1,299 ರೂ.ಗೆ ನೋಕಿಯಾದ ಹೊಸ ಫೀಚರ್ ಫೋನ್ ರಿಲೀಸ್!

|

ಭಾರತದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಕಂಪೆನಿಯಾಗಿ ಮೆರೆದಿದ್ದ ನೋಕಿಯಾ ದೇಶದಲ್ಲಿ ಮಗದೊಂದು ಆಕರ್ಷಕ ಫೀಚರ್ ಫೋನ್ ಒಂದನ್ನು ಬಿಡುಗಡೆ ಮಾಡಿ ಗಮನಸೆಳೆದಿದೆ.2013ರಲ್ಲಿ ನೋಕಿಯಾ ಬಿಡುಗಡೆ ಮಾಡಿದ್ದ 'ನೋಕಿಯಾ 106' ಮಾದರಿಯ ಉತ್ತರಾಧಿಯಾಗಿ ಈಗ 'ನೋಕಿಯಾ 106 (2018)' ಫೀಚರ್ ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

1,299 ರೂ.ಗೆ ನೋಕಿಯಾದ ಹೊಸ ಫೀಚರ್ ಫೋನ್ ರಿಲೀಸ್!

ಒಂದೇ ಚಾರ್ಜ್‌ನಲ್ಲಿ 15 ಗಂಟೆಗಳ ಟಾಕ್ ಟೈಮ್ ಮತ್ತು 21 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ಹೊಂದಿರುವ ಫೋನ್ ಇದಾಗಿದೆ ಎಂದು ಹೆಚ್‌ಎಂಡಿ ಗ್ಲೋಬಲ್ ಸಂಸ್ಥೆ ತಿಳಿಸಿದ್ದು, ಬೆಲೆ ಕೇವಲ 1,299 ರೂಪಾಯಿಗಳಾಗಿವೆ. ಹಾಗಾದರೆ, ಭಾರತದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಗೊಂಡಿರುವ 'ನೋಕಿಯಾ 106 (2018)' ಫೀಚರ್ ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ?

ಡಿಸ್‌ಪ್ಲೇ ಮತ್ತು ವಿನ್ಯಾಸ?

ನೋಕಿಯಾ ಕಂಪೆನಿಯ ಹಳೆಯ 'ನೋಕಿಯಾ 106' ಮಾದರಿಯ ಉತ್ತರಾಧಿಯಾದ 'ನೋಕಿಯಾ 106 (2018)' ಫೀಚರ್ ಪೋನ್ 160x120 ಪಿಕ್ಸೆಲ್ ರೆಸೊಲ್ಯೂಷನ್ ಸಾಮರ್ಥ್ಯದಲ್ಲಿ 1.8 ಇಂಚುಗಳ QQVGA TFT ಡಿಸ್‌ಪ್ಲೇಯನ್ನು ಹೊಂದಿದೆ. ವಿನ್ಯಾಸವು ಹಳೆಯ ಫೋನಿನಂತೆಯೇ ಇದ್ದರೂ ಸಹ ಈಗ ಹೊಸ ಲುಕ್ ಅನ್ನು ಪಡೆದುಕೊಂಡಿದೆ.

RAM ಮತ್ತು ಮೆಮೊರಿ

RAM ಮತ್ತು ಮೆಮೊರಿ

'ನೋಕಿಯಾ 106 (2018)' ಫೀಚರ್ ಪೋನಿನಲ್ಲಿ ಮೀಡಿಯಾಟೆಕ್ MT6261D ಪ್ರೊಸೆಸರ್ ಅನ್ನು ನೀಡಲಾಗಿದ್ದು, 4MB RAM, 4MB ಆಂತರಿಕ ಸ್ಟೋರೆಜ್ ಅನ್ನು ಪೋನ್ ಹೊಂದಿದೆ ಈ ಸಾಮರ್ಥ್ಯದಲ್ಲಿ 2000 ಕಾಂಟಾಕ್ಟ್ ಮತ್ತು 500 ಟೆಕ್ಸ್ಟ್ ಮೆಸೇಜ್ ಅನ್ನು ಸೇವ್ ಮಾಡಿಕೊಳ್ಳಬಹುದಾದ ಆಯ್ಕೆಯಿದೆ.

ಬ್ಯಾಟರಿ ಹೇಗಿದೆ?

ಬ್ಯಾಟರಿ ಹೇಗಿದೆ?

ನೋಕಿಯಾ 106 (2018) ಫೋನಿನಲ್ಲಿ 800 mAh ಬ್ಯಾಟರಿಯನ್ನು ನೀಡಲಾಗಿದೆ. ಈ ಬ್ಯಾಟಿ 21ದಿನಗಳ ಸ್ಟ್ಯಾಂಡ್‌ಬೈ ಟೈಮ್ ಮತ್ತು 15 ತಾಸುಗಳ ಟಾಕ್ ಟೈಮ್ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ನಿಟ್ರೋ ರೇಸಿಂಗ್, ಡೇಜರ್ ಡ್ಯಾಶ್, ಟೆಟ್ರಿಸ್ ಗೇಮ್ಸ್ ಇರುವ ಈ ಫೋನಿನಲ್ಲಿ ಬ್ಯಾಟರಿ ಬ್ಯಾಕಪ್ ಅತ್ಯುತ್ತಮವಾಗಿದೆ.

ಇತರೆ ಫೀಚರ್ಸ್?

ಇತರೆ ಫೀಚರ್ಸ್?

ಭಾರತದಲ್ಲಿ ಡಾರ್ಕ್ ಗ್ರೇ ಬಣ್ಣದಲ್ಲಿ ಲಭ್ಯವಿರುವ ನೋಕಿಯಾ 106 (2018) ಫೀಚರ್ ಫೋನ್ ಮೈಕ್ರೋ ಯುಎಸ್‌ಬಿ ಕೇಬಲ್, 111.15x49.5x14.4mm ಆಯಾಮ, 70.2 ಗ್ರಾಂ ಭಾರ , 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಎಫ್‌ಎಂ ರೆಡಿಯೋದಂತಹ ಅತ್ಯುತ್ತಮ ಬೇಸಿಕ್ ಫೀಚರ್ಸ್‌ಗಳನ್ನು ಹೊಂದಿದೆ.

ಖರೀದಿಗೆ ಆಫರ್

ಖರೀದಿಗೆ ಆಫರ್

ಫ್ಲಿಪ್‌ಕಾರ್ಟ್‌ನಲ್ಲಿ ಆಕ್ಸಿಸ್ ಬ್ಯಾಂಕ್ ಬಜ್ ಕ್ರೆಡಿಟ್ ಕಾರ್ಡ್‌ದಾರರಿಗೆ ಶೇ. 10ರಷ್ಟು ಇನ್‌ಸ್ಟಂಟ್ ಡಿಸ್ಕೌಂಟ್ ನೀಡಲಾಗಿದ್ದರೆ, ಅಮೇಜಾನ್‌ನಲ್ಲಿ ಎಚ್‌ಡಿಎಫ್‌ಸಿ ಕ್ರೆಡಿಟ್ ಇಎಂಐನಲ್ಲಿ ಶೇ. 5ರಷ್ಟು ಇನ್‌ಸ್ಟಂಟ್ ಡಿಸ್ಕೌಂಟ್, ಹಾಗೆಯೇ ಎಚ್‌ಡಿಎಫ್‌ಸಿ ಡೆಬಿಟ್ ಇಎಂಐನಲ್ಲಿ ಶೇ. 10ರಷ್ಟು ಡಿಸ್ಕೌಂಟ್ ನೀಡಲಾಗಿದೆ.

Best Mobiles in India

English summary
After the launch of the Nokia 8.1 last month, HMD Global launched the Nokia 106 (2018) feature in India. The phone is up for sale via offline retailers, as well as on the official website. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X