ನಂಬಿದರೆ ನಂಬಿ ಬಿಟ್ಟರೆ ಬಿಡಿ 20 ವರ್ಷ ಬಾಳಲಿರುವ ಬ್ಯಾಟರಿ ಇದು
ನಿಮ್ಮ ಫೋನ್‌ಗೆ ಚಾರ್ಜ್ ಮಾಡುವುದು ಹೆಚ್ಚು ಸಮಯವನ್ನು ತೆಗೆದುಕೊಳ್ಳುವಂತಹ ಕ್ರಿಯೆಯಾಗಿದೆ. ಆದರೆ ಕೆಲವೇ ನಿಮಿಷಗಳಲ್ಲಿ ಕೂಡ ಈ ಚಮತ್ಕಾರವನ್ನು ಮಾಡಬಹುದು ಎಂಬುದು ನಿಮಗೆ ಗೊತ್ತೇ?
ಸಿಂಗಾಪೂರದಲ್ಲಿರುವ ನಾನ್‌ಯಂಗ್ ಟೆಕ್ನೋಲಜಿಯ ವಿಜ್ಞಾನಿಗಳು ಲಿಥಿಯಮ್ ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದ್ದು ಸೊನ್ನೆಯಲ್ಲಿರುವ ನಿಮ್ಮ ಬ್ಯಾಟರಿ ಸ್ಥಿತಿಯನ್ನು 70% ಕ್ಕೆ ಕೇವಲ ಎರಡು ನಿಮಿಷದಲ್ಲಿ ತಂದು ನಿಲ್ಲಿಸುತ್ತದೆ ಮತ್ತು ಇದರ ಬಾಳಿಕೆ 20 ವರ್ಷಗಳಾಗಿದೆ. ಲಿಥಿಯಮ್ ಬ್ಯಾಟರಿಗಳನ್ನು ಸಾಮಾನ್ಯವಾಗಿ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.

ಇದನ್ನೂ ಓದಿ: ಫೋಟೋಶಾಪ್ ಅವಾಂತರ ಉಂಟುಮಾಡಿದೆ ಅನಾಹುತ
ಇನ್ನು ಬ್ಯಾಟರಿ ಬಾಳಿಕೆ ಕೂಡ ದೀರ್ಘವಾಗಿದ್ದು ನಾವು ಈಗ ಬಳಸುವ ಬ್ಯಾಟರಿ ಬಾಳಿಕೆಗಿಂತಲೂ ಹತ್ತು ಪ್ರತಿಶತ ದೀರ್ಘ ಬಾಳಿಕೆಯನ್ನು ಈ ಹೊಸ ಬ್ಯಾಟರಿ ನೀಡಲಿದೆ. ಇನ್ನು ಇದಕ್ಕೆ ಪ್ರತಿಯಾಗಿ ಆಪಲ್‌ನ ಹೇಳಿಕೆಯನ್ನು ನಾವು ಗಮನಿಸಿದಾಗ ಇದರ ಫೋನ್ ಬ್ಯಾಟರಿಗಳು 80% ದಷ್ಟು ಬಾಟರಿ ಸೇವೆಯನ್ನು ನೀಡಲಿದ್ದು 500 ಸಂಪೂರ್ಣ ಚಾರ್ಜ್ ಸರಣಿಯನ್ನು ನೀಡಲಿದೆ ಎಂಬುದಾಗಿದೆ. ನೀವು ಬ್ಯಾಟರಿಯನ್ನು ಹೆಚ್ಚು ಚಾರ್ಜ್ ಮಾಡಿದಂತೆ, ತನ್ನ ಗುಣಮಟ್ಟವನ್ನು ಬ್ಯಾಟರಿ ಕಳೆದುಕೊಳ್ಳುತ್ತದೆ ಎಂದಾಯಿತು.
ಈ ಸಂಶೋಧಿತ ಬ್ಯಾಟರಿಯು ಗ್ರಾಫೈಟ್‌ನೊಂದಿಗೆ ಮಾತ್ರವೇ ಕಾರ್ಯನಿರ್ವಹಿಸಲಿದ್ದು ಮಣ್ಣಿನಲ್ಲಿ ಕಾಣಸಿಗುವ ಟೈಟಾನಿಯಮ್ ಡಿಯೋಕ್ಸೈಡ್ ಸಾಮಾಗ್ರಿಗೆ ಇದನ್ನು ಬದಲಾಯಿಸಲಾಗಿದೆ ಇದು ಹೆಚ್ಚು ಸುರಕ್ಷಿತ ವಿಧಾನವಾಗಿದೆ. ಈ ಟೈಟಾನಿಯಮ್ ಡಿಯೋಕ್ಸೈಡ್ ಮಾನವನ ತಲೆಕೂದಲಿಗಿಂತ 1,000 ಪಟ್ಟು ದಪ್ಪನಾಗಿದ್ದು ಹೊಸ ಬ್ಯಾಟರಿಯೊಳಗೆ ರಾಸಾಯನಿಕ ಪ್ರಕ್ರಿಯೆ ನಡೆದು, ಇದು ಹೆಚ್ಚು ವೇಗವಾದ ಚಾರ್ಜ್‌ಗೆ ಅನುವು ಮಾಡಿಕೊಡುತ್ತದೆ.
ಇನ್ನು ಸಂಶೋಧಕರು ಹೇಳುವಂತೆ ಇಲೆಕ್ಟ್ರಿಕ್ ಕಾರ್ ಇಂಡಸ್ಟ್ರಿಯಲ್ಲಿ ಈ ಬ್ಯಾಟರಿಯ ಬಳಕೆ ಅತಿ ಹೆಚ್ಚಾಗಿದ್ದು ಕಾರಿನ ಬ್ಯಾಟರಿ ಬಾಳಿಕೆಗೆ ಇದು ಮಹತ್ವಕಾರಿಯಾಗಲಿದೆ.


Click it and Unblock the Notifications








