Subscribe to Gizbot

ಸ್ಮಾರ್ಟ್‌ಫೋನ್ ದಿಗ್ಗಜ ನೋಕಿಯಾದ ಹೊಚ್ಚಹೊಸ ಫೋನ್‌ಗಳು ಮಾರುಕಟ್ಟೆಗೆ

By: Shwetha PS

ಸ್ಮಾರ್ಟ್‌ಫೋನ್‌ನಲ್ಲಿ ನೋಕಿಯಾ ಎಂದರೆ ಅದೊಂದು ಲೀಡ್ ಮಾರ್ಕ್ ಎಂದೆನಿಸಿದೆ. ಎಷ್ಟೇ ನವೀನ ಮಾದರಿಯ ಮಾಡೆಲ್‌ಗಳು ಮಾರುಕಟ್ಟೆಯನ್ನು ಅಲಂಕರಿಸಿದ್ದರೂ ನೋಕಿಯಾ ಹೆಸರು ಮಾತ್ರ ಈಗಲೂ ಬಳಕೆದಾರರ ಮನದಲ್ಲಿ ಅಚ್ಚೊತ್ತಿ ನಿಂತಿದೆ. ಇತರ ಸ್ಮಾರ್ಟ್‌ಫೋನ್ ತಯಾರಕರ ಭರ್ಜರಿ ಪೈಪೋಟಿ ನಡುವೆಯೂ ನೋಕಿಯಾ ತಲೆಎತ್ತಿ ನಿಂತಿದೆ ಎಂದರೆ ಅದರ ಹಿರಿಮೆಯನ್ನು ಮೆಚ್ಚಲೇಬೇಕು. ಪ್ರಸ್ತುತ ನೋಕಿಯಾ ಎರಡು ಹೊಸ ಫೀಚರ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಸ್ಮಾರ್ಟ್‌ಫೋನ್ ದಿಗ್ಗಜ ನೋಕಿಯಾದ ಹೊಚ್ಚಹೊಸ ಫೋನ್‌ಗಳು ಮಾರುಕಟ್ಟೆಗೆ

ನೋಕಿಯಾ 105 ಮತ್ತು ನೋಕಿಯಾ 130 ಆಗಿದೆ. ಈ ಎರಡೂ ಫೋನ್‌ಗಳು ಒಂದೇ ಸಿಮ್ ವೈಶಿಷ್ಟ್ಯತೆಯೊಂದಿಗೆ ಬಂದಿದ್ದು ನೋಕಿಯಾ 105 ಬೆಲೆ ರೂ $14.5 (ಅಂದಾಜು. ರೂ. 930) ಆಗಿದ್ದು ನೋಕಿಯಾ 130 ಬೆಲೆ ರೂ $21.5 (ಅಂದಾಜು. ರೂ. 1,380) ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 105 ವಿಶೇಷತೆಗಳು

ನೋಕಿಯಾ 105 ವಿಶೇಷತೆಗಳು

ನೋಕಿಯಾ 105 ಪೋಲಿಕಾರ್ಬನೇಟ್ ವಿನ್ಯಾಸವನ್ನು ಪಡೆದುಕೊಂಡಿದ್ದು 1.8 ಇಂಚಿನ ಕ್ಯುವಿಜಿಎ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ನೋಕಿಯಾ ಸಿರೀಸ್ 30+ ಅನ್ನು ಆಧರಿಸಿದ್ದು ಸ್ನೇಕ್ ಕ್ಸೇಂಜಿಯಾ ಗೇಮ್ ಅನ್ನು ಇದು ಒಳಗೊಂಡಿದೆ. 4 ಎಮ್‌ಬಿ ಸಂಗ್ರಹಣೆಯನ್ನು ಡಿವೈಸ್ ಪಡೆದುಕೊಂಡಿದ್ದು 800 mah ಬ್ಯಾಟರಿ ಇದರಲ್ಲಿದೆ. 15 ಗಂಟೆಗಳ ಬ್ಯಾಟರಿ ಸೇವೆಯನ್ನು ಇದು ಒದಗಿಸಲಿದ್ದು 31 ದಿನಗಳ ಸ್ಟ್ಯಾಂಡ್‌ಬೈ ಸಮಯನ್ನು ನೀಡಲಿದೆ. ಎಫ್ಎಮ್ ರೇಡಿಯೊ, ಮೈಕ್ರೋ ಯುಎಸ್‌ಬಿ ಚಾರ್ಜರ್ ಮತ್ತು 3.5 ಎಮ್‌ಎಮ್ ಆಡಿಯೊ ಪೋರ್ಟ್ ಅನ್ನು ಡಿವೈಸ್ ಹೊಂದಿದೆ.

ನೋಕಿಯಾ 130

ನೋಕಿಯಾ 130

ನೋಕಿಯಾ 130 1.8 ಇಂಚಿನ ಕ್ಯುವಿಜಿಎ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು 8 ಎಮ್‌ಬಿ ಸಂಗ್ರಹಣೆಯನ್ನು ಇದು ಹೊಂದಿದೆ. ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ. ಫೋನ್ ರಿಯರ್ ಕ್ಯಾಮೆರಾವನ್ನು ಒಳಗೊಂಡಿದ್ದು ಬ್ಲೂಟೂತ್ ಕೂಡ ಇದರಲ್ಲಿದೆ. ಬ್ಯಾಟರಿ ಸಾಮರ್ಥ್ಯ 1020mAh ಆಗಿದ್ದು 11.5 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡುತ್ತದೆ. ಇದನ್ನು 44.5 ಗಂಟೆಗಳವರೆಗೆ ವಿಸ್ತರಿಸಿದೆ. ಎಫ್‌ಎಮ್ ರೇಡಿಯೊವನ್ನು ಡಿವೈಸ್ ಹೊಂದಿದ್ದು, ಎಲ್‌ಇಡಿ ಫ್ಲ್ಯಾಶ್ ಲೈಟ್ ಅನ್ನು ಪೋನ್ ಮೇಲ್ಭಾಗದಲ್ಲಿ ಹೊಂದಿದೆ.

 ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನೋಕಿಯಾ 105 ಬೆಲೆ ರೂ. 990 ಆಗಿದ್ದು, ಸಿಂಗಲ್ ಮತ್ತು ಡ್ಯುಯಲ್ ಸಿಮ್ ವೇರಿಯೇಂಟ್‌ಗಳಿಗೆ ರೂ 1,149 ಅನ್ನು ಕಂಪೆನಿ ನಿಗದಿ ಮಾಡಿದೆ. ನೋಕಿಯಾ 130 ಇನ್ನೂ ಮಾರುಕಟ್ಟೆಗೆ ಕಾಲಿಡಬೇಕಾಗಿದೆ. ನೋಕಿಯಾ 105 ಬೇರೆ ಬೇರೆ ಬಣ್ಣಗಳಲ್ಲಿ ಲಭ್ಯವಿದೆ. ಕೆಂಪು, ಕಂದು, ಕಪ್ಪು ಬಣ್ಣದಲ್ಲಿ ಈ ಡಿವೈಸ್ ಲಭ್ಯವಿದ್ದು ರಿಟೈಲ್ ಸ್ಟೋರ್‌ಗಳಲ್ಲಿ ಜುಲೈ 19 ರಿಂದ ಇದು ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Nokia 105 and Nokia 130 are two new features phones launched by HMD Global. Of these two, the Nokia 105 has been released in India starting from Rs. 990.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot