ಶಿಯೋಮಿ ಯಾಕೆ ಬೇಕು? ಅದೇ ಬೆಲೆಯಲ್ಲಿ ಲಭ್ಯ ನೋಕಿಯಾ 3.1..!
ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಗಳ ಹಾವಳಿಯೂ ಹೆಚ್ಚಾಗಿದ್ದು, ಇದಕ್ಕೆ ಹೊಸ ಸೇರ್ಪಡೆಯಾಗುತ್ತಿದೆ ನೋಕಿಯಾ 3.1 ಸ್ಮಾರ್ಟ್‌ಫೋನ್. ಮೊದಲಿಗೆ ರಷ್ಯಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಈ ಸ್ಮಾರ್ಟ್‌ಫೋನ್ ಬಜೆಟ್ ವಿಭಾಗದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿವೆ. 18:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿರುವ ನೋಕಿಯಾ 3.1 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯಲಿದೆ ಎನ್ನಲಾಗಿದೆ.

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ 3 ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಇದರ ಮುಂದುವರೆದ ಆವೃತ್ತಿಯಾಗಿ ನೋಕಿಯಾ 3.1 ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಹೊಸದಾಗಿ ಲಾಂಚ್ ಆಗಲಿರುವ ನೋಕಿಯಾ 3.1 ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಮುಂದಿದೆ.

ನೋಕಿಯಾ 3.1 ಸ್ಮಾರ್ಟ್‌ಫೋನ್ ಬೆಲೆ:
ನೋಕಿಯಾ 3.1 ಸ್ಮಾರ್ಟ್‌ಫೋನ್ ರೂ.10,499ಕ್ಕೆ ಮಾರಾಟವಾಗುತ್ತಿದ್ದು, ಒಂದೇ ಆವೃತ್ತಿಯಲ್ಲ ಲಭ್ಯವಿದೆ. 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಒಟ್ಟು ಮೂರು ಬಣ್ಣಗಳಲ್ಲಿ ದೊರೆಯಲಿದೆ. ನೋಕಿಯಾ 3.1 ಸ್ಮಾರ್ಟ್‌ಫೋನ್ ಆಫ್ ಲೈನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿದ್ದು, ಆನ್‌ಲೈನ್ ನಲ್ಲಿ ಪೇಟಿಎಂ ಮಾಲ್ ನಲ್ಲಿ ಮಾತ್ರವೇ ದೊರೆಯಲಿದೆ.

ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯನಿರ್ವಹಿಸಲಿದೆ:
ನೋಕಿಯಾ 3.1 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಬಳಕೆದಾರರಿಗೆ ಸ್ಟಾಕ್ ಆಂಡ್ರಾಯ್ಡ್ ಬಳಕೆಯ ಅನುಭವನ್ನು ನೀಡಲಿದೆ. ಆಕ್ಟಾ ಕೋರ್ ಮಿಡಿಯಾ ಟೆಕ್ MT6750N ಪ್ರೋಸೆಸರ್ ಹೊಂದಿದ್ದು, ವೇಗವಾಗಿ ಕಾರ್ಯನಿರ್ವಹಿಸಲಿದೆ.

2GB RAM:
ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯನಿರ್ವಹಿಸಲಿರುವ ನೋಕಿಯಾ 3.1 ಸ್ಮಾರ್ಟ್‌ಫೋನ್ 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗುತ್ತಿದೆ. ಇದಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿಯನ್ನು ಪಡೆದುಕೊಳ್ಳಬಹುದಾಗಿದೆ.

ಕ್ಯಾಮೆರಾ:
ನೋಕಿಯಾ 3.1 ಸ್ಮಾರ್ಟ್‌ಫೋನಿನಲ್ಲಿ 13 MP ಹಿಂಭಾಗದ ಕ್ಯಾಮೆರಾವನ್ನು ಕಾಣಬಹುದಾಗಿದ್ದು, LED ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ. ಮುಂಭಾಗದಲ್ಲಿ 8 MP ಕ್ಯಾಮೆರಾ ಅಳವಡಿಸಲಾಗಿದ್ದು, ಉತ್ತಮವಾಗಿ ಚಿತ್ರಗಳನ್ನು ಸೆರೆಹಿಡಿಯಲಿದೆ ಎನ್ನಲಾಗಿದೆ.

ಡಿಸ್‌ಪ್ಲೇ:
5.2 ಇಂಚಿನ ಡಿಸ್‌ಪ್ಲೇಯನ್ನು ನೋಕಿಯಾ 3.1 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, ಇದು 18:9 ಅನುಪಾತದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಗೊರಿಲ್ಲಾ ಗ್ಲಾಸ ಸುರಕ್ಷತೆಯನ್ನು ಹೊಂದಿದೆ. ನೋಕಿಯಾ 3.1 ಸ್ಮಾರ್ಟ್‌ಫೋನಿನಲ್ಲಿ 2990mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, 4G LETಯಲ್ಲಿ ಕಾರ್ಯನಿರ್ವಹಿಸಲಿದೆ.


Click it and Unblock the Notifications








