Home
ಮೊಬೈಲ್

ನೆಕ್ಸ್ಟ್ ಐಫೋನ್ ಯಾವುದು ಗೊತ್ತಾ..? ಆಪಲ್ ಬಿಟ್ಟುಕೊಟ್ಟ ಮಾಹಿತಿ ಇದು..!

By Srinidhi

ಮಾರುಕಟ್ಟೆಯಲ್ಲಿ ಈಗಾಗಲೇ ಕುತೂಹಲವನ್ನು ಕೆರಳಿಸಿರುವ ಆಪಲ್ ಮುಂದಿನ ಐಫೋನ್ ಕುರಿತ ಸುದ್ದಿಯೊಂದು ಲೀಕ್ ಆಗಿದೆ. ಆಪಲ್ ತನ್ನ ತಪ್ಪಿನಿಂದಾಗಿ ಮುಂದಿನ ಐಫೋನ್ ಹೆಸರು ಸೇರಿದಂತೆ ವಿಶೇಷತೆಗಳ ಕುರಿತ ಮಾಹಿತಿಯನ್ನು ಹೊರ ಹಾಕಿದೆ. ಅಲ್ಲದೇ ಮುಂದಿನ ಐಫೋನ್ ಫೋಟೋವನ್ನು ಲೀಕ್ ಮಾಡಿದೆ. ಇದರಿಂದಾಗಿ ಇಷ್ಟು ದಿನ ಇದ್ದ ಕುತೂಹಲಕ್ಕೆ ಮತ್ತಷ್ಟು ವಿಷಯಗಳನ್ನು ಸೇರಿಸಿದಂತಾಗಿದೆ.

ನೆಕ್ಸ್ಟ್ ಐಫೋನ್ ಯಾವುದು ಗೊತ್ತಾ..? ಆಪಲ್ ಬಿಟ್ಟುಕೊಟ್ಟ ಮಾಹಿತಿ ಇದು..!

ಇಷ್ಟು ದಿನ ಹೊಸ ಐಫೋನ್ ಬಿಡುಗಡೆ ಯಾಗುವವರೆಗೂ ಅದರ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡದೆ ಸಿಕ್ರೆಟ್ ಕಾಪಾಡುತ್ತಿದ್ದ ಆಪಲ್, ಈ ಬಾರಿ ಹೊಸದಾಗಿ ಲಾಂಚ್ ಮಾಡಲಿರುವ ಐಫೋನ್ ಬಗ್ಗೆ ವೆಬ್‌ ಸೈಟಿನಲ್ಲಿ ಮಾಹಿತಿಯನ್ನು ಸೇರಿಸುವ ಸಂದರ್ಭದಲ್ಲಿ ಮೀಸ್ ಆಗಿ ಮಾಹಿತಿಯೂ ಲೀಕ್ ಮಾಡಿದೆ. ಅಲ್ಲದೇ ಇದು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿದೆ.

ನೋಚ್ ಇಲ್ಲದ ಫುಲ್ ಸ್ಕ್ರಿನ್:

ನೋಚ್ ಇಲ್ಲದ ಫುಲ್ ಸ್ಕ್ರಿನ್:

ಈ ಹಿಂದೆ ನೋಚ್ ಡಿಸ್‌ಪ್ಲೇಯನ್ನು ಲಾಂಚ್ ಮಾಡಿದ್ದ ಆಪಲ್ ಈ ಬಾರಿಯ ನೂತನ ಐಫೋನಿನಲ್ಲಿ 6.1 ಇಂಚಿನ ಡಿಸ್‌ಪ್ಲೇಯನ್ನು ನೀಡಿದೆ. ಇದಲ್ಲದೇ ಈ ಬಾರಿ ಫುಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ನೀಡಿದ್ದು, ನೋಚ್ ತೆಗೆದು ಸಂಪೂರ್ಣವಾಗಿ ಸ್ಕ್ರಿನ್ ಮಾತ್ರವೇ ಕಾಣಿಸಿಕೊಳ್ಳುವಂತೆ ಮಾಡಿದೆ. ಇದು ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಡಿಸ್‌ಪ್ಲೇಯನ್ನು ಬಳಕೆಗೆ ಅವಕಾಶ ಮಾಡಿಕೊಡಲಿದೆ.

ಹೊಸ ಐಫೋನ್ ಹೆಸರು:

ಹೊಸ ಐಫೋನ್ ಹೆಸರು:

ಮುಂದಿನ ತಿಂಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿರುವ ಐಫೋನ್‌ಗೆ 'ಐಪೋನ್ XX' ಎಂದು ನಾಮಕರಣವನ್ನು ಮಾಡಲಿದೆ. ಈ ಹಿಂದೆ ಐಪೋನ್ X ಹೆಸರಿನಲ್ಲಿ ಮಾರುಕಟ್ಟೆಗೆ ಬಂದಿದ್ದ ಫೋನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಹಿನ್ನಲೆಯಲ್ಲಿ ಹೊಸ ಐಫೋನ್‌ಗೆ'ಐಪೋನ್ XX' ಎಂದು ಹೆಸರನ್ನು ಇಟ್ಟಿದೆ ಎನ್ನಲಾಗಿದೆ.

$700ಗೆ ಮಾರಾಟ:

$700ಗೆ ಮಾರಾಟ:

ಹೊಸದಾಗಿ ಲಾಂಚ್ ಆಗಲಿರುವ 'ಐಪೋನ್ XX' ಕಡಿಮೆ ಬೆಲೆಗೆ ಮಾರಾಟವಾಗಲಿದೆ ಎನ್ನಲಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಐಫೋನ್ X ದುಬಾರಿ ಬೆಲೆ ಎನ್ನುವ ಕಾರಣಕ್ಕೆ ಸದ್ದು ಮಾಡಿತ್ತು. ಇದನ್ನು ಮೀರಿಸುವಂತೆ ಇರುವ ಹೊಸ ಐಫೋನ್ ಕಡಿಮೆ ಬೆಲೆಯಲ್ಲಿ ಮಾರಾಟವಾಗಲಿದ್ದು, ಮಾರುಕಟ್ಟೆಯಲ್ಲಿ $ 700ಕ್ಕೆ ದೊರೆಯಲಿದ್ದು, ಹೆಚ್ಚಿನ ಬೇಡಿಕೆಗೆ ಪಾತ್ರವಾಗಲಿದೆ.

A12 ಪ್ರೋಸೆಸರ್:

A12 ಪ್ರೋಸೆಸರ್:

ಸದ್ಯ ಮಾರುಕಟ್ಟೆಯಲ್ಲಿ A 11 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಆದರೆ ಮುಂದಿನ ವರ್ಷ ಕಾಣಿಸಿಕೊಳ್ಳುವ ಐಫೋನಿನಲ್ಲಿ A12 ಪ್ರೋಸೆಸರ್ ಅಳವಡಿಸಲು ಆಪಲ್ ಮುಂದಾಗಿದೆ. ಇದರಿಂದಾಗಿ ಹೊಸ ಐಫೋನ್ ಮತ್ತಷ್ಟು ಹೊಸ ಮಾದರಿಯ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಿದೆ. ಇದರಿಂದಾಗಿ ಹೊಸ ಆಯ್ಕೆಗಳು ಟ್ರೆಂಡ್ ಆಗುವ ಸಾಧ್ಯತೆ ಇದೆ. ಆಂಡ್ರಾಯ್ಡ್ ಫೋನ್‌ಗಳು ಅವುಗಳಿಂದ ಕದಿಯುವ ಸಾಧ್ಯತೆ ಇದೆ.

ಜೊತೆಗೆ ಇನ್ನೇರಡು ಫೋನ್:

ಜೊತೆಗೆ ಇನ್ನೇರಡು ಫೋನ್:

ಇದಲ್ಲದೇ A12 ಪ್ರೋಸೆಸರ್ ಹೊಂದಿರುವ 'ಐಪೋನ್ XX' ಜೊತೆಗೆ ಮತ್ತೆ ಇನ್ನೇರಡು ಫೋನ್‌ಗಳು ಲಾಂಚ್ ಆಗಲಿದೆ ಎನ್ನಲಾಗಿದೆ. ಇವು ಸಹ ಮಾರುಕಟ್ಟೆಯಲ್ಲಿ ಕಮಾಲ್ ಮಾಡಲಿದೆ. ಪ್ರತಿ ಬಾರಿಯೂ ಆಪಲ್ ಮೂರು ಫೋನ್‌ಗಳನ್ನು ಲಾಂಚ್ ಮಾಡಲಿದೆ. ಈ ಬಾರಿಯೂ ಅದರಂತೆಯೂ ಮೂರು ಫೋನ್ ಲಾಂಚ್ ಆಗಲಿದೆ.

Best Mobiles in India

English summary
New iPhone xx Specs Revealed By Apple’s Mistake. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+