ಐಫೋನ್‌ನ eSIM ತಂತ್ರಜ್ಞಾನ ಇರುವುದು ಕೇವಲ 10 ದೇಶಗಳಲ್ಲಿ ಮಾತ್ರ..!

|

ಆಪಲ್ ಸಂಸ್ಥೆಯು ಅಂತಿಮವಾಗಿ ಡುಯಲ್ ಸಿಮ್ ನ ಐಫೋನ್ ನ್ನು ಬಿಡುಗಡೆಗೊಳಿಸಿದೆ. 2018 ರ ಐಫೋನ್ ಗಳಾದ ಐಫೋನ್ XS, ಐಫೋನ್ XS ಮ್ಯಾಕ್ಸ್ ಮತ್ತು ಐಫೋನ್ XR ಗಳು ಡುಯಲ್ ಸಿಮ್ ಗೆ ಬೆಂಬಲ ನೀಡುತ್ತದೆ. ಆದರೆ ನಾವು ಈಗ ಬಳಸುತ್ತಿರುವ ರೆಗ್ಯುಲರ್ ಡುಯಲ್ ಸಿಮ್ ನ ರೀತಿಯಲ್ಲಿ ಇದು ಇರುವುದಿಲ್ಲ. ಬದಲಾಗಿ ಐಫೋನ್ ಗಳಲ್ಲಿ ಡುಯಲ್ ಸಿಮ್ ಗಳ ಫ್ಯಾನ್ಸಿ ವರ್ಷನ್ ಬಳಸಬೇಕಾಗುತ್ತದೆ. ಹೌದು ಅದನ್ನು eSIM ಎಂದು ಕರೆಯಲಾಗುತ್ತೆ.

ಇದೊಂದು ವರ್ಚುವಲ್ ಸಿಮ್ ಐಡಿ ಆಗಿದ್ದು ಇದನ್ನು ಟೆಲಿಕಾಂ ಆಪರೇಟರ್ ಗಳನ್ನು ಜನರೇಟ್ ಮಾಡುತ್ತಾರೆ. ಆ ಸಿಮ್ ಐಡಿ ನಿಮ್ಮ ಫೋನಿನ ಅಥವಾ ಸ್ಮಾರ್ಟ್ ವಾಚಿನ ಐಎಂಇಐ ನಂಬರ್ ಜೊತೆ ರಿಜಿಸ್ಟರ್ ಆಗಿರುತ್ತದೆ. ನೀವು ಇದಕ್ಕಾಗಿ ಯಾವುದೇ ಫಿಸಿಕಲ್ ಸಿಮ್ ಕಾರ್ಡ್ ಗಳನ್ನು ಖರೀದಿಸುವ ಅಗತ್ಯವಿರುವುದಿಲ್ಲ.

ಐಫೋನ್‌ನ eSIM ತಂತ್ರಜ್ಞಾನ ಇರುವುದು ಕೇವಲ 10 ದೇಶಗಳಲ್ಲಿ ಮಾತ್ರ..!

ಆದರೆ ಒಂದು ಸಮಸ್ಯೆ ಇದೆ. ಇದು ಭಾರತದಾದ್ಯಂತ ಸರಿಯಾಗಿಯೇ ಕೆಲಸ ಮಾಡುತ್ತದೆ. ಆದರೆ ಒಂದು ವೇಳೆ ನೀವು ಭಾರತ ಬಿಟ್ಟು ಹೊರದೇಶಕ್ಕೆ ಹೋದಾಗ eSIM ಬೆಂಬಲಿತ ಐಫೋನ್ ಕೆಲಸವನ್ನು ಸರಿಯಾಗಿ ಮಾಡದೇ ಇರುವ ಸಾಧ್ಯತೆ ಇದೆ. ಸದ್ಯಕ್ಕೆ ವಿಶ್ವದಾದ್ಯಂತ 10 ದೇಶಗಳು ಇದಕ್ಕೆ ಬೆಂಬಲ ನೀಡುತ್ತದೆ.ಸದ್ಯಕ್ಕೆ ಆಪಲ್ ಈ 10 ದೇಶಗಳಲ್ಲಿ eSIM ಗೆ ಬೆಂಬಲವನ್ನು ನೀಡುತ್ತದೆ. ಆ ಪಟ್ಟಿ ಇಲ್ಲಿದೆ ನೋಡಿ.

ಆಸ್ಟ್ರಿಯಾ

ಆಸ್ಟ್ರಿಯಾ

ಆಸ್ಟ್ರಿಯಾದಲ್ಲಿ, ಆಪಲ್ eSIM ಕನೆಕ್ಟಿವಿಟಿಯನ್ನು ಹೊಸ ಐಫೋನ್ ಗಳಾದ XS, XS Max ಮತ್ತು XR ಗಳನ್ನು ಬೆಂಬಲಿಸುತ್ತದೆ. ಆದರೆ T-Mobile ಚಂದಾದಾರರಿಗೆ ಮಾತ್ರ.

ಕೆನಡಾ

ಕೆನಡಾ

ಕೆನಡಾದಲ್ಲಿ ಆಪಲ್ eSIM ಕನೆಕ್ಟಿವಿಟಿಯನ್ನು ಹೊಸ ಐಫೋನ್ ಗಳಾದ XS, XS Max ಮತ್ತು XR ಗಳಲ್ಲಿ ಬೆಂಬಲಿಸುತ್ತದೆ. ಆದರೆ Bell ಚಂದಾದಾರರಿಗೆ ಮಾತ್ರ.

ಕ್ರೋಷಿಯಾ

ಕ್ರೋಷಿಯಾ

ಕ್ರೋಷಿಯಾದಲ್ಲಿ ಆಪಲ್ eSIM ಕನೆಕ್ಟಿವಿಟಿಯನ್ನು ಹೊಸ ಐಫೋನ್ ಗಳಾದ XS, XS Max ಮತ್ತು XR ಬೆಂಬಲಿಸುತ್ತದೆ ಆದರೆ Hrvatski ಟೆಲಿಕಾಂ ಚಂದಾದಾರರಿಗೆ ಮಾತ್ರ (Telekom).

ಜೆಕ್ ರಿಪಬ್ಲಿಕ್

ಜೆಕ್ ರಿಪಬ್ಲಿಕ್

ಜೆಕ್ ರಿಪಬ್ಲಿಕ್ ನಲ್ಲಿ ಆಪಲ್ eSIM ಕನೆಕ್ಟಿಟಿವಿಯನ್ನು ಹೊಸ ಐಫೋನ್ ಗಳಾದ XS, XS Max ಮತ್ತು XR ಬೆಂಬಲಿಸುತ್ತದೆ.ಆದರೆ T-Mobile ಚಂದಾದಾರರಿಗೆ ಮಾತ್ರ .

ಜರ್ಮನಿ

ಜರ್ಮನಿ

ಜರ್ಮನಿಯಲ್ಲಿ ಆಪಲ್ eSIM ಕನೆಕ್ಟಿಟಿವಿಯನ್ನು ಹೊಸ ಐಫೋನ್ ಗಳಾದ XS, XS Max ಮತ್ತು XR ಬೆಂಬಲಿಸುತ್ತದೆ. ಆದರೆ Telekom ಮತ್ತು ವಡಾಫೋನ್ ಚಂದಾದಾರರಿಗೆ ಮಾತ್ರ.

ಹಂಗೇರಿ

ಹಂಗೇರಿ

ಹಂಗೇರಿಯಲ್ಲಿ ಆಪಲ್ eSIM ಕನೆಕ್ಟಿಟಿವಿಯನ್ನು ಹೊಸ ಐಫೋನ್ ಗಳಾದ XS, XS Max ಮತ್ತು XR ಬೆಂಬಲಿಸುತ್ತದೆ ಆದರೆ Magyar ಟೆಲಿಕಾಂ ಚಂದಾದಾರರಿಗೆ ಮಾತ್ರ.

ಭಾರತ

ಭಾರತ

ಭಾರತದಲ್ಲಿ ಆಪಲ್ eSIM ಕನೆಕ್ಟಿಟಿವಿಯನ್ನು ಹೊಸ ಐಫೋನ್ ಗಳಾದ XS, XS Max ಮತ್ತು XR ಬೆಂಬಲಿಸುತ್ತದೆ. ಆದರೆ ಏರ್ ಟೆಲ್ ಪೋಸ್ಟ್ ಪೇಯ್ಡ್ ಮತ್ತು ರಿಲಯನ್ಸ್ ಜಿಯೋ ಚಂದಾದಾರರಿಗೆ ಮಾತ್ರ.

ಸ್ಪೇನ್

ಸ್ಪೇನ್

ಸ್ಪೇನ್ ನಲ್ಲಿ ಆಪಲ್ eSIM ಕನೆಕ್ಟಿಟಿವಿಯನ್ನು ಹೊಸ ಐಫೋನ್ ಗಳಾದ XS, XS Max ಮತ್ತು XR ಬೆಂಬಲಿಸುತ್ತದೆ. ಆದರೆ ವಡಾಫೋನ್ ಸ್ಪೈನ್ ಚಂದಾದಾರಿಗೆ ಮಾತ್ರ.

ಯುನೈಟೆಡ್ ಕಿಂಗ್ ಡಮ್

ಯುನೈಟೆಡ್ ಕಿಂಗ್ ಡಮ್

ಯುನೈಟೆಡ್ ಕಿಂಗ್ ಡಮ್ ನಲ್ಲಿ ಆಪಲ್ eSIM ಕನೆಕ್ಟಿಟಿವಿಯನ್ನು ಹೊಸ ಐಫೋನ್ ಗಳಾದ XS, XS Max ಮತ್ತು XR ಬೆಂಬಲಿಸುತ್ತದೆ. ಆದರೆ EE ಚಂದಾದಾರರಿಗೆ ಮಾತ್ರ.

ಯುನೈಟೆಡ್ ಸ್ಟೇಟ್ಸ್

ಯುನೈಟೆಡ್ ಸ್ಟೇಟ್ಸ್

ಯುನೈಟೆಡ್ ಸ್ಟೈಟ್ಸ್ ನಲ್ಲಿ ಆಪಲ್ eSIM ಕನೆಕ್ಟಿಟಿವಿಯನ್ನು ಹೊಸ ಐಫೋನ್ ಗಳಾದ XS, XS Max ಮತ್ತು XR ಬೆಂಬಲಿಸುತ್ತದೆ ಆದರೆ AT&T, T-ಮೊಬೈಲ್ ಯುಎಸ್ಎ, Verizon ವಯರ್ ಲೆಸ್ ಚಂದಾದಾರರಿಗೆ ಮಾತ್ರ.

Best Mobiles in India

English summary
New iPhones' eSIM is only supported in these 10 countries. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X