Subscribe to Gizbot

ನೋಕಿಯಾ ಲುಮಿಯಾ ಗೆ ಪ್ಯೂರ್ ವ್ಯೂ ತಂತ್ರಜ್ಞಾನ ಬರುತ್ತಾ?

Posted By: Varun
ನೋಕಿಯಾ ಲುಮಿಯಾ ಗೆ ಪ್ಯೂರ್ ವ್ಯೂ ತಂತ್ರಜ್ಞಾನ ಬರುತ್ತಾ?
ನೋಕಿಯಾದ ಅತ್ಯಂತ ದೊಡ್ಡದಾದ ಕ್ಯಾಮರಾ ಹೊಂದಿರುವ ಪ್ಯೂರ್ ವ್ಯೂ 808 ಮೊಬೈಲ್ ಬಗ್ಗೆ ನಿಮಗೆ ಗೊತ್ತೇ ಇದೆ. ಈಗ ನೋಕಿಯಾ ಕಂಪನಿಯು ಈ ಪ್ಯೂರ್ ವ್ಯೂ ತಂತ್ರಜ್ಞಾನವನ್ನು ಲುಮಿಯಾ ಸರಣಿಯ ಸ್ಮಾರ್ಟ್ ಫೋನುಗಳ ಕ್ಯಾಮರಾಗಳಿಗೂ ಉಪಯೋಗಿಸಲಿದೆಯೆಂಬ ಸುದ್ದಿ ಫಿನ್ ಲ್ಯಾಂಡ್ ನಿಂದ ಬಂದಿದೆ.

ಇದುವರೆಗೂ ಇರುವ ಸ್ಮಾರ್ಟ್ ಫೋನ್ ಕ್ಯಾಮರಾಗಳಲ್ಲೇ ಅತ್ಯಂತ ಉತ್ಕೃಷ್ಟ ಕ್ಯಾಮರಾ ತಂತ್ರಜ್ಞಾನ ಆಗಿರುವ ಪ್ಯೂರ್ ವ್ಯೂ, ವಿಂಡೋಸ್ 8 ಆಧಾರಿತ ಲುಮಿಯಾ ಸರಣಿಯ ಜೊತೆ ಬರಲಿದೆಯೆಂದು ಖಚಿತಪಡಿಸಿದೆ.

ನೋಕಿಯಾ ಪ್ಯೂರ್ ವ್ಯೂ ತಂತ್ರಜ್ಞಾನದಿಂದಾಗಿ ಅತ್ಯಂತ ಸೂಕ್ಷ್ಮವಾಗಿ ಚಿತ್ರ ತೆಗೆಯಬಹುದಾಗಿದ್ದು, ಜೂಮ್ ಮಾಡಿದರೂ ಪಿಕ್ಸೆಲೇಟ್ ಆಗದಂತೆ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ.

ವಿಂಡೋಸ್ 8 ಆಧಾರಿತ ನೋಕಿಯಾ ಲುಮಿಯಾ ಸ್ಮಾರ್ಟ್ ಫೋನ್ ಕೊಳ್ಳಲು ಕಾಯುತ್ತಿರುವವರಿಗೆ ಇದು ನಿಜಕ್ಕೂ ಸಂತೋಷದ ಸುದ್ದಿಯಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot