5,999 ರೂ. ಬೆಲೆಗೆ ಎಂಟಿಎಸ್‌ ಎಂಟ್ಯಾಗ್‌ 353 ಬಂದಿದೆ

By Vijeth Kumar Dn
|

5,999 ರೂ. ಬೆಲೆಗೆ ಎಂಟಿಎಸ್‌ ಎಂಟ್ಯಾಗ್‌ 353 ಬಂದಿದೆ

ಎಂಟಿಎಸ್‌ ಟೆಲಿಕಾಂ ಆಪರೇಟಿಂಗ್ ಸಂಸ್ಥೆಯು ಭಾರತದಲ್ಲಿ ಕಳೆದ ಆಗಸ್ಟ್‌ ತಿಂಗಳಿನಲ್ಲಿ ಆಂಡ್ರಾಯ್ಡ್ ಚಾಲಿತ ಮೂರು ನೂತನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಮತ್ತೊಂದು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಆದಂತಹ ಎಂಟ್ಯಾಗ್‌ 353 ಬಿಡುಗಡೆ ಮಾಡಿದೆ.

ಎಂಟಿಎಸ್‌ನ ನೂತನ ಸ್ಮಾರ್ಟ್‌ ಫೋನ್‌ ಆಂಡ್ರಾಯ್ಡ್‌ ಜಿಂಜರ್‌ಬ್ರೆಡ್‌ ಆಪರೇಟಿಂಗ್‌ ಸಿಸ್ಟಂ ನೊಂದಿಗೆ, ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಒಳಗೊಂಡಿದ್ದು ಯುವಗ್ರಾಹಕರುಗಳನ್ನು ಆಕರ್ಶಿಸಲು ಸಲುವಾಗಿ ಮಾಡಲಾಗಿದೆ ಎಂದು ಎಂಟಿಎಸ್‌ ಸಂಸ್ಥೆಯ ಮಾರ್ಕೆಟಿಂಗ್‌ ಹಾಗೂ ಸೇಲ್ಸ್‌ ಮುಖ್ಯಸ್ಥರು ನೂತನ “MTS MTag 353" ಬಿಡುಗಡೆಯ ಸಮಾರಂಭದಲ್ಲಿ ಹೇಳಿದ್ದಾರೆ.

ಅಂದಹಾಗೆ ನೂತನ ಎಂಟಿಎಸ್‌ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ಗಳಿವೆ ಎಂದು ತಿಳಿದುಕೊಳ್ಳೋಣ.

ವಿಶೇಷತೆ

ದರ್ಶಕ: 3.5 ಇಂಚಿ ಮಲ್ಟಿಟಚ್‌ HVGA ದರ್ಶಕ ಹಾಗೂ 320 x 480 ಪಿಕ್ಸೆಲ್ಸ್‌ ಹೊಂದಿದೆ.

ಪ್ರೊಸೆಸರ್‌: MTag 353 ನಲ್ಲಿ 800MHZ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್ ಸಿಸ್ಟಂ: ಬಜೆಟ್‌ ಸ್ಮಾರ್ಟ್‌ಫೋನ್‌ ಆದ್ದರಿಂದ ಆಂಡ್ರಾಯ್ಡ್‌ 2.3 ಜಿಂಜರ್‌ಬ್ರೆಡ್‌ OS ಚಾಲಿತವಾಗಿದೆ.

ಕ್ಯಾಮೆರಾ: MTag 353 ನಲ್ಲಿ ಹಿಂಬದಿಯ 3MP ಕ್ಯಾಮೆರಾ ಇದ್ದು ವಿಡಿಯೋ ಕರೆಗಾಗಿ ಮುಂಬದಿಯ ಕ್ಯಾಮೆರಾ ಇಲ್ಲ.

ಸ್ಟೋರೇಜ್‌: MTag 353 ನಲ್ಲಿ 150MB ಆಂತರಿಕ ಸ್ಟೋರೇಜ್‌ ನೊಂದಿಗೆ, 256MB RAM ಹಾಗೂ 32GB ವರೆಗು ಮೆಮೊರಿ ವಿಸ್ತರಿಸಬಹುದಾಗಿದೆ.

ಕನೆಕ್ಟಿವಿಟಿ: ಈ ವಿಚಾರದಲ್ಲಿ MTag 353 ನಲ್ಲಿ WiFi 802.11 b/g/n, ಬ್ಲೂಟೂತ್‌, ಮೊಬೈಲ್‌ ಹಾಟ್‌ ಸ್ಪಾಟ್‌ ಹಾಗು A-GPS ಹೊಂದಿದೆ.

ಬ್ಯಾಟರಿ: 1,500 mAh Li-ion ಬ್ಯಾಟರಿ ಇದ್ದು 4 ಗಂಟೆಗಳ ಟಾಕ್‌ ಟೈಮ್‌ ಹಾಗೂ 150 ಸ್ಟ್ಯಾಂಡ್‌ ಬೈ ನೀಡುತ್ತದೆ.

ಇತರೆ ಫೀಚರ್ಸ್‌ಗಳು

MTag 353 iನಲ್ಲಿ MTS TV ಅಪ್ಲಿಕೇಷನ್‌ ಹೋದಿದ್ದು 100 ಲೈವ್‌ TV ಹಾಗೂ ವಿಡಿಯೋ ಆನ್‌ ಡಿಮಾಂಡ್‌ ಚಾನಲ್‌ಗಳಿವೆ.

ಡೇಟಾ ಪ್ಲಾನ್‌

MTS MTag 353 ಸ್ಮಾರ್ಟ್‌ ಫೋನ್ ತಿಂಗಳಿಗೆ MTS ನ 512MB ಡೇಟಾ ಹೊಂದಿದ್ದು, 3 ತಿಂಗಳುಗಳ ವರೆಗೆ 500 ನಿಮಿಷಗಳ ಲೋಕಲ್‌ + STD ಹಾಗೂ 6 ತಿಂಗಳವರೆಗೆ 1 ಪೈಸೆ/2 ಸೆಕೆಂಡಿಗೆ ಲೋಕಲ್‌ + STD ಕರೆ ಸೌಲಭ್ಯ ಹೊಂದಿದೆ.

ಬೆಲೆ ಹಾಗೂ ಲಭ್ಯತೆ

MTS MTag 353 ಸ್ಮಾರ್ಟ್‌ಫೋನ್‌ ರೂ. 5,999 ರ ದರದಲ್ಲಿ ಭಾರತದ ಎಲ್ಲಾ ಆನ್‌ಲೈನ್‌ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ.

Read In English...

ಡ್ಯುಯೆಲ್‌ ಬ್ಯಾಟರಿಯ ಐಬಾಲ್‌ ಆಂಡಿ 4.3j ಬಿಡುಗಡೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X