚಿನ ಡಿಸ್ಪ್ಲೇ, 854 x 480 ಪಿಕ್ಸಲ್ ರೆಸೊಲ್ಯೂಷನ್

* ಟಚ್ ಸ್ಕ್ರೀನ್ ಡಿಸ್ಪ್ಲೇ

* ಡ್ಯೂಯಲ್ VGA ಕ್ಯಾಮೆರಾ

* 8 ಮೆಗಾ ಪಿಕ್ಸಲ್ ಕ್ಯಾಮೆರಾ, LED ಫ್ಲಾಶ್

* 512 ಎಂಬಿ ಸಿಸ್ಟಮ್ ಮೆಮೊರಿ

* 1 ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ

* 32ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಆಯ್ಕೆ

* 3.0 ಆಯಾಮದ ಬ್ಲೂಟೂಥ್, ವೈ-ಫೈ ಸಂಪರ್ಕ

ಮನರಂಜನೆಗೆಂದು ಹಲವು ಆಯ್ಕೆಗಳಿದ್ದು, Mp4, Divx ಮತ್ತು WAV ಫಾರ್ಮೆಟ್ ಗಳನ್ನು ಮೊಬೈಲ್ ಬೆಂಬಲಿಸುತ್ತದೆ. 1390mAh ಲೀಥಿಯಂ ಬ್ಯಾಟರಿ ಹೊಂದಿರುವ ಈ ಮೊಬೈಲ್ 300 ನಿಮಿಷ ಟಾಕ್ ಟೈಂ ಮತ್ತು 110 ಗಂಟೆ ನೀಡುತ್ತದೆ.

ಈ ಮೊಬೈಲಿನ ಬೆಲೆ ಭಾರತದಲ್ಲಿ ಎಷ್ಟು ಎಂಬ ಮಾಹಿತಿ ಇಲ್ಲ. ಆದರೆ ವಿದೇಶಿ ಮಾರುಕಟ್ಟೆಯಲ್ಲಿನ ಈ ಮೊಬೈಲ್ ಬೆಲೆಗೆ ಹೋಲಿಸಿದರೆ ಭಾರತದಲ್ಲಿ ಇದು 20,000 ರೂಗೆ ಲಭಿಸುವ ಅಂದಾಜಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X