ಮೊಜಿಲ್ಲಾದಿಂದ ೧೦ ಪಟ್ಟು ಕಮ್ಮಿ ದರದ ಸ್ಮಾರ್ಟ್ ಫೋನ್ ಒ.ಎಸ್

Posted By: Varun
ಮೊಜಿಲ್ಲಾದಿಂದ ೧೦ ಪಟ್ಟು ಕಮ್ಮಿ ದರದ ಸ್ಮಾರ್ಟ್ ಫೋನ್ ಒ.ಎಸ್
ಪೈರ್ ಫಾಕ್ಸ್ ವೆಬ್ ಬ್ರೌಸರ್ ನಿಂದ ವಿಶ್ವ ಖ್ಯಾತಿ ಗಳಿಸಿರುವ ಮೊಜಿಲ್ಲಾ, ಈಗ ಮೊಬೈಲ್ ಬಳಕೆದಾರರಿಗೆ ತೆರೆದ ಮೂಲ ಕಾರ್ಯವ್ಯವಸ್ಥೆ (open source) ಮೂಲಕ ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಹೊರತರಲಿದೆ ಎಂದು ಹೇಳಿಕೊಂಡಿದೆ.

ಗೂಗಲ್ ನ ಆಂಡ್ರಾಯ್ಡ್ ಹಾಗು ಆಪಲ್ ನ ಐ.ಒ.ಎಸ್ ಆಪರೇಟಿಂಗ್ ಸಿಸ್ಟಮ್ ಆಧಾರಿತ ಸ್ಮಾರ್ಟ್ ಫೋನ್ ಗಳಿಗಿಂತ ಹತ್ತು ಪಟ್ಟು ಕಡಿಮೆ ದರದಲ್ಲಿ ಒ.ಎಸ್ ಉತ್ಪಾದನೆ ಮಾಡಿ ಬಿಡುಗಡೆ ಮಾಡಲಿದೆಯಂತೆ.

ಇದರ ಹಿಂದಿನ ಐಡಿಯಾ ಏನೆಂದರೆ ಈಗಿನ ತಂತ್ರಾಂಶ ಕ್ಕೆ ಹೆಚ್ಚಿನ ವೇಗದ ಸಂಸ್ಕಾರಕಗಳು ಹಾಗು ಮಧ್ಯಸ್ಥಿಕೆ ತಂತ್ರಾಂಶಗಳ ಅವಶ್ಯಕತೆ ಇದ್ದು, ದುಬಾರಿಯಾಗುತ್ತದೆ. ಆದರೆ ಮೊಜಿಲ್ಲಾ ಉತ್ಪಾದಿಸುವ ಸಂಸ್ಕಾರಕ ವೆಬ್ ಮೂಲವಾಗಿರುವುದರಿಂದ ನಿಮಗೆ ಮಧ್ಯಸ್ಥಿಕೆ ತಂತ್ರಾಂಶಗಳ ಅವಶ್ಯಕತೆ ಬರುವುದಿಲ್ಲ. ನೀವು ವೆಬ್ ಮೂಲಕವೇ ಕರೆ ಮಾಡಬಹುದು, ಸಂದೇಶ ಕಳಿಸಬಹುದು ಮತ್ತು ಬ್ರೌಸಿಂಗ್ ಕಾರ್ಯಗಳನ್ನು ಫೋನ್ ನಲ್ಲಿ ಲೀಲಾಜಾಲವಾಗಿ ಮಾಡಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot