Subscribe to Gizbot

ನೋಕಿಯಾದ ಮೊದಲ 'ಆಂಡ್ರಾಯ್ಡ್ ಗೊ' ಸ್ಮಾರ್ಟ್‌ಫೋನ್ "ನೋಕಿಯಾ 1" ರಿಲೀಸ್!!..ಬೆಲೆ ಎಷ್ಟು ?

Written By:

ಬಾರ್ಸಿ ಲೋನಾದಲ್ಲಿ ನಡೆಯುತ್ತಿರುವ 2018ನೇ ಮೊಬೈಲ್ ಕಾಂಗ್ರೆಸ್‌ನಲ್ಲಿ ನೋಕಿಯಾದ ಮೊದಲ ಆಂಡ್ರಾಯ್ಡ್ ಗೊ ಸ್ಮಾರ್ಟ್‌ಫೋನ್ "ನೋಕಿಯಾ 1" ಫೋನ್ ಬಿಡುಗಡೆಯಾಗಿದೆ.! ಆದರೆ,. ನೋಕಿಯಾ 1 ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬರಲಿದೆ ಎನ್ನುವ ನಿರೀಕ್ಷೆ ಹೊಂದಿದ್ದ ಮೊಬೈಲ್ ಜಗತ್ತಿಗೆ ಮಾತ್ರ ನಿರಾಸೆ ಮೂಡಿಸಿದೆ.!!

ಹೌದು, ಎಲ್ಲರಿಗೂ ಸ್ಮಾರ್ಟ್‌ಫೋನ್ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಕಡಿಮೆ ಬೆಲೆ ಮತ್ತು ಕಡಿಮೆ ಫೀಚರ್ಸ್ ಹೊಂದಿರುವ 'ಆಂಡ್ರಾಯ್ಡ್ ಗೊ' ಓಎಸ್ ಸ್ಮಾರ್ಟ್‌ಫೋನ್‌ಗಳು ಇತ್ತೀಚಿಗೆ ಬಿಡುಗಡೆಯಾಗುತ್ತಿವೆ. ಇದಕ್ಕೆ ಆಂಡ್ರಾಯ್ಡ್ ಗೊ ಓಎಸ್ ಹೊಂದಿದ್ದ ನೋಕಿಯಾ 1 ಕೂಡ ಸೇರ್ಪಡೆಯಾದರೂ ಬೆಲೆ ಮಾತ್ರ ನಿರೀಕ್ಷಿಸಿದಕ್ಕಿಂತ ಸ್ವಲ್ಪ ಹೆಚ್ಚಾಗಿದೆ.!!

ನೋಕಿಯಾದ ಮೊದಲ 'ಆಂಡ್ರಾಯ್ಡ್ ಗೊ' ಸ್ಮಾರ್ಟ್‌ಫೋನ್

ಹಾಗಾದರೆ, ಇದೀಗ ಬಿಡುಗಡೆಯಾಗಿರುವ 4.5 ಇಂಚ್ ಡಿಸ್‌ಪ್ಲೇ, 1GB RAM ಹೊಂದಿರುವ ನೋಕಿಯಾ 1 ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ನೋಕಿಯಾ 1 ಸ್ಮಾರ್ಟ್ಫೋನ್ ಬೆಲೆ ಎಷ್ಟು? ಖರೀದಿಸಲು ಯೋಗ್ಯವಾದ ಸ್ಮಾರ್ಟ್‌ಫೋನ್ ಇದಾಗಿದೆಯೇ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ?

ಡಿಸ್‌ಪ್ಲೇ ಮತ್ತು ವಿನ್ಯಾಸ?

ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ನೋಕಿಯಾ 1 ಫೋನ್ FWVGA ಐಪಿಎಸ್ 4.5 ಇಂಚ್ ಡಿಸ್‌ಪ್ಲೇ ಹೊಂದಿರಲಿದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿರುವುದರಿಂದ ವಿನ್ಯಾಸದಲ್ಲಿಯೂ ಕೂಡ ಸಾಮಾನ್ಯ ಸ್ಮಾರ್ಟ್‌ಫೋನುಗಳಂತೆ ನೋಕಿಯಾ 1 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.!!

RAM ಮತ್ತು ಪ್ರೊಸೆಸರ್?

RAM ಮತ್ತು ಪ್ರೊಸೆಸರ್?

ಆಂಡ್ರಾಯ್ಡ್ ಗೊ ಆವೃತ್ತಿಯಲ್ಲಿ ಕಾರ್ಯನಿರ್ವಹಣೆ ನೀಡುವ ನೋಕಿಯಾ 1 ಸ್ಮಾರ್ಟ್‌ಫೋನ್ 1.1GHz ಕ್ವಾಡ್-ಕೋರ್ ಮೀಡಿಯಾ ಟೆಕ್ MT6737M ಪ್ರೊಸೆಸರ್ ಅನ್ನು ಹೊಂದಿದೆ. 1GB RAM ಹಾಗೂ 8GB ಮೆಮೊರಿ ವೆರಿಯಂಟ್‌ನಲ್ಲಿ ಮಾರುಕಟ್ಟೆಗೆ ಕಾಲಿಟ್ಟಿರುವ ಫೋನ್ ಕಾರ್ಯನಿರ್ವಹಣೆ ಚೆನ್ನಾಗಿದೆ ಎಂದು ಹೇಳಲಾಗಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ನೋಕಿಯಾ 1 ಆಂಡ್ರಾಯ್ಡ್ ಗೊ ಸ್ಮಾರ್ಟ್‌ಫೋನ್ 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಕಹಿಂಬಾಗದ ಕ್ಯಾಮೆರಾಗೆ ಎಲ್‌ಇಡಿ ಫ್ಲಾಶ್ ಹೊಂದಿರುವ ಈ ಫೋನ್ ಕ್ಯಾಮೆರಾ ತಂತ್ರಜ್ಞಾದ ಬಗ್ಗೆ ನೋಕಿಯಾ ಕಂಪೆನಿ ಹೆಚ್ಚು ಮಾಹಿತಿ ಬಿಡುಗಡೆ ಮಾಡಿಲ್ಲ.!

ನೋಕಿಯಾ 1 ಇತರೆ ಫೀಚರ್ಸ್?

ನೋಕಿಯಾ 1 ಇತರೆ ಫೀಚರ್ಸ್?

ನೋಕಿಯಾ 1 ಆಂಡ್ರಾಯ್ಡ್ ಗೊ ಸ್ಮಾರ್ಟ್‌ಫೋನ್ 2150mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. 802.11 ವೈ-ಫೈ, ಜಿಪಿಎಸ್ / ಎಜಿಪಿಎಸ್, ಬ್ಲೂಟೂತ್ 4.2, ಮೈಕ್ರೋ-ಯುಎಸ್ಬಿ 2.0, ಮತ್ತು 3.5 ಎಂಎಂ ಹೆಡ್‌ಫೋನ್ ಜಾಕ್‌ನಂತ ಫೀಚರ್ಸ್‌ಗಳು ಸ್ಮಾರ್ಟ್‌ಫೋನಿನಲ್ಲಿವೆ.!!

ನೋಕಿಯಾ 1 ಬೆಲೆ ಎಷ್ಟು?

ನೋಕಿಯಾ 1 ಬೆಲೆ ಎಷ್ಟು?

ಇಡೀ ಮೊಬೈಲ್ ಜಗತ್ತು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಹೆಚ್ಚು ಬೆಲೆಗೆ ನೋಕಿಯಾ 1 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. 1GB RAM ಹಾಗೂ 8GB ಮೆಮೊರಿ ಹೊಂದಿರುವ ನೋಕಿಯಾ 1 ಸ್ಮಾರ್ಟ್‌ಫೋನ್ ವಿಶ್ವದ ಮಾರುಕಟ್ಟೆಗೆ 85 ಡಾಲರ್‌ಗಳಿಗೆ ಬಿಡುಗಡೆಯಾಗಿದೆ. ಅಂದರೆ ಭಾರತದ ರೂಪಾಯಿಗಳಲ್ಲಿ 5000 ಎಂದು ನಿರೀಕ್ಷಿಸಬಹುದು.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ನೋಕಿಯಾ 1 ಖರೀದಿಸಲು ಯೋಗ್ಯವೇ?

ನೋಕಿಯಾ 1 ಖರೀದಿಸಲು ಯೋಗ್ಯವೇ?

ಆಂಡ್ರಾಯ್ಡ್ ಗೊ ಆವೃತ್ತಿಯಲ್ಲಿ ನೋಕಿಯಾ 1 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿರುವುದು ಖುಷಿಯ ವಿಚಾರವೇ ಆದರೂ ಸಹ ಸ್ಮಾರ್ಟ್‌ಫೋನ್ ಬೆಲೆ ಹೆಚ್ಚಾಗಿದೆ ಎಂದು ಹೇಳಬಹುದು.! ಇದೇ ಬೆಲೆಯಲ್ಲಿ ಇನ್ನು ಹೆಚ್ಚಿನ ಪೀಚರ್ಸ್ ಹೊಂದಿರುವ ಉತ್ತಮ ಫೋನ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
HMD Global took the stage at MWC 2018 to unveil its Nokia lineup for the first half of the year. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot