Home
ಮೊಬೈಲ್

ನೋಕಿಯಾದಿಂದ ಸದ್ದಿಲ್ಲದೇ ಮೂರು ಸ್ಮಾರ್ಟ್‌ಫೋನ್ ಲಾಂಚ್: ಬೆಸ್ಟ್‌ ಫೀಚರ್ಸ್, ಬೆಸ್ಟ್‌ ಬೆಲೆ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ನಿರೀಕ್ಷಿತ ಗೆಲುವು ಸಾಧಿಸಲು ಪರದಾಡುತ್ತಿರುವ ನೋಕಿಯಾ, ಮತ್ತೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಮುಂದಾಗಿದೆ. HMD ಗ್ಲೊಬಲ್ ಸಂಸ್ಥೆಯೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಈ ಮೂರು ಸ್ಮಾರ್ಟ್‌ಫೋನ್‌ಗಳು ಏಕಕಾಲಕ್ಕೆ ಬಿಡುಗಡೆ ಮಾಡಿದೆ ಎನ್ನಲಾಗಿದೆ.

ನೋಕಿಯಾದಿಂದ ಸದ್ದಿಲ್ಲದೇ ಮೂರು ಸ್ಮಾರ್ಟ್‌ಫೋನ್ ಲಾಂಚ್: ಬೆಸ್ಟ್‌ ಫೀಚರ್ಸ್..!

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ಆಪ್‌ಡೇಟ್ ಆವೃತ್ತಿ ಸ್ಮಾರ್ಟ್‌ಫೋನ್‌ಗಳಾಗಿದ್ದು, ನೋಕಿಯಾ 2.1, ನೋಕಿಯಾ 3.1 ಮತ್ತು ನೋಕಿಯಾ 5.1 ಸ್ಮಾರ್ಟ್‌ಫೋನ್ ಹೊಸದಾಗಿ ಕಾಣಿಸಿಕೊಂಡಿವೆ. ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿರುವ ಈ ಹಿನ್ನಲೆಯಲ್ಲಿ ಹೊಸ ಮೂರು ಸ್ಮಾರ್ಟ್‌ಫೋನ್‌ಗಳ ಕುರಿತ ಮಾಹಿತಿಯೂ ಮುಂದಿದೆ.

ನೋಕಿಯಾ 2.1 ಸ್ಮಾರ್ಟ್‌ಫೋನ್‌:

ನೋಕಿಯಾ 2.1 ಸ್ಮಾರ್ಟ್‌ಫೋನ್‌:

ನೋಕಿಯಾ 2.1 ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 16:9 ಅನುಪಾತದ ಡಿಸ್‌ಪ್ಲೇಯಾಗಿದೆ. ಆಂಡ್ರಾಯ್ಡ್ ಒರಿಯೋ (ಗೋ ಆವೃತ್ತಿ)ಯಲ್ಲಿ ಈ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದೆ. ಸ್ನಾಪ್‌ಡ್ರಾಗನ್ 425 ಪ್ರೋಸೆಸರ್, 1 GB RAM ಮತ್ತು 8 GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಇದಲ್ಲದೇ 4000mAh ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದೆ. ಮೆಮೊರಿ ಕಾರ್ಡ್ ಮೂಲಕ 12 8GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವು ಲಭ್ಯವಿದೆ. ಹಿಂಭಾಗದಲ್ಲಿ 8 MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ ರೂ.6,999ಕ್ಕೆ ಲಭ್ಯವಿದೆ.

ನೋಕಿಯಾ 5.1 ಸ್ಮಾರ್ಟ್‌ಫೋನ್:

ನೋಕಿಯಾ 5.1 ಸ್ಮಾರ್ಟ್‌ಫೋನ್:

ನೋಕಿಯಾ 5.1 ಸ್ಮಾರ್ಟ್‌ಫೋನ್ 5.5 ಇಂಚಿನ FHD + ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿದೆ. ಇದು 18:9 ಅಸುಪಾತದ ಕೂಡಿದೆ ಜೊತೆಗೆ ಗೊರಿಲ್ಲಾ ಗ್ಲಾಸ್ 3 ಸುರಕ್ಷತೆಯನ್ನು ನೀಡಲಾಗಿದೆ. ಮಿಡಿಯಾ ಟೆಕ್ MT6755S ಪ್ರೋಸೆಸರ್ ಜೊತೆಯಲ್ಲಿ 3GB RAM ಮತ್ತು 32 GB ಇಂಟರ್ನಲ್ ಮೆಮೊರಿಯನ್ನು ನೋಡಬಹುದಾಗಿದೆ. ಅಲ್ಲದೇ 3000mAh ಬ್ಯಾಟರಿ ಇದರಲ್ಲಿದೆ. ಇದಲ್ಲದೇ ಹಿಂಭಾಗದಲ್ಲಿ 16 MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ರೂ.14499ಕ್ಕೆ ನೋಕಿಯಾ 5.1 ಸ್ಮಾರ್ಟ್‌ಫೋನ್ ದೊರೆಯುತ್ತಿದೆ.

ನೋಕಿಯಾ 3.1 ಸ್ಮಾರ್ಟ್‌ಫೋನ್:

ನೋಕಿಯಾ 3.1 ಸ್ಮಾರ್ಟ್‌ಫೋನ್:

ಈಗಾಗಲೇ ಮಾರುಕಟ್ಟೆಯಲ್ಲಿ ನೋಕಿಯಾ 3.1 ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಈ ಬಾರಿ ಇದಕ್ಕೆ ಹೊಸ ಆವೃತ್ತಿಯ ಸೇರ್ಪಡೆಗೊಳಿಸಲಾಗಿದೆ. 3GB RAM ಮತ್ತು 32 GB ಇಂಟರ್ನಲ್ ಮೆಮೊರಿಯೊಂದಿಗೆ ಹೊಸದಾಗಿ ದೊರೆಯುತ್ತಿರುವ ನೋಕಿಯಾ 3.1 ಸ್ಮಾರ್ಟ್‌ಫೋನ್ ರೂ.11,999ಕ್ಕೆ ಮಾರಾಟವಾಗಲಿದೆ.

ಪೇಟಿಎಂ ಮಾಲ್‌ನಲ್ಲಿ:

ಪೇಟಿಎಂ ಮಾಲ್‌ನಲ್ಲಿ:

ನೋಕಿಯಾ 2.1, ನೋಕಿಯಾ 3.1 ಮತ್ತು ನೋಕಿಯಾ 5.1 ಸ್ಮಾರ್ಟ್‌ಫೋನ್‌ಗಳು ಆಗಸ್ಟ್ 12 ರಿಂದ ಪೇಟಿಎಂ ಮಾಲ್‌ನಲ್ಲಿ ಮಾರಾಟವಾಗಲಿದೆ. ಇದರೊಂದಿಗೆ ನೋಕಿಯಾ ಆನ್‌ಲೈನ್‌ ಸ್ಟೋರಿನಲ್ಲಿಯೂ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಆಫರ್:

ಆಫರ್:

ಇದಲ್ಲದೇ ಪೇಟಿಎಂ ಮಾಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡುವವರಿಗೆ 10% ಕ್ಯಾಷ್ ಬ್ಯಾಕ್ ಸಹ ದೊರೆಯಲಿದೆ ಎನ್ನಲಾಗಿದೆ. ಇದಲ್ಲದೇ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ನೋಕಿಯಾ 2.1, ನೋಕಿಯಾ 3.1 ಮತ್ತು ನೋಕಿಯಾ 5.1 ಸ್ಮಾರ್ಟ್‌ಫೋನ್ ಖರೀದಿಸಿದವರಿಗೆ ಡೇಟಾ ಆಫರ್ ಅನ್ನು ನೀಡುತ್ತಿವೆ. ICICI ಕಾರ್ಡುದಾರರಿಗೆ ಹೆಚ್ಚುವರಿ 5% ಕ್ಯಾಷ್ ಬ್ಯಾಕ್ ಇದೆ.

Best Mobiles in India

English summary
Nokia 2.1, Nokia 5.1 and Nokia 3.1 launched in India. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+