Subscribe to Gizbot

ಹೊಸ ಆಪಲ್ ಐಫೋನ್ 6 ವಿಶೇಷತೆ ಏನು

Written By:

ಗೂಗಲ್‌ನ ತಾಂತ್ರಿಕ ಪುಟದಲ್ಲಿ ಯಾವಾಗಲೂ ತನ್ನ ಹೆಸರನ್ನು ಮುದ್ರಿಸುತ್ತಿರುವ ಕಂಪೆನಿಯಾಗಿದೆ ಆಪಲ್. ಈ ಕಂಪೆನಿ ಹೊಸದಾಗಿ ಬಹುನಿರೀಕ್ಷಿತ ಆಪಲ್ ಐಫೋನ್ 6 ಮಾರುಕಟ್ಟೆಗೆ ತರಲಿದ್ದು ಇದರ ಬಗ್ಗೆ ಕೆಲವೊಂದು ಮಾಹಿತಿಗಳು ಲಭ್ಯವಾಗಿವೆ.

ಇದರ ಬ್ರ್ಯಾಂಡ್ ಚಿತ್ರ ಈಗಾಗಲೇ ಬಿಡುಡೆಯಾಗಿದ್ದು ಅದರ ಪ್ರಕಾರ, ಮುಂಬರಲಿರುವ ಆಪಲ್ ಐಫೋನ್ 6 ಕರ್ವ್ ಮಾದರಿಯ ಗ್ಲಾಸ್ ಸ್ಕ್ರೀನ್ ಅನ್ನು ಹೊಂದಲಿದೆಯಂತೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದು ಬರಿಯ ಗಾಳಿಸುದ್ದಿಯಾಗಿದೆ ಇದು ಸರಿಯಾಗಿ ಮಾರುಕಟ್ಟೆಗೆ ಕಾಲಿಟ್ಟ ನಂತರವೇ ಈ ಡಿವೈಸ್ ಹೇಗಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.

ಆಪಲ್ ಐಫೋನ್ 6 ವಿಶೇಷ ಮಾಹಿತಿ ಇದೋ ಇಲ್ಲಿ

ಟೆಕ್ ವೆಬ್‌ಸೈಟ್ 9to5Mac ಡಿವೈಸ್‌ನ ಹೊಸ ಚಿತ್ರವನ್ನು ಪೋಸ್ಟ್ ಮಾಡಿದ್ದು ಎರಡು ಗ್ಲಾಸ್ ಕವರ್ (ಹೊದ್ದಿಕೆಯನ್ನು) ಇತ್ತೀಚಿನ ಆಪಲ್ ಹ್ಯಾಂಡ್‌ಸೆಟ್‌ನಲ್ಲಿ ತೋರಿಸಿದೆ. ಇದು ಕಪ್ಪು ಮತ್ತು ಬಿಳಿ ಬಣ್ಣದಲ್ಲಿದೆ.

ಈ ಡಿವೈಸ್‌ನಲ್ಲಿ ಹೆಚ್ಚು ಮನಸೆಳೆಯುವ ಅಂಶವೆಂದರೆ ಇದರ ಕರ್ವ್ಡ್ ಮೂಲೆಗಳಾಗಿದೆ. ಇದು 4.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಗಾತ್ರದಲ್ಲಿ ದೊಡ್ಡದಾಗಿದೆ ಮತ್ತು ವೃತ್ತಾಕಾರದಲ್ಲಿದೆ.

ಇಯರ್ ಸ್ಪೀಕರ್‌ನ ಎಡ ಭಾಗದಲ್ಲಿ ಹೊಸ ಹೋಲ್ ಇದ್ದು ಇದೊಂದು ಬದಲಾವಣೆಯಾಗಿದೆ ಎಂದು ಹೊಸ ವರದಿ ಪ್ರಕಟಪಡಿಸಿದೆ.

ಆದರೆ ಈ ಹೋಲ್ ಅನ್ನು ಫೋನ್‌ನಲ್ಲಿ ಏಕೆ ಇರಿಸಲಾಗಿದೆ ಎಂಬುದು ಮಾತ್ರ ಇದುವರೆಗೂ ತಿಳಿದುಬಂದಿಲ್ಲ. ಒಂದಾ ಫೇಸ್‌ಟೈಮ್ ಫ್ರಂಟ್ ಕ್ಯಾಮೆರಾವನ್ನು ಇರಿಸಲು ಇಲ್ಲವೇ ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಇರಿಸಲು ಆಗಿರಬಹುದು ಎಂಬುದು ವದಂತಿಯಿಂದ ತಿಳಿದು ಬಂದ ಮಾಹಿತಿಯಾಗಿದೆ.

ನಾವು ಮೊದಲು ತಿಳಿಸದಂತೆ ಈ ಎಲ್ಲಾ ಮಾಹಿತಿಗಳನ್ನು ಕಂಪೆನಿ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಕಂಪೆನಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವವರೆಗೆ ವದಂತಿಗಳ ಮಾಹಿತಿಗಳನ್ನು ನಿಜವೆಂದು ನಂಬಲು ಸಾಧ್ಯವಾಗುವುದಿಲ್ಲ. ಭವಿಷ್ಯದಲ್ಲಿ ನಿಮಗೆ ಬೇಕಾಗಿರುವ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಗಿಜ್‌ಬಾಟ್‌ಗೆ ಭೇಟಿ ಕೊಡುತ್ತಿರಿ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot