ಮಾರುಕಟ್ಟೆಗೆ ಮತ್ತೊಂದು ಐಫೋನ್ X ಮಾದರಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್...!
ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ನೋಚ್ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ಗಳನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಮತ್ತೊಂದು ಸ್ಮಾರ್ಟ್ ಫೋನ್ ಕಾಣಿಸಿಕೊಳ್ಳಲಿದ್ದು, ಹಾನರ್ 9X ಸ್ಮಾರ್ಟ್ ಫೋನ್ ಶೀಘ್ರವೇ ಮಾರಾಟವಾಗಲಿದ್ದು, ಜುಲೈ ತಿಂಗಳಿನಲ್ಲಿ ಮಾರುಕಟ್ಟೆಗೆ ಪರಿಚಯವಾಗಲಿರುವ ಈ ಸ್ಮಾರ್ಟ್ ಫೋನ್ ಮಧ್ಯಮ ಬೆಲೆಯಲ್ಲಿ ಮಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಾನರ್ 9X ಸ್ಮಾರ್ಟ್ ಫೋನ್ ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಳ್ಳಲಿದೆ. ಇದಾದ ನಂತರದಲ್ಲಿ ಬೇರೆ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ. ಈ ಸ್ಮಾರ್ಟ್ ಫೊನ್ ರೂ.15000ದ ಆಸುಪಾಸಿನಲ್ಲಿ ಮಾರಾಟವಾಗುವ ಸಾಧ್ಯತೆ ಹೆಚ್ಚಾಗಿದೆ. ಬೇರೆ ಮಾರುಕಟ್ಟೆಯಲ್ಲಿ ಹಾನರ್ 9i ಎಂದು ಕಾಣಿಸಿಕೊಳ್ಳುವ ಈ ಸ್ಮಾರ್ಟ್ ಫೋನ್, ಭಾರತೀಯ ಮಾರುಕಟ್ಟೆಯಲ್ಲಿ ಹಾನರ್ 9X ಹೆಸರಿನಲ್ಲಿ ಮಾರಾಟವಾಗಲಿದೆ.

19:9 ಅನುಪಾತದ ಡಿಸ್ ಪ್ಲೇ
ಹಾನರ್ 9X ಸ್ಮಾರ್ಟ್ ಫೋನಿನಲ್ಲಿ ಹೊಸ ಮಾದರಿಯ 19:9 ಅನುಪಾತದ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಇದು 5.84 ಇಂಚಿನದಾಗಿದೆ. ಇದಲ್ಲದೇ ಇದು FHD+ ಗುಣಮಟ್ಟವನ್ನು ಹೊಂದಿದ್ದು, ಐಫೋನ್ X ಮಾದರಿಯ ನೋಚ್ ಅನ್ನು ಸಹ ಹೊಂದಿದೆ ಎನ್ನಲಾಗಿದೆ. ಇದರಲ್ಲಿ ಉತ್ತಮವಾದ ವಿಡಿಯೋಗಳನ್ನು ನೋಡಬಹುದಾಗಿದೆ.

4GB RAM
ಹಾನರ್ 9X ಸ್ಮಾರ್ಟ್ ಫೋನಿನಲ್ಲಿ ಹಾನರ್ ಅಭಿವೃದ್ಧಿ ಪಡಿಸಿರುವ ಕಿರನ್ 659 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ 4 GB RAM ಅನ್ನು ಸಹ ನೀಡಲಾಗಿದೆ. ದಇದಲ್ಲದೇ 64 GB ಮತ್ತು 128 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ. ಇದಲ್ಲದೇ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಸಹ ಇದರಲ್ಲಿ ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ
ಹಾನರ್ 9X ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನರ್ನು ನೀಡಲಾಗಿದ್ದ, 13 MP + 2 MP ಲೈನ್ಸ್ ಗಳನ್ನು ಅಳವಡಿಸಲಾಗಿದ್ದು, ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯಕವಾಗಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿಯೇ 16 MP ಕ್ಯಾಮೆರಾವನ್ನು ನೀಡಲಾಗಿದೆ.

ಉತ್ತಮ ಬ್ಯಾಟರಿ
ಹಾನರ್ 9X ಸ್ಮಾರ್ಟ್ ಫೋನಿನಲ್ಲಿ 3000mAh ಬ್ಯಾಟರಿಯನ್ನು ನೀಡಲಾಗಿದ್ದು, ಇದೊರೊಂದಿಗೆ ಹಾನರ್ 9X ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, EMUI 8.0ವನ್ನು ಸಹ ನೀಡಲಾಗಿದೆ. ಅಲ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಸಹ ನೀಡಲಾಗಿದೆ.


ಬೆಲೆಗಳು
ಈಗಾಗಲೇ ಮಾರುಕಟ್ಟೆಯಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು ನೋಚ್ ಇರುವ ಹಲವು ಸ್ಮಾರ್ಟ್ ಫೋನ್ ಗಳು ಕಾಣಿಸಿಕೊಂಡಿದ್ದು , ಇವುಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಈ ಸ್ಮಾರ್ಟ್ ಪೋನ್ ಅನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ರೂ. 15000ಕ್ಕೆ ದೊರೆಯಲಿದೆ.


Click it and Unblock the Notifications