Subscribe to Gizbot

ರೆಡ್‌ಮಿ, ಲಿನೋವೊ, ಮೊಟೊ ಗಳಿಗೆ ಭರ್ಜರಿ ಸ್ಪರ್ಧೆ ನೀಡುವ ನೋಕಿಯಾ 3 ಸ್ಮಾರ್ಟ್‌ಫೋನ್‌ ಅಚ್ಚರಿ ಬೆಲೆಗೆ ಮಾರಾಟ..!!

Written By:

ನೋಕಿಯಾ ಸ್ಮಾರ್ಟ್‌ಪೋನ್‌ಗಳಿಗೆ ಕಾಯುವಿಕೆ ಅಂತ್ಯಗೊಂಡಿದ್ದು, ಇಂದು ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಇಂದಿನಿಂದ ಮತ್ತೇ ಮಾರುಕಟ್ಟೆಯಲ್ಲಿ ನೋಕಿಯಾ ಶಕೆ ಆರಂಭವಾಗಲಿದೆ ಎಂದರೆ ತಪ್ಪಾಗುವುದಿಲ್ಲ.

ರೆಡ್‌ಮಿ, ಲಿನೋವೊ, ಮೊಟೊ ಗಳಿಗೆ ಭರ್ಜರಿ ಸ್ಪರ್ಧೆ ನೀಡುವ ನೋಕಿಯಾ 3

ನೋಕಿಯಾ ಪ್ರಾರಂಭದಲ್ಲಿ ಭರ್ಜರಿ ಎಂಟ್ರಿಯನ್ನು ಪಡೆದುಕೊಳ್ಳುವ ಸಲುವಾಗಿ ಮೂರು ವಿವಿಧ ದರ್ಜೆಯ ಸ್ಮಾರ್ಟ್‌ಫೋನ್‌ಗಳನ್ನು ಒಮ್ಮೆಗೆ ಲಾಂಚ್ ಮಾಡಿದೆ. ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ಬಜೆಟ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ನೋಕಿಯಾ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲಿದೆ. ಈ ಹಿನ್ನಲೆಯಲ್ಲಿ ನೋಕಿಯಾ 3 ಕುರಿತ ಮಾಹಿತಿ ಇಲ್ಲಿದೆ.

ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ ನೂತನ ಆಂಡ್ರಾಯ್ಡ್ ನ್ಯಾಗಾ ಇದ್ದು, 5 ಇಂಚಿನ HD ಡಿಸ್‌ಪ್ಲೇ ಜೊತೆಗೆ ರಕ್ಷಣೆಗಾಗಿ ಗೋರಿಲ್ಲ ಗ್ಲಾಸ್, ಮೀಡಿಯಾ ಟೆಕ್ ಕ್ವಾಡ್ ಕೋರ್ 1.3GHz ಪ್ರೋಸೆಸರ್, 2 GB RAM ಹಾಗೂ 16 GB ಆಂತರಿಕ ಮೆಮೊರಿ ಇದರಲ್ಲಿದೆ. 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ, ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 2650mAh ಬ್ಯಾಟರಿ ಇದೆ, 4G ಸಪೋರ್ಟ್ ಮಾಡಲಿದೆ.

ರೆಡ್‌ಮಿ, ಲಿನೋವೊ, ಮೊಟೊ ಗಳಿಗೆ ಭರ್ಜರಿ ಸ್ಪರ್ಧೆ ನೀಡುವ ನೋಕಿಯಾ 3

ನೋಕಿಯಾ 3 ಸ್ಮಾರ್ಟ್‌ಫೋನಿನಿಂದಾಗಿ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಹೊಡೆತ ಬಿಳುವ ಸಾಧ್ಯತೆ ಇದೆ. ಈ ಫೋನನ್ನು ನೋಕಿಯಾ ಕೇವಲ 9,499 ರೂಗಳಿಗೆ ಗ್ರಾಹಕರಿಗೆ ನೀಡಲು ಮುಂದಾಗಿದೆ. ಈ ಮೂಲಕ ಶಿಯೋಮಿ, ಮೈಕ್ರೋಮಾಕ್ಸ್, ಒಪ್ಪೋ, ವಿವೋ, ಮೊಟೊ, ಲಿನೊವೊ ಸ್ಮಾರ್ಟ್‌ಫೋನ್‌ಗಳಿಗೆ ಒಂದೇ ಹೊಡೆತದಲ್ಲಿ ಭಾರಿ ಸ್ಪರ್ಧೆಯನ್ನು ನೀಡಲು ಮುಂದಾಗಿದೆ.

ನೋಕಿಯಾ 3 ಕುರಿತ ಫಸ್ಟ್ ಲುಕ್ ವಿಡಿಯೋ ಇಲ್ಲಿದೇ ನೋಡಿ:

 

 

Read more about:
English summary
Nokia 3 has been targeted at those who are looking for a premium-looking handset at a budget. to know more visit kannada.gizbot.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot