Subscribe to Gizbot

ಹೊಸ ಮೋಟೋ ಎಕ್ಸ್ ಪ್ರಥಮ ನೋಟ ವೀಡಿಯೊ ವಿಮರ್ಶೆ

Written By:

ಮೂಲ ಮೋಟೋರೋಲಾ ಮೋಟೋ ಎಕ್ಸ್, ಅನ್ನು ಕಳೆದ ವರ್ಷವಷ್ಟೇ ಪ್ರದರ್ಶಿಸಿತ್ತು. ಮೋಟೋರೋಲಾ ಹೊಸ ಮೋಟೋ ಎಕ್ಸ್ ಅನ್ನು ಬಿಡುಗಡೆ ಮಾಡಿದ್ದು, ಮೋಟೋ ಎಕ್ಸ್‌ನ ಯಶಸ್ವಿ ಆವೃತ್ತಿಯಾಗಿ ಈಗ ಹೊರಬಂದಿದೆ. ಹೊಸ ಮೋಟೋ ಎಕ್ಸ್ ಇನ್ನಷ್ಟು ಉತ್ತಮ ಪ್ರಿಡ್ರೆಸ್ಸರ್ ಜೊತೆಗೆ ಬಂದಿದ್ದು ಇದರಲ್ಲಿ ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಚಾಲನೆಯಾಗುತ್ತಿದ್ದು ಫೋನ್‌ನ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ವಿಶಿಷ್ಟವಾಗಿದೆ. ಇದರ ರಿಯರ್ ಬ್ಯಾಕ್ ಕವರ್ ಕೂಡ ಅತ್ಯಾಕರ್ಷಕವಾಗಿದ್ದು ಮನಸೆಳೆಯುವಂತಿದೆ. ದೊಡ್ಡದಾದ 5.2 ಇಂಚಿನ FHD ಡಿಸ್‌ಪ್ಲೇಯನ್ನು ಡಿವೈಸ್ ಹೊಂದಿದೆ.

ಹೊಸ ಮೋಟೋ ಎಕ್ಸ್ 13MP ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಈ ಕ್ಯಾಮೆರಾ ನಿಜಕ್ಕೂ ಅದ್ಭುತವಾಗಿದೆ. ಹೊಸ ಮೋಟೋರೋಲಾ ಮೋಟೋ ಎಕ್ಸ್ ಸ್ವಾಗತಾರ್ಹ ಬದಲಾವಣೆಗಳನ್ನು ಮಾಡಿದ್ದು ನಿಜಕ್ಕೂ ಕಣ್ಮನ ಸೆಳೆಯುವಂತಿದೆ. ಫೋನ್‌ನ ದೊಡ್ಡ ಗಾತ್ರ ನಿಜಕ್ಕೂ ಅದ್ಭುತವಾಗಿದ್ದು ಮನಸ್ಸಿಗೆ ಹಿತಕಾರಿಯಾಗಿದೆ. ಇದು 4.7 ಇಂಚಿನಿಂದ ಹಿಡಿದು 5.2 ವರೆಗೆ ಇದ್ದು ಪೂರ್ಣ 1080p ಎಚ್‌ಡಿ ಸ್ಕ್ರೀನ್ ಅನ್ನು ಹೊಂದಿದೆ. ಹ್ಯಾಂಡ್‌ಸೆಟ್‌ನ ಬಲಭಾಗದಲ್ಲಿ ವಾಲ್ಯೂಮ್ ರಾಕರ್ ಕೀ ಇದ್ದು ಪೋನ್ ಪವರ್ ಬಟನ್ ಅನ್ನು ಕೂಡ ಒಳಗೊಂಡಿದೆ. ಇದು ಜಲ ಮತ್ತು ಧೂಳು ಪ್ರತಿರೋಧಕವಾಗಿದ್ದು ನಿಜಕ್ಕೂ ಮನಮೋಹಕವಾಗಿದೆ.

ಹೊಸ ಮೋಟೋ ಎಕ್ಸ್ ಅತ್ಯುತ್ತಮ ಡಿವೈಸ್ ಹೇಗೆ?

ಫೋನ್‌ನ ಬಣ್ಣ ಮತ್ತು ವಿನ್ಯಾಸ ಮನಸಿಗೆ ಮುದ ನೀಡುವಂತಿದ್ದು ಇದನ್ನು ಒಂದು ಅದ್ಭುತ ಡಿವೈಸ್ ಅನ್ನಾಗಿ ಮಾಡಿದೆ. ಹೊಸ ಮೋಟೋರೋಲಾ ಮೋಟೋ ಎಕ್ಸ್ 5.2 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ರೆಸಲ್ಯೂಶನ್ 1080p ಆಗಿದೆ. ಇದರ ವೀಕ್ಷಣಾ ಆಂಗಲ್ ಕೂಡ ಅದ್ಭುತವಾಗಿದ್ದು ಬಣ್ಣಗಳ ಸಾಮ್ಯತೆ ಕೂಡ ಮನಮೋಹಕವಾಗಿದೆ.

ಹೊಸ ಮೋಟೋರೋಲಾ ಮೋಟೋ ಎಕ್ಸ್ ಅತ್ಯಾಧುನಿಕ 4.4 ಕಿಟ್‌ಕ್ಯಾಟ್ ಅನ್ನು ಚಾಲನೆ ಮಾಡುತ್ತಿದ್ದು ಮೇಲ್ಭಾಗದಲ್ಲಿ UI ಪರದೆಯನ್ನು ಹೊಂದಿದೆ. ಇದರ ಇಂಟರ್ಫೇಸ್ ಸ್ವಚ್ಛ ಮತ್ತು ಅತ್ಯದ್ಭುತವಾಗಿದೆ. ಫೋನ್‌ನಲ್ಲಿ ಅಂತರ್ನಿರ್ಮಿತ ROM ಅನ್ನು ಬಳಸುವುದಕ್ಕಿಂತ ಹೊರತಾಗಿ ನಿಜಕ್ಕೂ ಅದ್ಭುತ ವಿಶಿಷ್ಟತೆಗಳನ್ನು ಡಿವೈಸ್ ಹೊಂದಿದೆ.

<center><iframe width="100%" height="510" src="//www.youtube.com/embed/uWI36zi8P1k" frameborder="0" allowfullscreen></iframe></center>

English summary
This article tells that new moto x first hand and video review.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot