ನೋಕಿಯಾ 3, 5 ಮತ್ತು 6 ಸ್ಮಾರ್ಟ್ ಫೋನ್ ಗಳು ಜೂನ್ ನಲ್ಲಿ ಮಾರುಕಟ್ಟೆಗೆ...!!

By: Precilla Dias

ಮೊಬೈಲ್ ಮಾರುಕಟ್ಟೆಗೆ ನೋಕಿಯಾ ಹಿಂತಿರುಗುತ್ತಿರುವ ವಿವಾರ ನಮಗೆ ತಿಳಿದಿರುವುದೇ, ಅಲ್ಲದೇ ನೋಕಿಯಾ ತನ್ನ ನೂತನ ಸ್ಮಾರ್ಟ್ ಫೋನುಗಳನ್ನು ಅನವಾರಣ ಮಾಡಿರುವುದು ತಿಳಿದಿದೆ. ನೋಕಿಯಾ 3,5,ಮತ್ತು 6 ಸ್ಮಾರ್ಟ್ ಫೋನ್ ಗಳನ್ನು ಈಗಾಗಲೇ ಪರಿಚಯಿಸಿದ್ದು, ಈ ಸ್ಮಾರ್ಟ್ ಫೋನ್ ಗಳು ಇದೇ ವರ್ಷದ ಎರಡನೇ ಭಾಗದಲ್ಲಿ ಮಾರುಕಟ್ಟೆಗೆ ಬರಲಿವೆ.

ನೋಕಿಯಾ 3, 5 ಮತ್ತು 6 ಸ್ಮಾರ್ಟ್ ಫೋನ್ ಗಳು ಜೂನ್ ನಲ್ಲಿ ಮಾರುಕಟ್ಟೆಗೆ...!!

ಮೊದಲಿಗೆ ಈ ಫೋನ್ ಗಳು ಯುಕೆಯಲ್ಲಿ ಬಿಡುಗಡೆಯಾಗಲಿದ್ದು, ಜೂನ್ ಮಾಸದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಮೇ ಅಂತ್ಯದಿಂದಲೇ ಮಾರುಕಟ್ಟೆಗೆ ನೋಕಿಯಾ ಫೋನುಗಳು ಬಂದರು ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ.

ಯುಕೆಯಲ್ಲಿ ಆನ್ ಲೈನ್ ಮೂಲಕ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಲು ನೋಕಿಯಾ ಮುಂದಾಗಿದ್ದು, ಮೊದಲಿಗೆ ನೋಕಿಯಾ 3310 ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಫೋನ್ ಗಳ ಕುರಿತಾದ ಮಾಹಿತಿ ಇಲ್ಲಿದೆ.
 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 3:

ನೋಕಿಯಾ 3:

ನೋಕಿಯಾ 3 ಸ್ಮಾರ್ಟ್ ಫೋನಿನಲ್ಲಿ 5 ಇಂಚಿನ ಡಿಸ್ ಪ್ಲೇ ಇದ್ದು, 720*1280 ರೆಸಲ್ಯೂಷನ್ ಹೊಂದಿದೆ. ಇದಲ್ಲಿ 1.3GHz ವೇಗದ ಕ್ವಾಟ್ ಕೋರ್ ಮಿಡಿಯಾ ಟೆಕ್ MT6737 ಪ್ರೋಸೆಸರ್, 2GB RAM, 16 GB ROM ಕಾಣಬಹುದಾಗಿದ್ದು, ಇದರೊಂದಿಗೆ 128GB ವರೆಗೂ ಮೆಮರಿಯನ್ನು ಹೆಚ್ಚಿಸಿಕೊಳ್ಳುವ ಎಸ್ ಡಿ ಕಾರ್ಡ್ ಸ್ಲಾಟ್ ನೀಡಲಾಗಿದೆ. ಅಲ್ಲದೇ ಈ ಫೋನಿನ ಹಿಂಭಾಗ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದು ಆಂಡ್ರಾಯ್ಡ್ 7.0ದಲ್ಲಿ ಕಾರ್ಯನಿರ್ವಹಿಸಲಿದ್ದು, 2659 mAh ಬ್ಯಾಟರಿ ಇದರಲ್ಲಿದೆ

ನೋಕಿಯಾ 5:

ನೋಕಿಯಾ 5:

ನೋಕಿಯಾ 5 ಸ್ಮಾರ್ಟ್ ಫೋನಿನಲ್ಲಿ 5.2 ಇಂಚಿನ ಡಿಸ್ ಪ್ಲೇಯನ್ನು ಅಳವಡಿಸಲಾಗಿದ್ದು, 2GB RAM, 16 ROM ಇದರಲ್ಲಿದ್ದು, ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಚಿಪ್ ಸೆಟ್ ಇದೆ. ಈ ಫೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾ ಹಾಗೂ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಆಂಡ್ರಾಯ್ಡ್ ನ್ಯೂಗಾ 7.1ನಲ್ಲಿ ಕಾರ್ಯಚರಣೆ ನಡೆಸಲಿದೆ.

ನೋಕಿಯಾ 6:

ನೋಕಿಯಾ 6:

ಈ ಸ್ಮಾರ್ಟ್ ಫೋನಿನಲ್ಲಿ 5.5 ಇಂಚಿನ FHD ಡಿಸ್ ಪ್ಲೇಯನ್ನು ಅಳವಡಿಸಲಾಗಿದ್ದು, 2.5D ಕರ್ವಡ್ ಗ್ಲಾಸ್ ಡಿಸ್ ಪ್ಲೇಯನ್ನು ನೀಡಲಾಗಿದೆ. ಅಲ್ಲದೇ ಇದಕ್ಕೆ ಗೊರಿಲ್ಲ ಗ್ಲಾಸ್ 3 ಸುರಕ್ಷೆ ಇದೆ.

ವೇಗವಾಗಿ ಕಾರ್ಯನಿರ್ವಹಿಸಲು ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಪ್ರೋಸೆರ್, 4GB RAM, 64GB ROM ಇದರಲ್ಲಿದೆ. ಅಲ್ಲದೇ ಹಿಂಭಾಗದಲ್ಲಿ 16 MP ಕ್ಯಾಮೆರಾ, ಮುಂಭಾಗದಲ್ಲಿ 8 MP ಕ್ಯಾಮೆರಾ ಇದೆ. ಅಲ್ಲದೇ 3,000 mAh ಬ್ಯಾಟರಿ ನೀಡಲಾಗಿದೆ.

ನೋಕಿಯಾ 3310:

ನೋಕಿಯಾ 3310:

ನೋಕಿಯಾ 3310 ಫೀಚರ್ ಫೋನಿನಲ್ಲಿ 2.4 ಇಂಚಿನ QVGA ಡಿಸ್ ಪ್ಲೇ ಅಳವಡಿಸಲಾಗಿದೆ. ಅಲ್ಲದೇ ಸಿರಿಸ್ 30+ನಲ್ಲಿ ಕಾರ್ಯನಿರ್ವಹಿಸಲಿದೆ. ಹಿಂಭಾಗದಲ್ಲಿ 2 MP ಕ್ಯಾಮೆರಾ ಇದೆ. ಅಲ್ಲದೇ ಮೈಕ್ರೋ ಎಸ್ ಡಿ ಕಾರ್ಡ್ ಹಾಕಿಕೊಳ್ಳಬಹುದಾಗಿದೆ. ಅಲ್ಲದೇ ಕ್ಲಾಸಿಕ್ ಸ್ನೇಕ್ ಗೇಮ್ ಮತ್ತೇ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There were rumors claiming that this new set of Nokia phones will be launched in the UK sometime in May. But as the date is nearing, now it looks like they have to wait for one more month to get this quality product in their hand.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot