ಅತೀ ಕಡಿಮೆ ಬೆಲೆಯ ಸ್ಟಾಕ್ ಆಂಡ್ರಾಯ್ಡ್: ಇಂದಿನಿಂದ ಸೇಲ್ ಆರಂಭ...!
ನೋಕಿಯಾ ಮಾರುಕಟ್ಟೆಗೆ ಲಾಂಚ್ ಆಗಿರುವ ನೋಕಿಯಾ ಅತೀ ಕಡಿಮೆ ಬೆಲೆಯ ಫೋನ್ ಎನ್ನುವ ಖ್ಯಾತಿ ಪಾತ್ರವಾಗಿರುವ ನೋಕಿಯಾ 3.1 ಸ್ಮಾರ್ಟ್‌ಫೋನ್ ಇಂದಿನಿಂದ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಆಧ್ಯಾಯವನ್ನು ಬರೆಯಲಿರುವ ಈ ಸ್ಟಾಕ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಗಳ ಹಾವಳಿಯನ್ನು ಸದ್ದು ಅಡಗಿಸಲಿದೆ. ನೋಕಿಯಾ 3.1 ಸ್ಮಾರ್ಟ್‌ಫೋನ್ ಬಜೆಟ್ ವಿಭಾಗದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೇಡಿಕೆಯನ್ನು ನಿರ್ಮಿಸಿಕೊಳ್ಳಲಿದೆ. 18:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿರುವ ನೋಕಿಯಾ 3.1 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರಿಗೆ ಮೆಚ್ಚುಗೆಯಾಗಲಿದೆ.

ಪೇಟಿಎಂ ಮಾಲ್‌ನಲ್ಲಿ ಮಾರಾಟ:
ನೋಕಿಯಾ 3.1 ಸ್ಮಾರ್ಟ್‌ಫೋನ್ ಇಂದಿನಿಂದ ಪೇಟಿಎಂ ಮಾಲ್‌ನಲ್ಲಿ ಮತ್ತು ನೋಕಿಯಾ.ಇನ್ ನಲ್ಲಿ ಮಾರಾಟವಾಗಲಿದೆ. ಇದಾದ ನಂತರದಲ್ಲಿ ಆಫ್‌ಲೈನ್ ಮಾರುಕಟ್ಟೆಯಲ್ಲಿಯೂ ದೊರೆಯಲಿದೆ. ಸದ್ಯ ಮೂರು ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ದೊರೆಯುತ್ತಿದೆ

ಸದ್ಯಕ್ಕೆ ಒಂದೇ ಫೋನ್ ಮಾರಾಟ:
ನೋಕಿಯಾ 3.1 ಸ್ಮಾರ್ಟ್‌ಫೋನ್ ಇತರೆ ಮಾರುಕಟ್ಟೆಯಲ್ಲಿ ಎರಡು ಮಾದರಿಯಲ್ಲಿ ಕಾಣಿಸಿಕೊಂಡಿದೆ. ಆದರೆ ಭಾರತದಲ್ಲಿ ಒಂದೇ ಆವೃತ್ತಿಯಲ್ಲ ಲಭ್ಯವಿದೆ ರೂ.10,499ಕ್ಕೆ ಮಾರಾಟವಾಗುತ್ತಿದೆ. 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಒಟ್ಟು ಮೂರು ಬಣ್ಣಗಳಲ್ಲಿ ದೊರೆಯಲಿದೆ.

ಸೇಲ್ ಆಫರ್:
ನೋಕಿಯಾ 3.1 ಸ್ಮಾರ್ಟ್‌ಫೋನ್ ಇಂದಿನಿಂದ ಪೇಟಿಎಂ ಮಾಲ್‌ನಲ್ಲಿ ಮಾರಾಟವಾಗಲಿದೆ. ಅಲ್ಲದೇ ಆಫ್‌ಲೈನ್ ಮಾರುಕಟ್ಟೆಯಲ್ಲಿಯೂ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದಾಗಿದೆ. ಶೇ.10%ರಷ್ಟು ಕಡಿತವನ್ನು ಪಡೆಯಬಹುದಾಗಿದೆ. ಅಲ್ಲದೇ ರೂ.250 ಮೂವಿ ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ICICI ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ಶೇ.5% ಕ್ಯಾಷ್ ಬ್ಯಾಕ್ ನಿಮ್ಮದಾಗಿಸಿಕೊಳ್ಳಬಹುದು.

ದೊಡ್ಡ ಡಿಸ್‌ಪ್ಲೇ:
5.2 ಇಂಚಿನ ಡಿಸ್‌ಪ್ಲೇಯನ್ನು ನೋಕಿಯಾ 3.1 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, ಇದು 18:9 ಅನುಪಾತದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಗೊರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ಹೊಂದಿದೆ. ನೋಕಿಯಾ 3.1 ಸ್ಮಾರ್ಟ್‌ಫೋನಿನಲ್ಲಿ 2990mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, 4G LETಯಲ್ಲಿ ಕಾರ್ಯನಿರ್ವಹಿಸಲಿದೆ.

ಸ್ಟಾಕ್ ಆಂಡ್ರಾಯ್ಡ್
ನೋಕಿಯಾ 3.1 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ಆಂಡ್ರಾಯ್ಡ್ ಒನ್ ನಲ್ಲಿ ಕಾರ್ಯನಿರ್ವಹಿಸಲಿದೆ. ಬಳಕೆದಾರರಿಗೆ ಸ್ಟಾಕ್ ಆಂಡ್ರಾಯ್ಡ್ ಬಳಕೆಯ ಅನುಭವನ್ನು ನೀಡಲಿದೆ. ಆಕ್ಟಾ ಕೋರ್ ಮಿಡಿಯಾ ಟೆಕ್ MT6750N ಪ್ರೋಸೆಸರ್ ಹೊಂದಿದ್ದು, ವೇಗವಾಗಿ ಕಾರ್ಯನಿರ್ವಹಿಸಲಿದೆ,

2GB RAM/64GB ಮೆಮೊರಿ:
ನೋಕಿಯಾ 3.1 ಸ್ಮಾರ್ಟ್‌ಫೋನ್ ಸದ್ಯ ಒಂದೇ ಒಂದು ಆವೃತ್ತಿಯಲ್ಲಿ ಮಾರಾಟವಾಗುತ್ತಿದೆ. 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿದ್ದು, ಇದಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಅವಕಾಶವು ಬಳಕೆದಾರರಿಗೆ ದೊರೆಯುತ್ತಿದೆ.

ಬೆಸ್ಟ್ ಕ್ಯಾಮೆರಾ:
ನೋಕಿಯಾ 3.1 ಸ್ಮಾರ್ಟ್‌ಫೋನಿನಲ್ಲಿ 13 MP ಹಿಂಭಾಗದ ಕ್ಯಾಮೆರಾವನ್ನು ಕಾಣಬಹುದಾಗಿದ್ದು, LED ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ. ಮುಂಭಾಗದಲ್ಲಿ 8 MP ಕ್ಯಾಮೆರಾ ಅಳವಡಿಸಲಾಗಿದ್ದು, ಉತ್ತಮವಾಗಿ ಚಿತ್ರಗಳನ್ನು ಸೆರೆಹಿಡಿಯಲಿದೆ ಎನ್ನಲಾಗಿದೆ.


Click it and Unblock the Notifications



