ಆಂಡ್ರಾಯ್ಡ್ ಗೆ ಬಂದಿದೆ ಅತ್ಯಂತ ಅಪಾಯಕಾರಿ ವೈರಸ್..! ಈ ಬಗ್ಗೆ ಗೂಗಲ್ ಏನೇಳುತ್ತೆ..?
ಗೂಗಲ್ ತನ್ನ ಇತ್ತೀಚಿನ ಭದ್ರತಾ ಬುಲೆಟಿನ್ ಬಿಡುಗಡೆ ಮಾಡಿದೆ. ಇದರಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅನೇಕ ಕೆಟ್ಟ ಸುದ್ದಿಗಳಿದ್ದು, ಮೂರು ಭದ್ರತಾ ನ್ಯೂನತೆಗಳನ್ನು ಗೂಗಲ್ ಹೆಸರಿಸಿದೆ, ಅವುಗಳಲ್ಲಿ ಒಂದನ್ನು ಗೂಗಲ್ ಅತ್ಯಂತ ತೀವ್ರ ಎಂದು ಕರೆದಿದ್ದು, ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಶಾಶ್ವತವಾಗಿ ಅನುಪಯುಕ್ತ ಮಾಡಬಹುದು. ಈ ಅಪಾಯಕಾರಿ ನ್ಯೂನತೆಯ ಬಗ್ಗೆ ಮುಂದೆ ನೋಡಿ.

ಸೆಕ್ಯುರಿಟಿ ಬುಲೆಟಿನ್ ಬಹಿರಂಗ
ಗೂಗಲ್‌ನ ಡಿಸೆಂಬರ್ 2019 ಆಂಡ್ರಾಯ್ಡ್ ಸೆಕ್ಯುರಿಟಿ ಬುಲೆಟಿಟ್‌ನಲ್ಲಿ ಬೆದರಿಕೆಯನ್ನು ಬಹಿರಂಗ ಮಾಡಲಾಗಿದೆ.
3 ದೋಷ, 1 ಅತ್ಯಂತ ತೀವ್ರ
ಗೂಗಲ್‌ನ ಭದ್ರತಾ ಬುಲೆಟಿನ್ ಪ್ರಕಾರ, ಮೂರು ದೋಷಗಳು ಕಂಡುಬಂದಿವೆ. ಇವುಗಳಲ್ಲಿ ಎರಡನ್ನು ಕ್ರಿಟಿಕಲ್ ಎಂದು ರೇಟ್ ಮಾಡಲಾಗಿದ್ದು, ಮೂರನೆಯ ದೋಷ ಸಿವಿಇ -2019-2232 ವನ್ನು ಅತ್ಯಂತ ತೀವ್ರ ಎನ್ನಲಾಗಿದದೆ.
ಹ್ಯಾಂಡಲ್ ರನ್ ಆಫ್ ಟೆಕ್ಸ್ಟ್‌ಲೈನ್.ಜಾವಾ
ಅಧಿಕೃತ ಎನ್ಐಎಸ್‌ಟಿ ರಾಷ್ಟ್ರೀಯ ದುರ್ಬಲತೆ ಡೇಟಾಬೇಸ್ ಪ್ರಕಾರ, "ಹ್ಯಾಂಡಲ್ ರನ್ ಆಫ್ ಟೆಕ್ಸ್ಟ್‌ಲೈನ್.ಜಾವಾದಲ್ಲಿನ ದುರ್ಬಲತೆಯು ಸಂಭವನೀಯ ಅಪ್ಲಿಕೇಶನ್‌ನ್ನು ಕ್ರ್ಯಾಶ್ ಮಾಡಬಹುದಾಗಿದೆ. ಈ ದಾಳಿಯು ನಿಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಶಾಶ್ವತವಾಗಿ ಸೇವೆಗಳನ್ನು ನಿರಾಕರಿಸಬಹುದು.

ದಾಳಿಗೆ ಕಾರಣ ಏನು..?
ದುರುದ್ದೇಶದಿಂದ ರಚಿಸಲಾದ ಸಂದೇಶ ನಿಮ್ಮ ಆಂಡ್ರಾಯ್ಡ್ ಸಾಧನಕ್ಕೆ ಸೇವೆಗಳನ್ನು ನಿರಾಕರಿಸಬಹುದು.
ಪರಿಹಾರ ಏನು..?
ಆಂಡ್ರಾಯ್ಡ್‌ನ ಡಿಸೆಂಬರ್ ಭದ್ರತಾ ಅಪ್‌ಡೇಟ್‌ನ್ನು ಇನ್‌ಸ್ಟಾಲ್ ಮಾಡಬೇಕಿದ್ದು, ಅದರಲ್ಲಿ ಒಂದಿಷ್ಟು ಸಮಸ್ಯೆ ಪರಿಹಾರವಾಗುತ್ತದೆ.
ಏನು ಸಮಸ್ಯೆ..?
ದೊಡ್ಡ ಸಮಸ್ಯೆ ಎಂದರೆ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಸಮಯಕ್ಕೆ ಸರಿಯಾಗಿ ಭದ್ರತಾ ಅಪ್‌ಡೇಟ್‌ಗಳನ್ನು ಪಡೆಯುವುದಿಲ್ಲ. ಅನೇಕ ಹಳೆಯ ಸ್ಮಾರ್ಟ್‌ಫೋನ್‌ಗಳು ಭದ್ರತಾ ಪ್ಯಾಚ್‌ಗಳನ್ನೇ ಸ್ವೀಕರಿಸುವುದಿಲ್ಲ. ಹಳೆಯ ಆಂಡ್ರಾಯ್ಡ್ ಸಾಧನಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬಳಕೆದಾರರು ಮತ್ತು ಗೊತ್ತಿರದ ಬ್ರ್ಯಾಂಡ್ ಹೊಂದಿರುವ ಅನೇಕರು ಪ್ಯಾಚ್ ಅಪ್‌ಡೇಟ್ ಪಡೆಯದಿರಬಹುದು.

ಸಂವನಹ ಅಗತ್ಯವಿಲ್ಲ
ಆಂಡ್ರಾಯ್ಡ್ ಸೆಕ್ಯುರಿಟಿ ಬುಲೆಟಿನ್ ಪ್ರಕಾರ, ಭದ್ರತಾ ನ್ಯೂನತೆ ಪ್ರವೇಶಕ್ಕೆ ಬಳಕೆದಾರರ ಸಂವಹನ ಅಗತ್ಯವಿಲ್ಲ ಎಂದಿದೆ.
ಯಾವ ಸಾಧನಗಳ ಮೇಲೆ ಪರಿಣಾಮ..?
ಭದ್ರತಾ ನ್ಯೂನತೆಯು ಆಂಡ್ರಾಯ್ಡ್ 8.0, ಆಂಡ್ರಾಯ್ಡ್ 8.1, ಆಂಡ್ರಾಯ್ಡ್ 9 ಮತ್ತು ಆಂಡ್ರಾಯ್ಡ್ 10 ಸಾಧನಗಳ ಮೇಲೆ ಪರಿಣಾಮ ಬೀರುತ್ತದೆ.
ಬಿಡುಗಡೆಯಾಗಿರುವ ಪ್ಯಾಚ್
ಗೂಗಲ್ ಬುಲೆಟಿನ್‌ನಲ್ಲಿನ ಒಳ್ಳೆಯ ಸುದ್ದಿ ಏನೆಂದರೆ, ಅಪ್‌ಡೇಟ್ ಪ್ಯಾಚ್ ಈಗಾಗಲೇ ಬಿಡುಗಡೆಯಾಗಿದೆ. ಆದರೆ, ಅದನ್ನು ಇನ್‌ಸ್ಟಾಲ್ ಮಾಡಬೇಕಾದ ಅಗತ್ಯವಿದೆ. ಸಿವಿಇ -2019-2232 ಮತ್ತು ಇತರ ಭದ್ರತಾ ದೋಷಗಳ ಭದ್ರತಾ ಪ್ಯಾಚ್‌ನ್ನು ಈಗಾಗಲೇ ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರಾಜೆಕ್ಟ್ (ಎಒಎಸ್‌ಪಿ) ಗ್ರಂಥಾಲಯಕ್ಕೆ ಬಿಡುಗಡೆ ಮಾಡಲಾಗಿದೆ.

ಕಂಪನಿ ಆಧಾರದಲ್ಲಿ ಅಪ್‌ಡೇಟ್
ಗೂಗಲ್ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ ಕೆಟ್ಟ ಸುದ್ದಿ ಏನೆಂದರೆ, ನೀವು ಯಾವಾಗ ಅಪ್‌ಡೇಟ್ ಪಡೆಯುತ್ತೀರಿ ಎಂಬುದು ನಿಮ್ಮ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯನ್ನು ಅವಲಂಭಿಸಿರುತ್ತದೆ.
ಗೂಗಲ್ ಸಾಧನಗಳಿಗೆ ಮೊದಲು ಅಪ್‌ಡೇಟ್
ಗೂಗಲ್ ಮಾಸಿಕ ಬುಲೆಟಿನ್ ಬಿಡುಗಡೆಯಾದ ದಿನವೇ ಒಟಿಎ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಿದೆ.
ಭದ್ರತಾ ಪ್ಯಾಚ್ ಲಭ್ಯತೆಯ ಪರಿಶೀಲನೆ
ನೀವು ಒಟಿಎ ಅಪ್‌ಡೇಟ್ ಬಗ್ಗೆ ಹೆಚ್ಚಿನ ನೊಟಿಫಿಕೇಷನ್ ಪಡೆಯುತ್ತೀರಿ. ಒಂದು ವೇಳೆ, ನಿಮಗೆಎ ಅಪ್‌ಡೇಟ್ ಸಿಕ್ಕಿಲ್ಲ ಎಂದರೆ, ನಿಮ್ಮ ಭದ್ರತಾ ಪ್ಯಾಚ್ ಮಟ್ಟ ಪರಿಶೀಲಿಸಿ. ಇದಕ್ಕಾಗಿ ಸೆಟ್ಟಿಂಗ್ಸ್‌ಗೆ ತೆರಳಿ, ನಂತರ ಅಬೌಟ್ ಫೋನ್ ಆಯ್ಕೆ ಮಾಡಿಕೊಂಡು, ಅಲ್ಲಿ ಆಂಡ್ರಾಯ್ಡ್ ಭದ್ರತಾ ಪ್ಯಾಚ್ ಮಟ್ಟವನ್ನು ಪರಿಶೀಲಿಸಿ.

ಆಂಡ್ರಾಯ್ಡ್ 9ನಲ್ಲಿ ಹೇಗೆ...?
ಆಂಡ್ರಾಯ್ಡ್ 9ನಲ್ಲಿ ಅಪ್‌ಡೇಟ್ ಪಡೆಯಲು ಸೆಟ್ಟಿಂಗ್ಸ್ > ಸಿಸ್ಟಮ್ > ಅಡ್ವಾನ್ಸಡ್ > ಸಿಸ್ಟಮ್ ಅಪ್‌ಡೇಟ್ಸ್‌ಗೆ ತೆರಳಿ. ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಕರು ಗೂಗಲ್ ಜೊತೆಗೆ ತಮ್ಮದೇ ಆದ ಅಪ್‌ಡೇಟ್ ಸೇರಿಸುತ್ತಾರೆ ಎಂಬುದನ್ನು ಗಮನಿಸಿ.


Click it and Unblock the Notifications








