Subscribe to Gizbot

ನೂತನ ನೋಕಿಯಾ 109 ಫೀಚರ್‌ಫೋನ್‌ ಬಂದಿದೆ

Posted By: Vijeth

ನೂತನ ನೋಕಿಯಾ 109 ಫೀಚರ್‌ಫೋನ್‌ ಬಂದಿದೆ

ಇತ್ತೀಚೆಗಷ್ಟೇ ನೋಕಿಯಾ ತನ್ನಯ ಪ್ರಾಥಮಿಕ ಹಂತದ ನೂತನ ವಿಂಡೋಸ್‌ ಸ್ಮಾರ್ಟ್‌ಫೋನ್‌ ಆದಂತಹ ನೋಕಿಯಾ ಲೂಮಿಯಾ 510 ಬಿಡುಗಡೆ ಮಾಡಿದ್ದು ಹಾಗೂ ಬಹುನಿರೀಕ್ಷಿತ ವಿಂಡೋಸ್‌ ಫೋನ್‌ 8 ಚಾಲಿತ ಸ್ಮಾರ್ಟ್‌ಫೋನ್‌ ಆದಂತಹ ಲೂಮಿಯಾ 910 ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಈ ಮಧ್ಯೆ ನೋಕಿಯಾ ಭಾರತೀಯ ಫೀಚರ್‌ಫೋನ್ಸಮಾರುಕಟ್ಟೆಯಲ್ಲಿನ ತನ್ನಯ ಹಿಡಿತವನ್ನು ಕಾಪಾಡಿಕೊಳ್ಳಲು ಸಲುವಾಗಿ ಕೈಗೆಟಕುವ ಬೆಲೆಯಲ್ಲಿ ಸುಮಾರು ರೂ. 2,250 ದರದಲ್ಲಿ ನೂತನ ನೋಕಿಯಾ 109 ಫೀಚರ್‌ಫೋನ್‌ ಬಿಡುಗಡೆ ಮಾಡಿದ್ದು ಈ ಹ್ಯಾಂಡ್‌ಸೆಟ್‌ ಜಿಪಿಆರ್‌ಎಸ್‌/ಎಡ್ಜ್‌, 2ಜಿ ನಂತಹ ಆಕರ್ಷಕ ಫೀಚರ್ಸ್‌ಗಳಿಂದ ಕೂಡಿದ್ದು, ನೋಕಿಯಾ ಸಂಸ್ಥೆ ಈವರೆಗೆ ಬಿಡುಗಡೆ ಮಾಡಿರುವ ಅತ್ಯಂತ ಕಡಿಮೆ ಬೆಲೆಯಲ್ಲಿನ ಅಂತರ್ಜಾಲ ಸಂಪರ್ಕ ಹೊಂದಿರುವ ಫೀಚರ್‌ ಫೋನ್ ಎಂದೆನಿಸಿಕೊಂಡಿದೆ.

ಅಂದಹಾಗೆ ಮಾರುಕಟ್ಟೆಯಲ್ಲಿ ಈಗಿರುವ ಸ್ಮಾರ್ಟ್‌ಫೋನ್ಸ್‌ಗಳ ಅಬ್ಬರದ ನಡುವೆ ನೋಕಿಯಾದ ನೂತನ ಫೀಚರ್‌ಫೋನ್‌ ಗ್ರಾಹಕರನ್ನು ತನ್ನತ್ತ ಸೆಳೆಯಲು ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿದುಕೊಳ್ಳೋಣ.

ನೋಕಿಯಾ 109 ಫೀಚರ್‌ಫೋನ್‌ನ ವಿಶೇಷತೆಗಳು ಹೀಗಿದೆ.

ತೂಕ ಹಾಗೂ ಸುತ್ತಳತೆ : ನೋಕಿಯಾ 109 ಫೀಚರ್‌ಫೋನ್‌ 110 x 46 x 14.8 mm ಸುತ್ತಳತೆಯೊಂದಿಗೆ 77 ಗ್ರಾಂ ತೂಕವಿದೆ.

ದರ್ಶಕ : ಫೀಚರ್‌ಫೋನ್‌ ಆದ್ದರಿಂದ 1.8 ಇಂಚಿನ ಟಿಏಫ್‌ಟಿ ಸ್ಕ್ರೀನ್‌ ದರ್ಶಕ ಹಾಗೂ 128 x 160 ಪಿಕ್ಸೆಲ್ಸ್‌ ಹೊಂದಿದೆ.

ಸ್ಟೋರೇಜ್‌ : 16ಎಂಬಿ ಆಂತರಿಕ ಸ್ಟೋರೇಜ್‌ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32ಜಿಬಿ ವರೆಗೆ ಮೆಮೊರಿ ವಿಸ್ತರಿಸ ಬಹುದಾಗಿದೆ.

ಇಂಟರ್ಫೇಸ್‌ : ನೋಕಿಯಾ 109 ನಲ್ಲಿ ನೋಕಿಯಾ ಸೀರೀಸ್‌ 40 ಫ್ಲಾಟ್‌ಫಾರ್ಮ್‌ ನೀಡಲಾಗಿದೆ.

ಕನೆಕ್ಟಿವಿಟಿ : ಇಂಟರ್ನೆಟ್‌ ಸಂಪರ್ಕ ಹೊಂದಿರುವ ಫೀಚರ್‌ಫೋನ್‌ ಆದ್ದರಿಂದ, ನೋಕಿಯಾ 109 ನಲ್ಲಿ ಜಿಪಿಆರ್‌ಎಸ್‌/ಎಡ್ಜ್‌ 2ಜಿ ಫೀಚರ್ಸ್‌ ನೀಡಲಾಗಿದೆ.

ಬ್ಯಾಟರಿ : 800 mAh Li-ion ಬ್ಯಾಟರಿ ನೀಡಲಾಗಿದ್ದು 7.5 ಗಂಟೆಗಳ ಟಾಕ್‌ಟೈಮ್‌ ಹಾಗೂ 790 ಗಂಟೆಗಳ ಸ್ಟ್ಯಾಂಡ್‌ ಬೈ ನೀಡಲಾಗಿದೆ.

ಹೆಚ್ಚುವರಿ ಫೀಚರ್ಸ್‌ :

ಮೊಬೈಲ್‌ ಫೋನ್‌ನಲ್ಲಿ ಸುಲಭವಾಗಿ ಅಂತರ್ಜಾಲ ಬಳಕೆ ಮಾಡಲು ಬಯಸುವವರಿಗಾಗಿಯೇ ನೋಕಿಯಾ 109 ಫೀಚರ್‌ಫೋನ್‌ ಸಿದ್ಧಪಡಿಸಲಾಗಿದ್ದು, ನೋಕಿಯಾ ಎಕ್ಸಪ್ರೆಸ್‌ ನಿಂದಾಗಿ ಶೇ.90% ರಷ್ಟು ವೇಗದ ಬ್ರೌಸಿಂಗ್‌ ಅನುಭವ ನೀಡುತ್ತದೆ. ಇದಲ್ಲದೆ ಫೇಸ್‌ ಬುಕ್‌ ಹಾಗೂ ಟ್ವಿಟ್ಟರ್‌ನಂತಹ ಸೋಷಿಯಲ್‌ ನೆಟ್ವರ್ಕಿಂಗ್‌ ಫೀಚರ್ಸ್‌ ಕೂಡ ನೀಡಲಾಗಿದ್ದು ಜೊತೆಗೆ ನೋಕಿಯಾ ಸ್ಟೋರ್‌ ಮೂಲಕ ಇ-ಬಡೀ ಇಂಸ್ಟಂಟ್‌ ಮೆಸೆಂಜರ್‌ ಕೂಡ ನೀಡಲಾಗಿದೆ.

ಬೆಲೆ ಹಾಗೂ ಲಭ್ಯತೆ

ನೂತನ ನೋಕಿಯಾ 109 ಎರಡು ವರ್ಣಗಳಲ್ಲಿ ಲಭ್ಯವಿದ್ದು ವರ್ಷಾಂತ್ಯಕ್ಕೆ ಚೀನಾ, ಏಷ್ಯಾ ಪೆಸಿಫಿಕ್‌ ಹಾಗೂ ಯೂರೋಪ್‌ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಅಂದಹಾಗ ನೂತನ ಹ್ಯಾಂಡ್‌ಸೆಟ್‌ನ ದರ $42 (ಸುಮಾರು. ರೂ 2,250) ಇರಲಿದೆ.

Read In English...

20,000 ರೂ.ದರದಲ್ಲಿನ ಬ್ಲಾಕ್‌ಬೆರಿ ಸ್ಮಾರ್ಟ್‌ಫೋನ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot