ಮಾರುಕಟ್ಟೆಯಲ್ಲಿ ಮತ್ತೊಂದು ಸುಳ್ಳಿನ ಅರಮನೆ ಕಟ್ಟಿದ ಶಿಯೋಮಿ..!

|

ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸ್ಮಾರ್ಟ್ ಫೋನ್ ಕಂಪನಿಗಳಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಕ ಶಿಯೋಮಿ, ವಿಶ್ವದ ಮೊದಲ 5G ಸ್ಮಾರ್ಟ್ ಫೋನ್ ಹೆಸರಿನಲ್ಲಿ ಶಿಯೋಮಿ ಮಿ ಮ್ಯಾಕ್ಸ್ 3 ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದೆ. ಆದರೆ ಇದು ಸಂಪೂರ್ಣ ಸುಳ್ಳು, ಶಿಯೋಮಿ ವಿಶ್ವದ ಮೊದಲ ಕರ್ಮಷಿಯಲ್ 5G ಸ್ಮಾರ್ಟ್ ಫೋನ್ ಲಾಂಚ್ ಇನ್ನು ಮಾಡಿಲ್ಲ.

ಮಾರುಕಟ್ಟೆಯಲ್ಲಿ ಮತ್ತೊಂದು ಸುಳ್ಳಿನ ಅರಮನೆ ಕಟ್ಟಿದ ಶಿಯೋಮಿ..!

ಕಾರಣ ಬೀಜಿಂಗ್ ನಲ್ಲಿ ಈಗಾಗಲೇ ಲಾಂಚ್ ಮಾಡಿದ 5G ಸ್ಮಾರ್ಟ್ ಫೋನ್ ಖ್ಯಾತಿಯ ಶಿಯೋಮಿ ಮಿ ಮ್ಯಾಕ್ಸ್ 3 ಸ್ಮಾರ್ಟ್ ಫೋನ್ ನಲ್ಲಿ5G ಸಪೋರ್ಟ್ ಮಾಡುವ ಅಂಶಗಳು ಇಲ್ಲ. ಕಾರಣ ಶಿಯೋಮಿ ಲಾಂಚ್ ಮಾಡುವ ಶಿಯೋಮಿ ಮಿ ಮ್ಯಾಕ್ಸ್ 3 ಎಕ್ಸ್ ಕ್ಲೂಸಿವ್ ಆವೃತ್ತಿಯಲ್ಲಿ ಮಾತ್ರವೇ 5G ಸಫೋರ್ಟ್ ಮಾಡಲಿದ್ದು, ಈ ಸ್ಮಾರ್ಟ್ ಫೋನ್ ಮೂಲಗಳ ಪ್ರಕಾರ ಮುಂದಿನ ವರ್ಷದ ಮೊದಲ ತ್ರೈ ಮಾಸಿಕದಲ್ಲಿ ಲಾಂಚ್ ಆಗಲಿದೆ.

ಈ ಹಿನ್ನಲೆಯಲ್ಲಿ ಶಿಯೋಮಿ ಮತ್ತೊಮ್ಮೆ ಸುಳ್ಳು ಹೇಳಿದೆ. ಈಗಾಗಲೇ ಶಿಯೋಮಿ ತನ್ನ, ಶಿಯೋಮಿ ಮಿ ಮ್ಯಾಕ್ಸ್ 3 ಸ್ಮಾರ್ಟ್ ಫೋನ್ ನಲ್ಲಿ 5G ಅಳವಡಿಸಲು ಕ್ವಾಲ್ಕಮ್ ಸ್ನಾಪ್ ಡ್ರಾಗನ್ ಲಾಂಚ್ ಮಾಡುವ ಚಿಪ್ ಅನ್ನು ಅವಲಂಬಿಸಿದೆ. ಆದರೆ ಇದು ಇನ್ನು ಶಿಯೋಮಿ ಕೈ ಸೇರುವಲ್ಲಿ ತುಂಬ ದಿನಗಳು ಹಿಡಿಯಲಿದೆ. ಈ ಹಿನ್ನಲೆಯಲ್ಲಿ ಶಿಯೋಮಿ ಮಿ ಮ್ಯಾಕ್ಸ್ 3 ಸ್ಮಾರ್ಟ್ ಫೋನ್ 5G ಸಪೋರ್ಟ್ ಮಾಡುವುದು ತುಂಬ ದಿನಗಳ ನಂತರ.

ಆದರೆ ಇದೇ ಸಮಯದಲ್ಲಿ ತಮ್ಮದೇ 5G ಚಿಪ್ ಸೆಟ್ ಅನ್ನು ಅಭಿವೃದ್ಧಿ ಪಡಿಸಿಕೊಂಡಿರುವ ಸ್ಯಾಮ್ ಸಂಗ್ ಮತ್ತು ಹುವಾವೆ ಕಂಪನಿಗಳು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಸಲುವಾಗಿ ತಮ್ಮದೇ 5G ಸ್ಮಾರ್ಟ್ ಫೋನ್ ಗಳನ್ನು ಬಳಕೆದಾರರ ಕೈಗೆ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಈ ಹಿನ್ನಲೆಯಲ್ಲಿ ಶಿಯೋಮಿ ಗೂ ಮುನ್ನವೇ ಬೇರೆ ಕಂಪನಿಗಳು 5G ಸ್ಮಾರ್ಟ್ ಫೋನ್ ಅನ್ನು ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಶಿಯೋಮಿ ಹಿನ್ನಡೆ ಅನುಭವಿಸಲಿದೆ.

Best Mobiles in India

English summary
No, Xiaomi Mi Mix 3 is not the world's 'first commercial 5G smartphone'; here's why. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X