Subscribe to Gizbot

ಗೂಗಲ್ ಕನ್ನಡ ಭಾಷಾಂತರ ಆಂಡ್ರಾಯ್ಡ್ App

Posted By: Varun
ಗೂಗಲ್ ಕನ್ನಡ ಭಾಷಾಂತರ ಆಂಡ್ರಾಯ್ಡ್ App

ವಿಶ್ವದ ಇಂಟರ್ನೆಟ್ ದೈತ್ಯ ಅಮೆರಿಕಾದ ಗೂಗಲ್ ಶುರುವಾದಾಗಿನಿಂದ ಹಲವಾರು ವಿಭಿನ್ನ ಪ್ರಯೋಗಗಳನ್ನು ಮಾಡುತ್ತಾ ಇಂಟರ್ನೆಟ್ ಬಳಕೆದಾರರಿಗೆ ಹೊಸ ಹೊಸ ಫೀಚರುಗಳು ಇರುವ ಟೂಲ್ ಗಳನ್ನು ಕೊಡುತ್ತಾ ಬಂದಿದೆ. ತನ್ನ ಗೂಗಲ್ ಲ್ಯಾಬ್ಸ್ ನಲ್ಲಿ ಪ್ರಯೋಗಗಳನ್ನು ಕೈಗೊಂಡು ಹೊಸದೆನಿಸುವ ಫೀಚರುಗಳನ್ನು ಕೊಡುವುದರಲ್ಲಿ ಗೂಗಲ್ ಫೇಮಸ್ ಆಗಿದ್ದು,ಯಾವುದೇ ಭಾಷೆಯ ಪದಗಳನ್ನು ಭಾಷಾಂತರಿಸಲು PC ಗಳಲ್ಲಿ ಬಳಸಬಹುದಾದ ಗೂಗಲ್ ಟ್ರಾನ್ಸ್ಲೇಟ್ಫೇಮಸ್ ಆಗಿರುವುದು ನಿಮಗೆಲ್ಲಾ ಗೊತ್ತೇ ಇದೆ.

ಈಗ ಇದೇ ರೀತಿಯ ಸೌಲಭ್ಯವನ್ನು ತನ್ನ ತಂತ್ರಾಂಶವಾದ ಆಂಡ್ರಾಯ್ಡ್ ಇರುವ ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನುಗಳಿಗೆ ಹೊರತಂದಿದ್ದು, ಸುಮಾರು 64 ಭಾಷೆಗಳ ಶಬ್ದಗಳನ್ನು ಭಾಷಾಂತರ ಮಾಡುವ ಸಾಮರ್ಥ್ಯ ಹೊಂದಿದೆ. ಅದೂ ಅಲ್ಲದೆ 40 ವಿಭಿನ್ನ ಭಾಷೆಗಳನ್ನು ಮಾತಿನ ಮೂಲಕ ಅರ್ಥ ಮಾಡಿಕೊಂಡು ಅದನ್ನು ನಿಮಗೆ ಬೇಕಾದ ಭಾಷೆಯಲ್ಲಿ ತರ್ಜುಮೆ ಮಾಡಿಕೊಡುವ ವಿಶೇಷತೆ ಈ ಆಪ್ ನಲ್ಲಿದೆ. ಉದಾಹರಣೆಗೆ: ನೀವು ಇಂಗ್ಲಿಷ್ ನಲ್ಲಿ "computer " ಎಂದು ಟೈಪ್ ಮಾಡಿದರೆ ಅಥವ ಹೇಳಿದರೆ, ಈ ಆಪ್ ನಿಮಗೆ ಕನ್ನಡಲ್ಲಿ ಅದಕ್ಕೆ ಸಮಾನಾರ್ಥಕ ಪದವಾದ "ಗಣಕಯಂತ್ರ" ಎಂದು ಭಾಷಾಂತರಿಸಿ ಕೊಡುತ್ತದೆ.

ಕನ್ನಡ, ಹಿಂದಿ, ತಮಿಳು, ತೆಲುಗು, ಗುಜರಾತಿ ಸೇರಿದಂತೆ ಪ್ರಮುಖ ವಿದೇಶೀ ಭಾಷೆಗಳಾದ ಆಫ್ರಿಕಾನ್ಸ್ ಅರೇಬಿಕ್, ಚೀನೀ (ಸರಳ), ಚೀನೀ (ಸಾಂಪ್ರದಾಯಿಕ), ಡ್ಯಾನಿಶ್, ಡಚ್, ಇಂಗ್ಲೀಷ್, ಫ್ರೆಂಚ್, ಫಿನ್ನಿಶ್, ಫಿಲಿಪಿನೋ, ಜರ್ಮನ್, ಗ್ರೀಕ್, ಹೀಬ್ರೂ, ಹಂಗೇರಿಯನ್, ಜಪಾನಿ, ಇಟಾಲಿಯನ್, ಇಂಡೋನೇಷ್ಯನ್, ಐರಿಷ್, ಕೊರಿಯನ್, ಲ್ಯಾಟಿನ್, ಮಲಯ, ನಾರ್ವೇಜಿಯನ್, ಪರ್ಷಿಯನ್, ಪೋಲಿಷ್, ಪೋರ್ಚುಗೀಸ್, ರೊಮಾನಿಯನ್, ಸ್ಲೊವೇನಿಯನ್, ರಶಿಯನ್, ಸರ್ಬಿಯನ್, ಸ್ಲೋವಾಕ್, ಸ್ಪಾನಿಷ್, ಸ್ವೀಡಿಷ್, ಥಾಯ್, ಟರ್ಕಿಷ್, ಉಕ್ರೇನ್, ಉರ್ದು ಭಾಷೆಗಳಿಗೆ ಭಾಷಾಂತರ ಮಾಡುತ್ತದೆ.

ಬೇರೆ ರಾಜ್ಯಗಳಿಗೆ ಹೋಗುವ ಅಥವಾ ವಿದೇಶಗಳಿಗೆ ಪ್ರಯಾಣ ಮಾಡುವ ವಿದ್ಯಾರ್ಥಿಗಳಿಗೆ, ಪ್ರವಾಸಿಗಳಿಗೆ ಹಾಗು ವ್ಯಾಪಾರ ಮಾಡಲು ಹೊಗುವವರಿಗೆ ಈ ಆಪ್ ತುಂಬಾ ಅನುಕೂಲಕರವಾಗಿದ್ದು ಈಉಚಿತ ಆಪ್ ಅನ್ನು ಗೂಗಲ್ ಪ್ಲೇ ವೆಬ್ಸೈಟಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot