ಭಾರತಕ್ಕೆ ಬರಲಿರುವ ಎಚ್‌ಟಿಸಿ ಎಮ್9 ಟಾಪ್ ವಿಶೇಷತೆಗಳು

Written By:

ಎಚ್‌ಟಿಸಿ ಎಮ್9 ಬಾರ್ಸಿಲೋನಾದ ಎಮ್‌ಡಬ್ಲ್ಯೂಸಿನಲ್ಲಿ ಬಿಡುಗಡೆಗೊಂಡಿದ್ದು, ಈ ಫೋನ್‌ನ ವಿಶೇಷತೆಗಳ ಬಗ್ಗೆ ಮಾತನಾಡುವುದೆಂದರೆ ನಿಜಕ್ಕೂ ಅದು ಅದ್ಭುತ ಎಂಬುದು ನಿಮಗನಿಸಲಿದೆ. ಇಂದಿನ ಲೇಖನದಲ್ಲಿ ಫೋನ್‌ನ ಕುರಿತಾದ ಅಂಶಗಳನ್ನು ನಾವಿಲ್ಲಿ ನೀಡುತ್ತಿದ್ದು ನಿಮ್ಮಲ್ಲಿ ಫೋನ್ ಖರೀದಿಯ ಉತ್ಸಾಹವನ್ನು ಇದು ಇಮ್ಮಡಿಸುವುದಂತೂ ಖಂಡಿತ.

ಇದನ್ನೂ ಓದಿ: ಮರುಜನ್ಮ ಪಡೆದ ಟಾಪ್ 10 ಟೆಕ್ ಉತ್ಪನ್ನಗಳು

ಹಾಗಿದ್ದರೆ ಎಚ್‌ಟಿಸಿ ಎಮ್‌9 ನಲ್ಲಿ ಅಂತಹ ವಿಶೇಷತೆ ಏನಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ ಮೂಲಕ ನಾವು ನಿಮಗೆ ತೋರಿಸಲಿದ್ದು ಈ ವಿಶೇಷತೆ ನಿಮಗಂತೂ ಹುಚ್ಚು ಹಿಡಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಮೆರಾ

ಎಚ್‌ಟಿಸಿ ಎಮ್9 ಟಾಪ್ ವಿಶೇಷತೆಗಳು

ಈ ಪೋನ್‌ನಲ್ಲಿರುವ ಅಲ್ಟ್ರಾ ಪಿಕ್ಸೆಲ್ ಕ್ಯಾಮೆರಾ ನಿಜಕ್ಕೂ ಕಣ್ಮನ ಸೆಳೆಯುವಂತಿದೆ. ಅಂದರೆ ಇದು 20 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ನಿಮಗೆ ಫೋಟೋ ಜೂಮ್ ಮಾಡುವುದು ಮತ್ತು ಕ್ರಾಪ್ ಮಾಡುವುದು ಸರಳ ಕೆಲಸ ಎಂದೆನಿಸಲಿದೆ.

ಸೆನ್ಸ್ 7.0

ಎಚ್‌ಟಿಸಿ ಎಮ್9 ಟಾಪ್ ವಿಶೇಷತೆಗಳು

ಎಚ್‌ಟಿಸಿಯ ಕಸ್ಟಮ್ ಯುಐ ಹೊಸ ಅರಿವನ್ನು ನಿಮ್ಮಲ್ಲಿ ಉಂಟುಮಾಡಲು ಸಹಕಾರಿಯಾಗಿದ್ದು ನಿಮಗಿದು ಸಂಪೂರ್ಣ ಮಾಹಿತಿಯನ್ನು ನೀಡಲು ಅತ್ಯುತ್ತಮ ಎಂದೆನಿಸಲಿದೆ. ಇದರಿಂದಾಗಿ ನೀವು ಕಸ್ಟಮ್ ವಿಜೆಟ್ ಲಾಂಚರ್ ಅನ್ನು ಹೊಂದಲಿದ್ದು ಈ ಅಪ್ಲಿಕೇಶನ್ ನಿಮ್ಮ ಸ್ಥಾನ ಮತ್ತು ಇತರ ಮಾಹಿತಿಗಳನ್ನು ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಎಚ್‌ಟಿಸಿ ಎಮ್9 ಟಾಪ್ ವಿಶೇಷತೆಗಳು

ಎಚ್‌ಟಿಸಿ ಒನ್ ಎಮ್9 ಬೆಲೆಯ ಬಗ್ಗೆ ಸಂಸ್ಥೆ ಮೌನ ತಾಳಿದ್ದು, ಈ ತಿಂಗಳ ಮಧ್ಯಭಾಗದಲ್ಲಿ ಫೋನ್ ಮಾರುಕಟ್ಟೆಗೆ ಆಗಮಿಸಬಹುದು ಎಂಬುದು ನಮ್ಮ ಆಶಯವಾಗಿದೆ.

ಸ್ನ್ಯಾಪ್‌ಡ್ರಾಗನ್

ಎಚ್‌ಟಿಸಿ ಎಮ್9 ಟಾಪ್ ವಿಶೇಷತೆಗಳು

ಎಚ್‌ಟಿಸಿ ಒನ್ ಎಮ್9 ಓಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್ ಜೊತೆಗೆ ಬಂದಿದ್ದು 3 ಜಿಬಿ RAM ಇದರಲ್ಲಿದೆ ಮತ್ತು 32ಜಿಬಿ ಆಂತರಿಕ ಸಂಗ್ರಹಣೆಯನ್ನು ಇದು ಹೊಂದಲಿದೆ.

ಅಲ್ಟ್ರಾ ಪಿಕ್ಸೆಲ್ ಮುಂಭಾಗ ಕ್ಯಾಮೆರಾ

ಎಚ್‌ಟಿಸಿ ಎಮ್9 ಟಾಪ್ ವಿಶೇಷತೆಗಳು

ಇನ್ನು ಕಂಪೆನಿ ಫೋನ್‌ನ ಮುಂಭಾಗದಲ್ಲಿ ಅಲ್ಟ್ರಾ ಪಿಕ್ಸೆಲ್ ಕ್ಯಾಮೆರಾವನ್ನು ಜೋಡಿಸಿದ್ದು ಸ್ವಲ್ಪ ಕಡಿಮೆ ಗುಣಮಟ್ಟದ ಫೋಟೋಗ್ರಫಿ ಸಾಮರ್ಥ್ಯಗಳನ್ನು ಫೋನ್‌ಗೆ ನೀಡಿದೆ.

ವಿನ್ಯಾಸ

ಎಚ್‌ಟಿಸಿ ಎಮ್9 ಟಾಪ್ ವಿಶೇಷತೆಗಳು

ಎಮ್9 ಜೊತೆಗೆ, ಎಚ್‌ಟಿಸಿ ವಿನ್ಯಾಸ ಕ್ಷೇತ್ರದಲ್ಲಿ ತನ್ನನ್ನು ತಾನೇ ಮೀರಿಸಿದೆ. ಬೆಲೆಬಾಳುವ ವಾಚ್‌ಗಳಲ್ಲಿ ಇರುವಂತಹ ವಿನ್ಯಾಸವನ್ನು ಎಚ್‌ಟಿಸಿ ಎಮ್9 ಗೆ ನೀಡಿದ್ದು, ಇದರ ಫಲಿತಾಂಶ ಫೋನ್‌ನಲ್ಲಿ ಪ್ರತಿಫಲಿತವಾಗುತ್ತಿದೆ.

ಡೋಲ್ಬಿ

ಎಚ್‌ಟಿಸಿ ಎಮ್9 ಟಾಪ್ ವಿಶೇಷತೆಗಳು

ಬೂಮ್‌ಸೌಂಡ್ ಸೇರಿದಂತೆ ಡೋಲ್ಬಿ ಆಡಿಯೊ ಸೌಂಡ್ ಅನ್ನು ಫೋನ್ ಹೊಂದಿದ್ದು ಇದು ಬಿಲ್ಟ್ ಇನ್ ಸ್ಪೀಕರ್ ಜೊತೆಗೆ ಧ್ವನಿಯ ಶ್ರೀಮಂತಿಕೆಯನ್ನು ಕೇಳುಗರಿಗೆ ಒದಗಿಸಲಿದೆ.

ಎಚ್‌ಟಿಸಿ ಕನೆಕ್ಟ್

ಎಚ್‌ಟಿಸಿ ಎಮ್9 ಟಾಪ್ ವಿಶೇಷತೆಗಳು

ಎಚ್‌ಟಿಸಿ ಒನ್ ಎಮ್9, ಎಚ್‌ಟಿಸಿ ಕನೆಕ್ಟ್ ಆಡಿಯೊವನ್ನು ಬ್ಲ್ಯೂಟೂತ್, ಡಿಎಲ್‌ಎನ್‌ಎ, ಮಿರಾಕಾಸ್ಟ್, ಕ್ವಾಲ್‌ಕಾಮ್ ಆಲ್‌ಪೇ ಮೊದಲಾದವುಗಳ ಮೂಲಕ ವರ್ಗಾಯಿಸಬಹುದಾಗಿದ್ದು ಒಂದೇ ಸಮೂಹದೊಂದಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಸಂಯೋಜಿಸಬಹುದಾಗಿದೆ.

ಆಕ್ಸಸರೀಸ್

ಎಚ್‌ಟಿಸಿ ಎಮ್9 ಟಾಪ್ ವಿಶೇಷತೆಗಳು

ಎಚ್‌ಟಿಸಿ ಒನ್ ಎಮ್9 ಹೊಸ ಶ್ರೇಣಿಯ ಎಚ್‌ಟಿಸಿ ಡಾಟ್ ವ್ಯೂನೊಂದಿಗೆ ಬಂದಿದ್ದು ಇದು ಕಸ್ಟಮ್ ಸಂದೇಶಗಳನ್ನು ಇನ್ನಷ್ಟು ಪ್ರಖರಗೊಳಿಸಲು ಸಹಾಯ ಮಾಡುತ್ತದೆ. ಅಂದರೆ ಸಮಯ, ಕರೆ ಅಧಿಸೂಚನೆಗಳು ಮೊದಲಾದ ಸಾಮಾನ್ಯ ಸಂದೇಶಗಳನ್ನು ಕೇಸ್‌ನಲ್ಲಿದ್ದುಕೊಂಡೇ ನಿಮಗೆ ಗಮನಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
HTC One M9 has launched at Barcelona MWC 2015. It is considered as one of the best phone. here we can get all the qualities of htc m9 phone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot