ಫೋಟೊಗ್ರಫಿಗೂ ಸೈ ಈ ನೂತನ ಮೊಟೊರೊಲಾ ಮೊಬೈಲ್

ಮೊಟೊರೊಲಾ ಕಂಪನಿ ಗ್ರಾಹಕರಿಗೆಂದು ದಿನೇ ದಿನೇ ವಿಶೇಷ ಶೈಲಿಯ ಮೊಬೈಲ್ ಗಳನ್ನು ಹೊರತರುತ್ತಲೇ ಇದೆ. ಈಗ ಮತ್ತೊಂದು ಆಂಡ್ರಾಯ್ಡ್ ಬೆಂಬಲಿತ ಮೊಟೊರೊಲಾ XT928 ಎಂಬ ಮೊಬೈಲನ್ನು ಬಿಡುಗಡೆಗೊಳಿಸುವುದಾಗಿ ಕಂಪನಿ ಘೋಷಿಸಿದೆ.
ಸ್ಮಾರ್ಟ್ ಆಗಿರುವ ಈ ಹ್ಯಾಂಡ್ ಸೆಟ್ ಇನ್ನೇನು ಕೆಲವೇ ದಿನಗಳಲ್ಲಿ ಮೊಬೈಲ್ ಸ್ಟೋರ್ ಗಳಿಗೆ ಕಾಲಿಡಲಿದೆ. ವಿಸ್ತಾರವಾದ ಸ್ಕ್ರೀನ್ ಮತ್ತು ಕಟಿಂಗ್ ಎಡ್ಜ್ ಗಳಿಂದ ಅತ್ಯುನ್ನತ ವಿನ್ಯಾಸ ಪಡೆದುಕೊಂಡಿರುವ ಈ ಮೊಬೈಲ್ ನೋಕಿಯಾ N73 ಮಾದರಿಯನ್ನು ಹೋಲುತ್ತದೆ.
2.3 ಆಯಾಮದ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಮೊಬೈಲ್ 1.2 GHz ಡ್ಯೂಯಲ್ ಕೋರ್ ಪ್ರೊಸೆಸರ್ ಬಳಸಿಕೊಳ್ಳಲಿದೆ. ಅತ್ಯುನ್ನತ ಮಟ್ಟದ 13 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿರುವುದು ಈ ಮೊಬೈಲಿನ ಆಕರ್ಷಣೆಯೆಂದೂ ಹೇಳಬಹುದು.
ಮೊಟೊರೊಲಾ XT928 ಮೊಬೈಲ್ ವಿಶೇಷತೆ:
* 4.5 ಇಂಚಿನ ಡಿಸ್ಪ್ಲೇ, 1280 x 720 ಪಿಕ್ಸಲ್ ರೆಸೊಲ್ಯೂಷನ್
* ಟಚ್ ಸೌಲಭ್ಯ
* 13 ಮೆಗಾ ಪಿಕ್ಸಲ್ ಕ್ಯಾಮೆರಾ
* ಸೆಕೆಂಡರಿ ಕ್ಯಾಮೆರಾ
* ವೈ-ಫೈ, ಬ್ಲೂಟೂಥ್, USB ಸೌಲಭ್ಯ
* 16 ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ
* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ
* 3.5 ಎಂಎಂ ಆಡಿಯೋ ಜ್ಯಾಕ್
ಮನರಂಜನೆ ಮತ್ತು ಸಾಮಾಜಿಕ ತಾಣಗಳ ಆಯ್ಕೆಗೆ ಹ್ಯಾಂಡ್ ಸೆಟ್ ನಲ್ಲಿ ಅವಕಾಶವಿದೆ. ಮಲ್ಟಿ ಫಾರ್ಮೆಟ್ ವಿಡಿಯೋ ಮತ್ತು ಆಡಿಯೋ ಪ್ಲೇಯರ್ ಕೂಡಇದರಲ್ಲಿದೆ. ಒಳ್ಳೆಯ ಬ್ಯಾಟರಿ ಹೊಂದಿರುವ ಈ ಮೊಬೈಲ್ ಬೆಲೆಯನ್ನು ಕಂಪನಿ ಇನ್ನು ಕೆಲವೇ ದಿನಗಳಲ್ಲಿ ಘೋಷಿಸಲಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
